Crime News: ಭೂ ವಿವಾದ ಕುರಿತು ಗಲಾಟೆ, ತನ್ನ ಮಗನನ್ನೇ ಗುಂಡು ಹಾರಿಸಿ ಕೊಂದ ತಂದೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ

Last Updated:

ಮೃತನ ಪತ್ನಿ ಜಶ್ನ್‌ದೀಪ್ ಕೌರ್ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಮಾವ ಸೇರಿದಂತೆ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ಜಸ್ವಂತ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕೌರ್ ಹೇಳಿದ್ದಾರೆ. ತನ್ನ ಪತಿಗೆ ಗಂಭೀರ ಗುಂಡು ತಗುಲಿ ನಂತರ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿರ್ಸಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ (Crime News) ಹರಿಯಾಣದ ಕಲನ್ವಾಲಿ ಸಿರ್ಸಾದ ಖೋಖರ್ ಗ್ರಾಮದಲ್ಲಿ ನಡೆದಿದೆ.

ಆ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ತನ್ನ ಮಗನ ಮನೆಗೆ ನುಗ್ಗಿ ಗುಂಡು ಹಾರಿಸಿ ಕೊಂದಿದ್ದಾನೆ. ಮೃತನನ್ನು ಖೋಖರ್ ಗ್ರಾಮದ ಜಸ್ವಂತ್ ಸಿಂಗ್ ಎಂದು ಗುರುತಿಸಲಾಗಿದ್ದು, ಜಲವಿಂದರ್ ಸಿಂಗ್ ಆತನ ಮೇಲೆ ಗುಂಡು ಹಾರಿಸಿದ್ದಾನೆ.

ಮೃತನ ಪತ್ನಿ ಜಶ್ನ್‌ದೀಪ್ ಕೌರ್ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಮಾವ ಸೇರಿದಂತೆ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ಜಸ್ವಂತ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕೌರ್ ಹೇಳಿದ್ದಾರೆ. ತನ್ನ ಪತಿಗೆ ಗಂಭೀರ ಗುಂಡು ತಗುಲಿ ನಂತರ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಕಲನ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ದೇವಿ ಲಾಲ್ ಮಾತನಾಡಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ‘ಮೃತನ ಪತ್ನಿಯ ಹೇಳಿಕೆಗಳ ಆಧಾರದ ಮೇಲೆ ನಾವು ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದೇವೆ. ಭೂ ವಿವಾದ ಸೇರಿದಂತೆ ಅಪರಾಧದ ಹಿಂದಿನ ಇತರ ಕಾರಣಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಲಾಲ್ ಹೇಳಿದರು.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports