Last Updated:
Salman Khan: ಬಾಲಿವುಡ್ನ ಭಾಯಿಜಾನ್ ಬಿಜೆಪಿ ಸೇರಲಿದ್ದಾರಾ? ಕಮಲದ ಕೈ ಹಿಡಿಯುತ್ತಾರಾ ಖ್ಯಾತ ಸ್ಟಾರ್ ನಟ?
ಬಾಲಿವುಡ್ನ (Bollywood) ಭಾಯಿಜಾನ್ ಬಿಜೆಪಿ ಸೇರುತ್ತಾರಾ? ಕಮಲದ ಕೈ ಹಿಡಿಯಲಿದ್ದಾರಾ ಹಿಂದಿ ಚಿತ್ರೋದ್ಯಮದ ಬಿಗ್ ಸ್ಟಾರ್? ಹೀಗೊಂದು ಪ್ರಶ್ನೆ ಮೂಡೋದಿಕ್ಕೆ ಏನು ಕಾರಣ ಗೊತ್ತಾ? ದಿಢೀರ್ ಸಲ್ಮಾನ್ ಖಾನ್ (Salman Khan) ಭೇಟಿ ಮಾಡಿದ್ಯಾರನ್ನು? ಯಾಕೆ? ಕಾರಣ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್ಡೇಟ್.
ಸಲ್ಮಾನ್ ಖಾನ್ ಇತ್ತೀಚೆಗೆ ಬಿಜಿಪಿ ಪಕ್ಷದ ಯುವ ಮೋರ್ಚಾದ ಖಜಾಂಚಿ ಪಿಎಂ ಸಾಯಿ ಪ್ರಸಾದ್ ಹಾಗೂ ಅವರ ಪತ್ನಿಯನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು.
ಸಲ್ಲು ಮನೆಯಲ್ಲಿ ಡಿನ್ನರ್ ಅಂದ್ರೆ ಖಂಡಿತಾ ವಿಶೇಷ ಇದ್ದೇ ಇರುತ್ತದೆ. ತಮ್ಮ ಮುಂಬೈ ಮನೆಗೆ ಬಿಜೆಪಿ ಮುಖಂಡ ಹಾಗೂ ಪತ್ನಿಯನ್ನು ಊಟಕ್ಕೆ ಆಹ್ವಾನಿಸಿದ್ದರು ಸಲ್ಮಾನ್ ಖಾನ್. ಪ್ರಸಾದ್ ಅವರು ನಂತರ ಭಾಯ್ ಜಾನ್ ಜೊತೆಗಿನ ವಿಶೇಷ ಸಂಜೆಯ ವಿಡಿಯೋವನ್ನು ಶೇರ್ ಮಾಡಿ ಅವರ ಸರಳತೆ ಹಾಗೂ ಪ್ರೀತಿಯನ್ನು ಕೊಂಡಾಡಿರುವ ಘಟನೆ ನಡೆದಿದೆ.
ಈ ಒಂದು ಭೇಟಿಯ ಮೂಲಕ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಅವರ ಮನೆಯ ಒಂದು ಲುಕ್ ಕೂಡಾ ನೋಡೋಕೆ ಸಿಕ್ಕಿದೆ. ಪ್ರಸಾದ್ ಅವರು ಪತ್ನಿಯ ಜೊತೆ ಸಲ್ಮಾನ್ ಖಾನ್ ಅವರ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಯುವ ಬಿಜೆಪಿ ಖಜಾಂಚಿ ಪ್ರಸಾದ್ ಅವರು ಸಲ್ಮಾನ್ ಖಾನ್ಗೆ ಥ್ಯಾಂಕ್ಸ್ ಹೇಳಿ ಈ ಸಂಜೆ ಮರೆಯಲಾಗದ್ದು ಎಂದು ವರ್ಣಿಸಿದ್ದಾರೆ.
ಸುಂದರವಾದ ಸತ್ಕಾರದ ಜೊತೆಗೆ ಅದ್ಭುತ ಮಾತುಕತೆ ಇದ್ದಂತಹದ ಮರೆಯಲಾಗದ ಸಂಜೆ. ನನಗೂ ನನ್ನ ಪತ್ನಿಗೂ ನಿಮ್ಮ ಮನೆಯಲ್ಲಿ ಡಿನ್ನರ್ ಆಯೋಜಿಸಿದ್ದಕ್ಕೆ ಥ್ಯಾಂಕ್ ಯೂ ಸಲ್ಮಾನ್ ಖಾನ್ ಭಾಯ್. ನಿಮ್ಮ ಸರಳತೆ ಹಾಗೂ ಪ್ರೀತಿಗೆ ಅಭಾರಿ ಎಂದು ಪ್ರಸಾದ್ ಬರೆದಿದ್ದಾರೆ.
ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಖಜಾಂಚಿಯಾಗಿ ಸಾಯಿ ಪ್ರಸಾದ್ ಕೆಲಸ ಮಾಡುತ್ತಾರೆ. ಪ್ರಸಾದ್ ಅವರ ವಿಡಿಯೋ ಮೂಲಕ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ನಟನ ಮನೆಯೊಳಗಿನ ಲುಕ್ ಸಿಕ್ಕಿದೆ, ಬಹಳಷ್ಟು ಅಭಿಮಾನಿಗಳು ಈ ವಿಡಿಯೋಗೆ ಹಾರ್ಟ್ ಎಮೋಜಿ ಮೂಲಕ ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು ಸದ್ಯ ಸಿನಿಮಾಗಳಲ್ಲಿ ಹಾಗೂ ಬಿಗ್ಬಾಸ್ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಬಿಗ್ಬಾಸ್ 20 ನಡೆಸಿಕೊಡುತ್ತಿದ್ದಾರೆ.
ಅರ್ಬಾಜ್ ಖಾನ್ ಹಾಗೂ ಶುರಾ ಖಾನ್ ಅವರ ಮಗಳು ಸಿಪಾರಾಳ ಬರ್ತ್ಡೇ ಸೆಲೆಬ್ರೇಷನ್ಗೆ ಇತ್ತೀಚೆಗೆ ಭಾಯ್ ಕುಟುಂಬ ಒಂದಾಗಿ ಸೇರಿದ್ದರು. ಸಲೀಮ್ ಖಾನ್ ಅವರು ಪತ್ನಿ ಸಲ್ಮಾ ಖಾನ್ ಅವರೊಂದಿಗೆ ಬಂದರು. ಸಲ್ಮಾನ್ ಖಾನ್ ಕೂಡಾ ಭಾಗಿಯಾಗಿದ್ದರು.














