Rohit-Hardik: ಅಫ್ಘಾನ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಆನೆಬಲ! ಫಿಟ್​​​ನೆಸ್​​ ಕ್ಲಿಯರ್ ಮಾಡಿದ ಇಬ್ಬರು ಲೆಜೆಂಡರಿ ಪ್ಲೇಯರ್ಸ್ | ಕ್ರೀಡಾ ಸುದ್ದಿ | ACTPnews

ಫಿಟ್​ನೆಸ್​ ಟೆಸ್ಟ್ ಪಾಸ್ ಮಾಡಿದ  ರೋಹಿತ್ ಶರ್ಮಾ


Last Updated:

ಗಾಯಗಳಿಂದಾಗಿ ರೋಹಿತ್ ಮುಂಬೈ ಇಂಡಿಯನ್ಸ್ ಪರ ಹಲವಾರು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಪಾಂಡ್ಯ ಬೆನ್ನು ನೋವು ಮತ್ತು ರೋಹಿತ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಪಾಂಡ್ಯ ಜೂನ್ 2 ರಿಂದ ಬೆಂಗಳೂರಿನ ಸಿಒಇಯಲ್ಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಫಿಟ್​ನೆಸ್​ ಟೆಸ್ಟ್ ಪಾಸ್ ಮಾಡಿದ  ರೋಹಿತ್ ಶರ್ಮಾ
ಫಿಟ್​ನೆಸ್​ ಟೆಸ್ಟ್ ಪಾಸ್ ಮಾಡಿದ ರೋಹಿತ್ ಶರ್ಮಾ

ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಅವರು ಧರ್ಮಶಾಲಾದಲ್ಲಿ (Dharmashala) ಭಾನುವಾರ ಪ್ರಾರಂಭವಾಗುವ ಅಫ್ಘಾನಿಸ್ತಾನ (India vs Afganisthan) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (ODI Series) ಆಡಲಿದ್ದಾರೆ. ಸೆಂಟರ್ ಆಫ್ ಎಕ್ಸಲೆನ್ಸ್ (COE) ಕ್ರೀಡಾ ವಿಜ್ಞಾನ ತಂಡವು ಅವರ ಫಿಟ್​​​ನೆಸ್​​ ಟೆಸ್ಟ್​​​ನಲ್ಲಿ ಪಾಸ್ ಆಗಿದ್ದಾರೆ ಎಂದು ಅನುಮೋದನೆ ನೀಡಿದೆ. ಹಾರ್ದಿಕ್ ಪಾಂಡ್ಯ ಜೊತೆಗೆ ರೋಹಿತ್ ಶರ್ಮಾ ಕೂಡ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಏಕದಿನ ಸರಣಿಗೆ ಲಭ್ಯವಾಗಲಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಪಾಂಡ್ಯ-ಹಾರ್ದಿಕ್ ಶಕ್ತಿ ಪ್ರದರ್ಶನ

ಗಾಯಗಳಿಂದಾಗಿ ರೋಹಿತ್ ಮುಂಬೈ ಇಂಡಿಯನ್ಸ್ ಪರ ಹಲವಾರು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಪಾಂಡ್ಯ ಬೆನ್ನು ನೋವು ಮತ್ತು ರೋಹಿತ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಪಾಂಡ್ಯ ಜೂನ್ 2 ರಿಂದ ಬೆಂಗಳೂರಿನ ಸಿಒಇಯಲ್ಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ:

ಜೂನ್ 2 ರಂದು ಸಿಒಇಗೆ ಆಗಮಿಸುವ ಮೊದಲು, ಹಾರ್ದಿಕ್ ವಿದೇಶದಲ್ಲಿ ರಜೆಯಲ್ಲಿದ್ದರು. ಮುಂದಿನ ಐದು ದಿನಗಳ ಕಾಲ ವಿವಿಧ ಹಂತದಲ್ಲಿ ತರಬೇತಿ ಪಡೆದಿದ್ದಾರೆ. 10 ಓವರ್‌ಗಳ ಪೂರ್ಣ ಕೋಟಾವನ್ನು ಬೌಲಿಂಗ್ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಯಾವುದೇ ತೊಂದರೆಗಳು ಉಂಟಾಗಲಿಲ್ಲ, ಮತ್ತು ವರದಿಯ ಪ್ರಕಾರ, ಸಿಒಇಯ ಸ್ಟ್ರೆಂತ್​​ ಮತ್ತು ಕಂಡೀಷನಿಂಗ್ ಕೋಚ್​ ವಿವಿಧ ನಿಯತಾಂಕಗಳ ಮೇಲೆ ಅವರ ಫಿಟ್ನೆಸ್ ಅನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣ

ಮಾಜಿ ನಾಯಕ ರೋಹಿತ್ ಕೂಡ ಮಂಡಿರಜ್ಜು ಗಾಯದ ಮೌಲ್ಯಮಾಪನಕ್ಕಾಗಿ ಸಿಒಇಗೆ ಹಾಜರಾಗಿದ್ದರು. ಇದೀಗ ಅವರಿಗೂ ಆಡಲು ಅನುಮತಿ ಸಿಕ್ಕಿದೆ. ಸೋಮವಾರ, ಭಾರತದ ಸಹಾಯಕ ಕೋಚ್ ಸೀತಾಂಶು ಕೊಟಕ್ ಅವರು ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಯಾವುದೇ ಅಪ್​ಡೇಟ್​​ ಇಲ್ಲದಿದ್ದರೂ, ಆಲ್‌ರೌಂಡರ್ ಉತ್ತಮವಾಗಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ಅವರು ಆಡಲು ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪಾಂಡ್ಯ ತಂಡವನ್ನು ಯಾವಾಗ ಸೇರುತ್ತಾರೆ?

ಉತ್ತಮ ಅಂಶವೆಂದರೆ ಪಾಂಡ್ಯ ತರಬೇತಿ ಅವಧಿಯಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ, ಅಂದರೆ ಅವರು 50 ಓವರ್‌ಗಳ ಕ್ರಿಕೆಟ್‌ನ ಸವಾಲುಗಳಿಗೆ ಸಿದ್ಧರಾಗಿದ್ದಾರೆ. ಆದಾಗ್ಯೂ, ಪಾಂಡ್ಯ ಚಂಡೀಗಢದಲ್ಲಿ ನಡೆಯಲಿರುವ ತರಬೇತಿ ಸೆಷನ್​​ಗೆ ತಂಡವನ್ನು ಸೇರುತ್ತಾರೋ ಅಥವಾ ಈ ಹಿಂದೆ ಯೋಜಿಸಿದಂತೆ ಧರ್ಮಶಾಲಾಕ್ಕೆ ನೇರವಾಗಿ ಹೋಗುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ.

ಕೊಹ್ಲಿ ಔಟ್, ಜೈಸ್ವಾಲ್ ಇನ್

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈಗಾಗಲೇ ಮಂಡಿರಜ್ಜು ನೋವಿನಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ.  ಐಪಿಎಲ್ ಫೈನಲ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇನ್ನೂ ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ಅವರು ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಈಗಾಗಲೇ ಯಶಸ್ವಿ ಜೈಸ್ವಾಲ್​​ಗೆ ಅವಕಾಶ ನೀಡಲಾಗಿದೆ.

ಅಫ್ಘಾನಿಸ್ತಾನ ಸರಣಿಗೆ ಭಾರತ ತಂಡ ಪ್ರಕಟ

ಶುಭ್​ಮನ್ ಗಿಲ್ (ನಾಯಕ) ಕೆ.ಎಲ್. ರಾಹುಲ್​ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಕೆ.ಎಲ್. ರಾಹುಲ್, ರಿಷಭ್ ಪಂತ್, ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಹರ್ಷ್ ದುಬೆ,ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports