Salman Khan: ಗಣೇಶನಿಗೆ ಆರತಿ ವೇಳೆ ಸಲ್ಲು ಬಾಯ್ ಎಡವಟ್ಟು; ತಕ್ಷಣ ಸರಿಪಡಿಸಿದ ಸಹೋದರಿ, ವಿಡಿಯೋ ವೈರಲ್! | | ACTPnews

News18


Last Updated:

ಬಾಲಿವುಡ್ ನಟ ಸಲ್ಮಾನ್ ಖಾನ್ (Actor Salman Khan) ಕೂಡ ಕುಟುಂಬದೊಂದಿಗೆ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಗಣೇಶನಿಗೆ ಆರತಿ ಸಲ್ಲಿಸುವ ವೇಳೆ ಸಲ್ಮಾನ್ ಖಾನ್ ಮಾಡಿದ ಸಣ್ಣ ಯಡವಟ್ಟೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

News18
News18

ಗಣೇಶ ಚತುರ್ಥಿಯ ಸಂಭ್ರಮ ದೇಶಾದ್ಯಂತ ಮನೆಮಾಡಿರುವ ಬೆನ್ನಲ್ಲೇ ಬಾಲಿವುಡ್ ತಾರೆಯರೂ ಭಕ್ತಿಭಾವದಿಂದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ (Actor Salman Khan) ಕೂಡ ಕುಟುಂಬದೊಂದಿಗೆ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಗಣೇಶನಿಗೆ ಆರತಿ ಸಲ್ಲಿಸುವ ವೇಳೆ ಸಲ್ಮಾನ್ ಖಾನ್ ಮಾಡಿದ ಸಣ್ಣ ಯಡವಟ್ಟೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಸಲ್ಮಾನ್ ಖಾನ್ ತಮ್ಮ ಸಹೋದರ ಸೋಹೇಲ್ ಖಾನ್ ನಿವಾಸದಲ್ಲಿ ನಡೆದ ಗಣಪತಿ ವಿಸರ್ಜನೆ ಹಾಗೂ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಕೂಡ ಆರತಿ ತಟ್ಟೆಯನ್ನು ಹಿಡಿದು ಗಣೇಶನಿಗೆ ಆರತಿ ಎತ್ತಲು ಮುಂದಾದರು.

ಆದರೆ ಆರತಿ ಮಾಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ತಟ್ಟೆಯನ್ನು ತಪ್ಪು ದಿಕ್ಕಿನಲ್ಲಿ ತಿರುಗಿಸಲು ಆರಂಭಿಸಿದರು. ಇದನ್ನು ಗಮನಿಸಿದ ಕಿರಿಯ ಸಹೋದರಿ ಅರ್ಪಿತಾ ಖಾನ್ ಶರ್ಮಾ ತಕ್ಷಣವೇ ಸಲ್ಮಾನ್ ಅವರ ಗಮನ ಸೆಳೆದಿದ್ದಾರೆ. ಯಾವುದೇ ಗೊಂದಲವಾಗದಂತೆ ಕೈ ಸನ್ನೆ ಮೂಲಕ ಸರಿಯಾದ ದಿಕ್ಕನ್ನು ತೋರಿಸಿಕೊಟ್ಟಿದ್ದಾರೆ.

ತಂಗಿಯ ಮಾತು ಕೇಳಿದ ಸಲ್ಲು ಬಾಯ್

ಅರ್ಪಿತಾ ಖಾನ್ ಶರ್ಮಾ ನೀಡಿದ ಸೂಚನೆಯನ್ನು ಸಲ್ಮಾನ್ ಖಾನ್ ಕೂಡ ತಕ್ಷಣ ಅರ್ಥಮಾಡಿಕೊಂಡಿದ್ದಾರೆ. ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಅವರು ಸರಿಯಾದ ರೀತಿಯಲ್ಲಿ ಆರತಿ ಮುಂದುವರಿಸಿದ್ದಾರೆ. ಈ ವೇಳೆ ಸಹೋದರ-ಸಹೋದರಿಯ ನಡುವಿನ ಆತ್ಮೀಯ ಬಾಂಧವ್ಯವೂ ಗಮನ ಸೆಳೆದಿದೆ.

ಇದನ್ನೂ ಓದಿ: Vijay Sethupathi: ವಿಜಯ್ ಸೇತುಪತಿಯ ‘ಮಹಾರಾಜ’ ಹಾಲಿವುಡ್‌ನಲ್ಲಿ ರಿಮೇಕ್; ಇಲ್ಲಿದೆ ಹೊಸ ಅಪ್‌ಡೇಟ್

ವಿಡಿಯೋದಲ್ಲಿ ಸಲ್ಮಾನ್ ಖಾನ್ ನಂತರ ತಮ್ಮ ಪುಟ್ಟ ಸೊಸೆಗೂ ಆರತಿ ಎತ್ತುವ ಸರಿಯಾದ ಕ್ರಮವನ್ನು ವಿವರಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದೆ. ಸಾಮಾನ್ಯವಾಗಿ ದೊಡ್ಡ ಪರದೆಯ ಮೇಲೆ ಸ್ಟಾರ್ ಆಗಿ ಕಾಣಿಸಿಕೊಳ್ಳುವ ಸಲ್ಮಾನ್ ಖಾನ್ ಕುಟುಂಬದ ಧಾರ್ಮಿಕ ಕಾರ್ಯಕ್ರಮದಲ್ಲಿ ಸರಳವಾಗಿ ಕಾಣಿಸಿಕೊಂಡಿರುವುದು ಕೂಡ ನೆಟ್ಟಿಗರ ಗಮನ ಸೆಳೆದಿದೆ.

ಸಲ್ಮಾನ್ ಖಾನ್ ಆರತಿ ವೇಳೆ ನಡೆದ ಈ ಸಣ್ಣ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣನಿಗೆ ತಂಗಿ ಸರಿಯಾದ ರೀತಿಯಲ್ಲಿ ಆರತಿ ಮಾಡುವುದನ್ನು ತೋರಿಸಿಕೊಟ್ಟಿರುವುದು ಮುದ್ದಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಕ್ಯಾಶುಯಲ್ ಲುಕ್‌ನಲ್ಲಿ ಮಿಂಚಿದ ಸಲ್ಮಾನ್

ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಕಪ್ಪು ಬಣ್ಣದ ಟೀ ಶರ್ಟ್, ಜ್ಯಾಕೆಟ್ ಹಾಗೂ ಕ್ಯಾಪ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಆಗಮಿಸಿದ್ದರು. ಮತ್ತೊಂದೆಡೆ ಅರ್ಪಿತಾ ಖಾನ್ ಶರ್ಮಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.

ಸಲ್ಮಾನ್ ಖಾನ್ ಮುಂದಿನ ಸಿನಿಮಾಗಳು

ಸಿನಿಮಾ ವಿಚಾರಕ್ಕೆ ಬಂದರೆ ಸಲ್ಮಾನ್ ಖಾನ್ ಸದ್ಯ ಹಲವು ಮಹತ್ವದ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಅಪೂರ್ವ ಲಖಿಯಾ ಅವರ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ.

ಇದರ ಜೊತೆಗೆ ನಿರ್ಮಾಪಕ ದಿಲ್ ರಾಜು ಮತ್ತು ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲೂ ಸಲ್ಮಾನ್ ಖಾನ್ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸಿನಿಮಾ ಕೆಲಸಗಳ ನಡುವೆಯೂ ಕುಟುಂಬದೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿರುವ ಸಲ್ಮಾನ್ ಖಾನ್ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports