Kichcha Sudeep: ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ? ಕಿಚ್ಚ ಹಿಂಗೆ ಹೇಳಿದ್ಯಾಕೆ? | | ACTPnews

ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!


Last Updated:

ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹೀಗೆ ಮಾಡ್ಬೇಡಿ ಅಂತ ತೋರಿಸಿದ್ದೇವೆ. ಸಾಂಸಾರಿಕ ಚಿತ್ರಗಳ ಕಾಲದಲ್ಲಿಯೇ ಓಂ ಚಿತ್ರ ಬಂದಿತ್ತು. ಆದರೆ, ಅದರಲ್ಲೂ ಕೊನೆಗೆ ಸಂದೇಶನ ಇತ್ತು.10 ರಿಂದ 15 ಸಲ ಆ ಚಿತ್ರ ನೋಡಿದ್ದೇನೆ. ಹಾಗಂತ ಮಚ್ಚು ಹಿಡಿದುಕೊಂಡು ರಸ್ತೆಗಿಳಿದೇವಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲವೆ ಓದಿ.

 ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!
ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!

ಮ್ಯಾಂಗೋ ಪಚ್ಚ (Mango Pachcha) ಚಿತ್ರದಲ್ಲಿ ಗಾಂಜಾ ವಿಚಾರವೂ ಇದೆ. ಡಿವಿಡಿ ಮಾರುವ ಮ್ಯಾಂಗೋ ಪಚ್ಚನ ಸ್ಟೋರಿ ಇಲ್ಲಿದೆ. ಆದರೆ, ಈ ಚಿತ್ರದಲ್ಲಿ ಗಾಂಜಾ ಮಾರಾಟವನ್ನ ವೈಭವೀಕರಣ ಮಾಡಿಲ್ಲ ಅಂತ ಚಿತ್ರ ತಂಡ ಹೇಳಿಕೊಂಡಿದೆ. ಆದರೆ, ಚಿತ್ರದಲ್ಲಿ ಅದೇ ಆಗಿದೆ ಅನ್ನುವ ವಿಮರ್ಶೆಗಳು ಬಂದಿವೆ. ಇದರ ನಡುವೆ ಚಿತ್ರ ರಿಲೀಸ್ ಆದ ಮರು ದಿನವೇ ಸುದೀಪ್ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ಶಿವರಾಜ್ ಕುಮಾರ್ (Shiva Rajkumar) ಅವರ ಓಂ ಚಿತ್ರವನ್ನ (OM Movie) ನೆನಪಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಈ ಚಿತ್ರ ನೋಡಿದ್ದೇನೆ. ಆದರೆ, ನಾವು ಮಚ್ಚು ಹಿಡಿದುಕೊಂಡು ರಸ್ತೆಗಿಳಿಯಲಿಲ್ಲ ಅಂತಲೇ ಸುದೀಪ್ (Sudeepa) ಹೇಳಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.

ಚಿತ್ರದಿಂದ ಒಳ್ಳೆಯದನ್ನ ತೆಗೆದುಕೊಳ್ಬೇಕು

ಮ್ಯಾಂಗೋ ಪಚ್ಚದಲ್ಲಿ ತಪ್ಪು ದಾರಿ ಹಿಡಿದರೆ ಏನ್ ಆಗುತ್ತದೆ. ಅಮ್ಮ, ತಮ್ಮ, ಪ್ರೀತಿಸಿದ ಹುಡುಗಿ, ಜೀವನ ಎಲ್ಲರೂ ಹೋಗುತ್ತದೆ. ತಪ್ಪು ಮಾಡಿದರೆ ಈ ರೀತಿನೇ ಆಗೋದು. ಇದನ್ನ ಮಾಡ್ಬೇಡಿ ಅಂತಲೇ ಈ ಚಿತ್ರದಲ್ಲಿ ತೋರಿಸಿದ್ದೇವೆ.

kichcha sudeepa talk about om movie and mango pachcha content at interview

ಚಿತ್ರದಿಂದ ಒಳ್ಳೆಯದನ್ನ ತೆಗೆದುಕೊಳ್ಬೇಕು

ಆದರೆ, ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಅಂತಹ ಸಿನಿಮಾಗಳಲ್ಲಿ ಒಳ್ಳೆಯದನ್ನೆ ತೆಗೆದುಕೊಳ್ಳಬೇಕು. ಹೊರತು ಕೆಟ್ಟದನ್ನ ತೆಗೆದುಕೊಂಡು ಹೋಬ್ಬಾರದು.

25 ವರ್ಷದ ಹಿಂದೆ ಓಂ ಸಿನಿಮಾ ಬಂದಿತ್ತು

ಓಂ ಸಿನಿಮಾದಲ್ಲಿ ರೌಡಿಸಂ ಅನ್ನ ತುಂಬಾನೆ ವಿವರವಾಗಿಯೇ ಹೇಳಲಾಗಿದೆ. ಸಾಂಸಾರಿಕ ಚಿತ್ರಗಳು ಬಂದ ಕಾಲದಲ್ಲಿಯೇ ಓಂ ಚಿತ್ರ ಬಂದಿದೆ.

ಇದನ್ನ ನಾನು 10 ರಿಂದ 15 ಸಲ ನೋಡಿದ್ದೇನೆ. ಹಾಗಂತ ಮಚ್ಚು ಹಿಡಿದುಕೊಂಡು ಮಾರ್ಕೆಟ್‌ಗೆ ಇಳಿದೇನಾ? ಇಲ್ಲ ಅಲ್ವೇ? ಹಾಗೆ ಜನಕ್ಕೆ ಏನು ತೆಗೆದುಕೊಳ್ಳಬೇಕು. ಏನು ತೆಗೆದುಕೊಳ್ಳಬಾರದು ಅನ್ನೋದು ಗೊತ್ತಿರುತ್ತದೆ. ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹೀಗೆ ಮಾಡಬಾರದು ಅನ್ನುವುದನ್ನೆ ಹೇಳುತ್ತಿದ್ದೇವೆ.

ಡೈರೆಕ್ಟರ್ ವಿವೇಕ್ ಸುಮ್ನೆ ಮಾಡಿಲ್ಲ

ಡೈರೆಕ್ಟರ್ ವಿವೇಕ್ ಈ ಚಿತ್ರವನ್ನ ಸುಮ್ನೆ ಮಾಡಿಲ್ಲ. ಎಲ್ಲ ರೀತಿಯ ಅಧ್ಯಯನ ಮಾಡಿಯೇ ಚಿತ್ರ ಮಾಡಿದ್ದಾರೆ. ಅಂತಹ ಈ ಚಿತ್ರದಲ್ಲಿ ಮಾದಕ ವಸ್ತುವನ್ನ ವೈಭವೀಕರಿಸಿಲ್ಲ ಅಂತಲೇ ಸುದೀಪ್ ಹೇಳಿದ್ದಾರೆ.

kichcha sudeepa talk about om movie and mango pachcha content at interview

ಶಿವಣ್ಣನ ಓಂ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಹೀಗೆ ಹೇಳಿದ್ಯಾಕೆ
ಮ್ಯಾಂಗೋ ಪಚ್ಚ ಚಿತ್ರ ರಿಲೀಸ್ ಆದ ಮರು ದಿನವೇ ಸುದೀಪ್ ಸಂದರ್ಶನ ಕೊಟ್ಟರು. ಕೆಆರ್‌ಜಿ ಸಂಸ್ಥೆಯ ಈ ಸಂದರ್ಶನದಲ್ಲಿ ಸುದೀಪ್ ಚಿತ್ರದ ಬಗ್ಗೆ ಸುಮಾರು ವಿಚರ ಮಾತನಾಡಿದ್ದಾರೆ. ಸಂಚಿತ್ ಬಗ್ಗೆನೂ ಹೇಳಿಕೊಂಡಿದ್ದಾರೆ.
ಅಳಿಯ ಡಾಕ್ಟರ್ ಯಾಕ್ ಆಗ್ಲಿಲ್ಲ..

ಮ್ಯಾಂಗೋ ಪಚ್ಚ ಚಿತ್ರದ ನಾಯಕ ನಟ ಸಂಚಿತ್ ಸಂಜೀವ್ ಅವರನ್ನ ಡಾಕ್ಟರ್ ಮಾಡ್ಬೇಕು ಅಂತ ಅಮ್ಮ ಸುಜಾತಾ ಆಸೆ ಪಟ್ಟಿದ್ದರು. ಆದರೆ, ನನಗೆ ಈತ ಡಾಕ್ಟರ್ ಆಗುವುದಿಲ್ಲ ಅಂತ ಗೊತ್ತಿತ್ತು.

ಸಂಚಿತ್ ಸಂಜೀವ್ ಮೊದಲ ಚಿತ್ರ ಜೂನ್-5 ರಂದು ರಿಲೀಸ್ ಆಗಿದೆ.1 ಗಂಟೆ 25 ನಿಮಿಷದ ಈ ಚಿತ್ರ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ವಿಮರ್ಶಕರು ಸಂಚಿತ್ ಸಂಜೀವ್ ಅಭಿನಯ ಮೆಚ್ಚಿಕೊಂಡಿದ್ದಾರೆ. ಬಿಲ್ಡಪ್ ಇಲ್ಲದೆ ಅಭಿನಯ ಇರೋ ಚಿತ್ರಗಳನ್ನ ಮಾಡಿದರೆ ಒಳ್ಳೆ ಭವಿಷ್ಯ ಇದರೆ ಅಂತಲೂ ಬರೆದಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports