BJP MLA: ಬಿಜೆಪಿ ಶಾಸಕಿ ನಿಧನ! ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬಿಜೆಪಿ ಶಾಸಕಿ ನಿಧನ


Last Updated:

BJP MLA: 56 ವರ್ಷದ ಬಿಜೆಪಿ ಶಾಸಕಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕಿ ನಿಧನ
ಬಿಜೆಪಿ ಶಾಸಕಿ ನಿಧನ

ಪಣಜಿ: ಬಿಜೆಪಿ ಶಾಸಕಿ (BJP MLA) ಜೆನ್ನಿಫರ್ ಮಾನ್ಸೆರೇಟ್ (Jennifer Monseratte) ಕೊನೆಯುಸಿರೆಳೆದಿದ್ದಾರೆ. ಗೋವಾ ಸರ್ಕಾರದ (Goa government) ಮಾಜಿ ರಾಜ್ಯ ಕ್ಯಾಬಿನೆಟ್ ಸಚಿವೆಯೂ (former state cabinet minister) ಆಗಿದ್ದ ಜೆನ್ನಿಫರ್ ಮಾನ್ಸೆರೇಟ್, ತಮ್ಮ 56ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜೆನ್ನಿಫರ್ ಮಾನ್ಸೆರೇಟ್ ದೀರ್ಘಕಾಲ ಅನಾರೋಗ್ಯದಿಂದ (long term illness) ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ (hospital) ಚಿಕಿತ್ಸೆ ಪಡೆಯುತ್ತಿದ್ದ ಜೆನ್ನಿಫರ್, ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕಿ ನಿಧನಕ್ಕೆ ಸಿಎಂ ಪ್ರಮೋದ್ ಸಾವಂತ್ ಸಂತಾಪ

ಜೆನ್ನಿಫರ್ ಮಾನ್ಸೆರೇಟ್ ಅವರು ಉತ್ತರ ಗೋವಾ ಜಿಲ್ಲೆಯ ತಲೀಗಾವೊ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2012ರಿಂದ ಗೆಲುವು ಸಾಧಿಸುತ್ತಾ, ಮೂರು ಬಾರಿ ಅದೇ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆದ್ದು, ಶಾಸಕಿಯಾಗಿದ್ದರು. ಇನ್ನು ತಮ್ಮ ಪಕ್ಷದ ಸಹೋದ್ಯೋಗಿಯ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದುಃಖ ವ್ಯಕ್ತಪಡಿಸಿದ್ದಾರೆ.

ಶಾಸಕಿಯ ಪತಿ ಸಚಿವ, ಮಗ ಪಣಜಿ ಮೇಯರ್

ಶಾಸಕಿ ಮಾನ್ಸೆರಾಟೆ ಅವರ ಪತಿ ಅಟನಾಸಿಯೊ ಮಾನ್ಸೆರಾಟೆ ಪ್ರಸ್ತುತ ಪ್ರಮೋದ್ ಸಾವಂತ್ ಸಂಪುಟದ ಗೋವಾ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇನ್ನು ಈ ದಂಪತಿಯ ಮಗ ರೋಹಿತ್ ಮಾನ್ಸೆರಾಟೆ ಪಣಜಿ ನಗರ ಪಾಲಿಕೆಯ ಮೇಯರ್ ಆಗಿದ್ದಾರೆ.

3 ಬಾರಿ ಶಾಸಕಿ, ಒಂದು ಬಾರಿ ಸಚಿವೆಯಾಗಿದ್ದ ಜೆನ್ನಿಫರ್

ಜೆನ್ನಿಫರ್ ಮಾನ್ಸೆರೇಟ್ ಅವರು 2012 ರಿಂದ ತಲೈಗಾವೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೂರು ಅವಧಿಗೆ ಅಲ್ಲಿಂದಲೇ ಶಾಸಕಿಯಾಗಿ ಗೆದ್ದು, ಗೋವಾ ವಿಧಾನಸಭೆ ಪ್ರವೇಶಿಸಿದ್ದರು. ಈ ಹಿಂದೆ ಜುಲೈ 2019 ರಲ್ಲಿ, ಅವರು ಗೋವಾ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡರು ಮತ್ತು ಕಂದಾಯ, ಮಾಹಿತಿ ತಂತ್ರಜ್ಞಾನ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗಳ ಉಸ್ತುವಾರಿ ವಹಿಸಿಕೊಂಡರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಶಾಸಕಿ

2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ 10 ಕಾಂಗ್ರೆಸ್ ಶಾಸಕರಲ್ಲಿ ಅವರು ಒಬ್ಬರು. ಅವರು ತಮ್ಮ ಪತಿ ಅಟನಾಸಿಯೊ ಮಾನ್ಸೆರಾಟೆ ಜೊತೆ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿದ್ದರು. ಆಗ ಮೊದಲ ಬಾರಿಗೆ ಸಚಿವೆಯಾಗಿ ಕೆಲಸ ಮಾಡಿದ್ದರು. ಅವರು 2022 ರ ಗೋವಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದರು.

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕಿ

ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜೆನ್ನಿಫರ್ ಮಾನ್ಸೆರೇಟ್, ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದರು. ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಶಾಸಕಿ ಜೆನ್ನಿಫರ್ ಮಾನ್ಸೆರೇಟ್ ನಿಧನರಾಗಿದ್ದಾರೆ.

ಜೆನ್ನಿಫರ್ ಮಾನ್ಸೆರೇಟ್ ನಿಧನಕ್ಕೆ ಗೋವಾ ಸಿಎಂ ಸಂತಾಪ

ಇನ್ನು ಜೆನ್ನಿಫರ್ ಮಾನ್ಸೆರೇಟ್ ನಿಧನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಕಂಬನಿ ಮಿಡಿದಿದ್ದಾರೆ. ತಲೈಗಾವೊ ಶಾಸಕಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವೆ ಶ್ರೀಮತಿ ಜೆನ್ನಿಫರ್ ಮಾನ್ಸೆರೇಟ್ ಅವರ ನಿಧನದಿಂದ ತೀವ್ರ ನೋವುಂಟಾಗಿದೆ ಎಂದು ಸಿಎಂ ಪ್ರಮೋದ ಸಾವಂತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಹಾನುಭೂತಿಯಿಂದ ಸೇವೆ ಸಲ್ಲಿಸಿದ್ದ ಶಾಸಕಿ

ತಲೈಗಾವೊದ ಮೊದಲ ಮಹಿಳಾ ಶಾಸಕಿಯಾಗಿ ಮತ್ತು ಮೂರು ಅವಧಿಗೆ ಶಾಸಕಿಯಾಗಿ, ಅವರು ತಮ್ಮ ಕ್ಷೇತ್ರ ಮತ್ತು ಗೋವಾದ ಜನರಿಗೆ ಸಮರ್ಪಣಾಭಾವ ಮತ್ತು ಸಹಾನುಭೂತಿಯಿಂದ ಸೇವೆ ಸಲ್ಲಿಸಿದ್ದರು ಅಂತ ಪ್ರಮೋದ್ ಸಾವಂತ್ ಹೇಳಿದ್ದಾರೆ. ಈ ದುಃಖದ ಸಮಯದಲ್ಲಿ ಕುಟುಂಬಕ್ಕೆ ಮತ್ತು ಅವರ ಅಸಂಖ್ಯಾತ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಜೆನ್ನಿಫರ್ ಮಾನ್ಸೆರೇಟ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಮೋದ್ ಸಾವಂತ್ ಟ್ವೀಟ್ ನಲ್ಲಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed