Last Updated:
ಒಂಬತ್ತು ಉಕ್ರೇನಿಯನ್ ನಗರಗಳಲ್ಲಿನ ಕೈಗಾರಿಕಾ ತಾಣಗಳು, ತೈಲ ಸಂಸ್ಕರಣಾಗಾರಗಳು ಮತ್ತು ಬಂದರುಗಳನ್ನು ಗುರಿಯಾಗಿಸಿಕೊಂಡು ಭಾರೀ ದಾಳಿಗಳನ್ನು ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ (Russian Defence Ministry) ಘೋಷಿಸಿದೆ.
ರಷ್ಯಾ ಮತ್ತು ಉಕ್ರೇನ್ (Ukraine and Russia War) ನಡುವಿನ ಉದ್ವಿಗ್ನತೆ ಹೊಸ ಉತ್ತುಂಗಕ್ಕೇರಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯವರೆಗೆ ರಷ್ಯಾದ ಪಡೆಗಳು ಉಕ್ರೇನಿಯನ್ ನಗರಗಳ ಮೇಲೆ ಭೀಕರ ದಾಳಿ ನಡೆಸಿವೆ. ರಾಜಧಾನಿ ಕೀವ್ ಸುತ್ತಲೂ ಬೃಹತ್ ಸ್ಫೋಟಗಳು ನಡೆದಿವೆ. ಒಂಬತ್ತು ಉಕ್ರೇನಿಯನ್ ನಗರಗಳಲ್ಲಿನ ಕೈಗಾರಿಕಾ ತಾಣಗಳು, ತೈಲ ಸಂಸ್ಕರಣಾಗಾರಗಳು ಮತ್ತು ಬಂದರುಗಳನ್ನು ಗುರಿಯಾಗಿಸಿಕೊಂಡು ಭಾರೀ ದಾಳಿಗಳನ್ನು ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ (Russian Defence Ministry) ಘೋಷಿಸಿದೆ. ಆದರೆ, ಈ ದಾಳಿಯಲ್ಲಿ ಕೇವಲ ಕೈಗಾರಿಕಾ ಪ್ರದೇಶಗಳ ಮೇಲೆ ಮಾತ್ರ ನಡೆದಿಲ್ಲ, ವಸತಿ ಪ್ರದೇಶಗಳು ಕೂಡ ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ.














