Last Updated:
Kangana Ranaut: ನಟಿ ಕಂಗನಾ ರಣಾವತ್ ಹೇಳಿದ್ದೇನು? ಸಂಘಿಯಾಗ್ಬೇಕು ಎಂದ ನಟಿಯ ಮಾತುಗಳೇನು?
ಕಳೆದ ಕೆಲವು ದಿನಗಳಿಂದ ನಟಿ ಕಂಗನಾ (Kangana Ranaut) ಅವರು ತಮ್ಮ ಹೇಳಿಕೆಗಳ ಮೂಲಕ ಭಾರೀ ಚರ್ಚೆಗಳ ಕೇಂದ್ರ ಬಿಂದುವಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಹಳಷ್ಟು ಜನರು ನಟಿಯ ಹಳೆಯ ಬಾಲಿವುಡ್ ಟೈಮ್ನ ಪಾರ್ಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಹಳೆಯ ಪಾರ್ಟಿ ಮತ್ತು ಸಿನಿಮಾ ಪ್ರಚಾರದ ವೀಡಿಯೊಗಳನ್ನು ಹುಡುಕುತ್ತಿರುವವರಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ನಂಬಿಕೆಗಳನ್ನು ಬದಲಾಯಿಸುವ ಎಲ್ಲ ಹಕ್ಕು ತಮಗೆ ಇದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಕಂಗನಾ ಅವರು “ಎಚ್ಚರಗೊಂಡ” ಮತ್ತು “ಶಿಸ್ತಿನ” ಹಿಂದೂ ಆಗುವ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜನರು ಯಾವುದೇ ಧರ್ಮ ಅಥವಾ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ಸ್ವತಂತ್ರರಾಗಿರುವಂತೆಯೇ, ತನಗೂ ತನ್ನದೇ ಆದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಾಂವಿಧಾನಿಕ ಹಕ್ಕಿದೆ ಎಂದು ಹೇಳಿದರು.
ಸಮಾಜವು ಇತರರಲ್ಲಿ ಇದೇ ರೀತಿಯ ಬದಲಾವಣೆಗಳನ್ನು ಸ್ವೀಕರಿಸುವಾಗ ಆ ಆಯ್ಕೆಯನ್ನು ಪ್ರಶ್ನಿಸಬಾರದು ಎಂದು ವಾದಿಸಿದ್ದಾರೆ. ತಾನು ಸಂಘಿಯಾಗಿ “ಪರಿವರ್ತನೆ” ಹೊಂದಲು ಬಯಸುತ್ತೇನೆ ಎಂದು ನಟಿ ಹೇಳಿದರು.
ನಟಿ ತನ್ನ ಹಿಂದಿನ ಟೀಕೆಗಳ ವಿರುದ್ಧ ಏನೂ ಹೇಳುವುದಿಲ್ಲ ಎಂದು ಹೇಳಿದರು. ತನಗೆ ಬದಲಾಗುವ ಸ್ವಾತಂತ್ರ್ಯವೂ ಇರಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತ ಎಂದು ವಿವರಿಸಿದ್ದನ್ನು ತಾನು ಈಗ ಸ್ವೀಕರಿಸಲು ಬಯಸುತ್ತೇನೆ ಎಂದು ಕಂಗನಾ ಹೇಳಿದ್ದಾರೆ.
ತಮ್ಮ ಹಿಂದಿನ ಕಾಲದ ಬಗ್ಗೆ ತನ್ನನ್ನು ಜಡ್ಜ್ ಮಾಡದೆ ಹಿಂದೂ ಮಹಿಳೆಯರಿಗೆ ತಮ್ಮ ನಂಬಿಕೆಗಳನ್ನು ಬದಲಾಯಿಸುವ ಸ್ವಾತಂತ್ರ್ಯ ಇರಬೇಕು ಎಂದು ಹೇಳುವ ಮೂಲಕ ಕಂಗನಾ ರಣಾವತ್ ತಮ್ಮ ವೀಡಿಯೊವನ್ನು ಮುಗಿಸಿದರು.
ನಟನೆಯ ನಂತರ ರಾಜಕೀಯದಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿರುವ ಕಂಗನಾ, ಅಡುಗೆ ಮಾಡುವುದನ್ನು ಬಿಡಬೇಡಿ ಎಂದು ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.
ನಟಿ ಮತ್ತು ಸಂಸದೆ ಕಂಗನಾ ರಣಾವತ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದಾರೆ, ಅಡುಗೆ ಮಹಿಳೆಯರ ವಿಶೇಷ ಶಕ್ತಿ ಮತ್ತು ಅವರು ಅದನ್ನು ಎಂದಿಗೂ ಬಿಟ್ಟುಕೊಡಬಾರದು ಎಂದು ಬರೆದಿದ್ದಾರೆ.
ಅವರು ತಮ್ಮ ಸ್ಟೋರಿಯಲ್ಲಿ, “ಅಡುಗೆ ಕೇವಲ ಒಂದು ಕಲೆಯಲ್ಲ. ನಾವು ನಮ್ಮ ಕೈಗಳಿಂದ ಯಾರಿಗೋ ಬೇಕಾಗಿ ಅಡುಗೆ ಮಾಡುವಾಗ, ನಾವು ಆ ವ್ಯಕ್ತಿಗೆ ನಮ್ಮ ಶಕ್ತಿಯನ್ನು ಸಹ ನೀಡುತ್ತೇವೆ” ಎಂದು ಬರೆದಿದ್ದಾರೆ.
Bangalore [Bangalore],Bangalore,Karnataka
Aug 03, 2026 12:44 PM IST














