Varun Chakravarthy: ಏಷ್ಯನ್​ ಗೇಮ್ಸ್​​ನಿಂದ ವರುಣ್ ಚಕ್ರವರ್ತಿ ಔಟ್! ಪದಾರ್ಪಣೆಯೇ ಮಾಡದ 22 ವರ್ಷದ ಯುವ ಬೌಲರ್​ಗೆ ಅವಕಾಶ ನೀಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews

ವರುಣ್ ಚಕ್ರವರ್ತಿ (PTI Photo)


Last Updated:

ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದ ವೇಳೆ 35 ವರ್ಷದ ಅನುಭವಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡಿದ್ದರು. ಈ ಹಿಂದೆ ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಅವರಿಗೆ, ಮೊದಲ ಪಂದ್ಯದ ನಂತರ ಮತ್ತೆ ನೋವು ಕಾಣಿಸಿಕೊಂಡಿತ್ತು.

ವರುಣ್ ಚಕ್ರವರ್ತಿ (PTI Photo)
ವರುಣ್ ಚಕ್ರವರ್ತಿ (PTI Photo)

ಮುಂಬರುವ ಏಷ್ಯನ್ ಗೇಮ್ಸ್ 2026 (Asia Games) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ (Team India) ಭಾರಿ ಆಘಾತ ಎದುರಾಗಿದೆ. ತಂಡದ ಅನುಭವಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಅವರು ಸ್ನಾಯು ಸೆಳೆತದ (Side Strain)   ಸಮಸ್ಯೆಯಿಂದಾಗಿ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯುವ ಲೆಗ್ ಸ್ಪಿನ್ ಆಲ್‌ರೌಂಡರ್ ವಿಪ್ರಾಜ್ ನಿಗಮ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 19 ರಿಂದ ಜಪಾನ್‌ನ ಐಚಿ-ನಗೋಯಾದಲ್ಲಿ ಏಷ್ಯನ್ ಗೇಮ್ಸ್ ಅಧಿಕೃತವಾಗಿ ಆರಂಭವಾಗಲಿದ್ದು, ಪುರುಷರ ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 24 ರಿಂದ ಶುರುವಾಗಲಿವೆ. ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ ಚಕ್ರವರ್ತಿ

ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದ ವೇಳೆ 35 ವರ್ಷದ ಅನುಭವಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡಿದ್ದರು. ಈ ಹಿಂದೆ ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಅವರಿಗೆ, ಮೊದಲ ಪಂದ್ಯದ ನಂತರ ಮತ್ತೆ ನೋವು ಕಾಣಿಸಿಕೊಂಡಿತ್ತು. ಹೆಚ್ಚಿನ ತಪಾಸಣೆಗಾಗಿ ಅವರನ್ನು ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ಗೆ ಕಳುಹಿಸಲಾಗಿದ್ದು, ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಲು ಇನ್ನು ಹೆಚ್ಚಿನ ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.

ಕುಲದೀಪ್ ಬದಲಿಗೆ ನಿಗಮ್‌ಗೆ ಒಲಿದ ಅದೃಷ್ಟ

ಬಿಸಿಸಿಐ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ವರುಣ್ ಚಕ್ರವರ್ತಿ ಅವರ ಸ್ಥಾನಕ್ಕೆ ವಿಪ್ರಾಜ್ ನಿಗಮ್ ಮತ್ತು ಕುಲದೀಪ್ ಯಾದವ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಕುಲದೀಪ್ ಯಾದವ್ ಈ ತಿಂಗಳ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ (ODI) ಸರಣಿಗೆ ಲಭ್ಯವಿರಬೇಕಾದ ಕಾರಣ, ಯುವ ಆಟಗಾರ ವಿಪ್ರಾಜ್ ನಿಗಮ್ ಅವರಿಗೆ ಏಷ್ಯನ್ ಗೇಮ್ಸ್ ತಂಡದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಐಪಿಎಲ್ ಅಂಕಿ ಅಂಶ

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುವ 22 ವರ್ಷದ ವಿಪ್ರಾಜ್ ನಿಗಮ್ ಇದುವರೆಗೆ 19 ಐಪಿಎಲ್ ಪಂದ್ಯಗಳನ್ನು ಆಡಿ 13 ವಿಕೆಟ್ ಪಡೆದಿದ್ದಾರೆ. ಕೇವಲ ಬೌಲಿಂಗ್ ಮಾತ್ರವಲ್ಲದೆ, ಕೆಳ ಕ್ರಮಾಂಕದಲ್ಲಿ ಬಂದು 176 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ದೊಡ್ಡ ಶಾಟ್‌ಗಳನ್ನು ಹೊಡೆಯುವ ಸಾಮರ್ಥ್ಯವನ್ನೂ ಅವರು ಹೊಂದಿದ್ದಾರೆ. ಇವರ ಆಲ್‌ರೌಂಡ್ ಪ್ರದರ್ಶನವು ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡಕ್ಕೆ ನೆರವಾಗುವ ನಿರೀಕ್ಷೆಯಿದೆ.

ಭಾರತ ಪುರುಷರ ಕ್ರಿಕೆಟ್ ತಂಡ

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವೈಭವ್ ಸೂರ್ಯವಂಶಿ, ಜಸ್‌ಪ್ರೀತ್ ಬುಮ್ರಾ, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಯಶ್ ಠಾಕೂರ್ ಮತ್ತು ವಿಪ್ರಾಜ್ ನಿಗಮ್.

ಏಷ್ಯನ್ ಗೇಮ್ಸ್​ನಲ್ಲಿ ಭಾರತದ ವೇಳಾಪಟ್ಟಿ

ಸೆಪ್ಟೆಂಬರ್ 28, ಸೋಮವಾರ : ಭಾರತ vs ‘ಎ’ ಗುಂಪಿನಲ್ಲಿ ರನ್ನರ್-ಅಪ್ ಆಗುವ ತಂಡ (ಕ್ವಾರ್ಟರ್ ಫೈನಲ್ ಪಂದ್ಯ)

ಅಕ್ಟೋಬರ್ 1, ಗುರುವಾರ: ಸೆಮಿಫೈನಲ್ ಪಂದ್ಯ (ಭಾರತ ಅರ್ಹತೆ ಪಡೆದರೆ)

ಅಕ್ಟೋಬರ್ 3, ಶನಿವಾರ: ಕಂಚಿನ ಪದಕ ಮತ್ತು ಫೈನಲ್ ಪಂದ್ಯಗಳು (ಭಾರತ ಅರ್ಹತೆ ಪಡೆದರೆ)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports