Rishab Shetty: 4 ವರ್ಷಗಳ ನಂತರ ಬೆಂಗಳೂರಿಗೆ ವಾಪಸ್ ಬಂದ ಡಿವೈನ್ ಸ್ಟಾರ್! ರಿಷಬ್ ಪ್ಲಾನ್ ಏನು? | Rishab Shetty moves to Bangalore after 4 years | | ACTPnews

ರಿಷಬ್


Last Updated:

Rishab Shetty : ಡಿವೈನ್ ಸ್ಟಾರ್ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಖ್ಯಾತ ನಟ 4 ವರ್ಷಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿಲ್ಲ. ಇದೀಗ ಸಿಲಿಕಾನ್ ಸಿಟಿಗೆ ವಾಪಸ್ ಬಂದಿದ್ದಾರೆ.

ರಿಷಬ್
ರಿಷಬ್

ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿರುವ ಖ್ಯಾತ ನಟ ರಿಷಬ್ ಶೆಟ್ಟಿ (Rishab Shetty) ಅವರು ನಾಲ್ಕು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಅರ್ ಅರ್ ನಗರದಲ್ಲಿ ಮನೆ ಹಾಗೂ ಅಫೀಸ್ (Office) ಮಾಡಿರುವ ರಿಷಬ್ ಶೆಟ್ಟಿ ಅವರು ಕಾಂತಾರ 1 ಶುರು ಆಗುವ ಬೆನ್ನಲ್ಲೆ ಬೆಂಗಳೂರು ಬಿಟ್ಟು ಕುಂದಾಪುರ ಸೇರಿದ್ದರು.

ಕಾಂತಾರ ಸಿನಿಮಾಗಾಗಿ ನಾಲ್ಕು ವರ್ಷಗಳ ಕಾಲ ಬೆಂಗಳೂರು ಬಿಟ್ಟಿದ್ದ ರಿಷಬ್ ಶೆಟ್ಟಿ ಅವರು ಫ್ಯಾಮಿಲಿ ಸಮೇತ ಕುಂದಾಪುರಕ್ಕೆ ಶಿಫ್ಟ್ ಆಗಿದ್ದರು. ಕುಂದಾಪುರದಲ್ಲೇ ಮಕ್ಕಳನ್ನು ಶಾಲೆಗೆ ಸೇರಿಸಿದ್ದರು.

ಕಾಂತಾರ 2 ಸಕ್ಸಸ್ ಬಳಿಕ ಮತ್ತೆ ಬೆಂಗಳೂರು ಕಡೆಗೆ ಬಂದಿದ್ದಾರೆ. ಸದ್ಯ ಜೈ ಹನುಮಾನ್ ಚಿತ್ರದಲ್ಲಿ ಬ್ಯುಸಿಯಾಗಿರುವ ರಿಷಬ್ ಅವರು ನಟನೆ‌ ಜೊತೆಗೆ ನಿರ್ಮಾಣದ ಪ್ಲಾನ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಫಿಲಂಸ್ ನಲ್ಲಿ ನವ ನಿರ್ದೇಶಕರು, ನಟರಿಗೆ ವೇದಿಕೆ ಕೊಡಲು ರಿಷಬ್ ಪ್ಲಾನ್ ಮಾಡಿದ್ದು ರಿಷಬ್ ಶೆಟ್ಟಿ ಫಿಲಂಸದ ನಲ್ಲಿ ಇದೇ ವರ್ಷ 3-4 ಸಿನಿಮಾ ಪ್ಲಾನ್ ಮಾಡಲಾಗಿದೆ.

ರಿಷಬ್ ಶೆಟ್ಟಿ ಹೊಸ ವರ್ಷದ ದಿನ ಅಭಿಮಾನಿಗಳ ಮುಂದೆ ಒಂದು ಗುಡ್ ನ್ಯೂಸನ್ನ ಹಂಚಿಕೊಂಡಿದ್ದಾರೆ. ಕಾಂತಾರ 2 ಯಾವಾಗ ಬರುತ್ತೆ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡೋದು ಯಾವಾಗ ಅನ್ನೋದಕ್ಕೆ ಉತ್ತರ ಕೊಟ್ಟಿದ್ದಾರೆ.

ಕಾಂತಾರ ಅಂದ್ರೆ ಅದು ರಿಷಬ್ ಶೆಟ್ಟಿ ಅಂತ ಹೇಳೋ ಮೂಲಕ ದೈವ ಬಲವಿರುವ ಸಮಯದಲ್ಲಿ ದೈವದ ಕತೆಯನ್ನ ಮತ್ತಷ್ಟುತೆರೆದಿಡೋಕೆ ಸನ್ನದ್ದನಾಗ್ತಿದ್ದೀನಿ ಮತ್ತೆ ನಿಮ್ಮ ಮುಂದೆ ಬರುತ್ತೇನೆ ಅನ್ನೋ ರೀತಿ ಅಧ್ಯಾಯ 2 ಆರಂಭ ಅಂತ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂತಾರದಲ್ಲಿ ದೈವವನ್ನ ಆವಾಹಿಸೋ ಕ್ಲೈ ಮಾಕ್ಸ್ ನೋಡಿ ಇಡೀ ಇಂಡಿಯಾ ಮಂದಿಯೇ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯಗಳಿಗೆ ಮನಸೋದು ಕೈ ಎತ್ತಿ ಮುಗಿದಿದ್ದಲ್ಲದೆ.

ವರದಿ: ಸತೀಶ್ ಕನಕಪುರ, ನ್ಯೂಸ್​18 ಕನ್ನಡ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed