Rishab Shetty: ಕೋಳಿ ಮೊದಲಾ? ಮೊಟ್ಟೆ ಮೊದಲಾ? ಸೀರಿಯಸ್ ಡಿಸ್ಕಷನ್​​ಗೆ ಶೆಟ್ರು ಕೊಟ್ರು ಸಿಂಪಲ್ ಎಕ್ಸಾಂಪಲ್ | | ACTPnews

"ಒಟಿಟಿನೂ ಈಗ ಹಳೆಯದಾಯಿತು; ಕೆಲವ್ರು ಇನ್ನು ಅದೇ ಗುಂಗಲ್ಲಿಯೇ ಇದ್ದಾರೆ" ರಿಷಬ್ ಶೆಟ್ಟಿ!


Last Updated:

ಒಟಿಟಿ ಬಂದು ಹೋಗಿ ಆಗಿದೆ. ಇದು ಈಗ ಹಳೆಯದ್ದೇ ಆಗಿದೆ. ಒಳ್ಳೆ ಸಿನಿಮಾ ಮಾಡ್ಬೇಕಿದೆ. ಆದರೆ, ಒಳ್ಳೆ ಸಿನಿಮಾ ಬರ್ತಿಲ್ಲವಾ? ಒಳ್ಳೆ ಸಿನಿಮಾ ಕೊಟ್ಟರೂ ಜನ ಬರ್ತಿಲ್ಲವಾ? ಇದು ಒಂದು ರೀತಿ ಕ್ವೀಜ್ ರೀತಿನೇ ಆಗಿದೆ ಅಂತಲೂ ರಿಷ್ ಶೆಟ್ರು ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.

 "ಒಟಿಟಿನೂ ಈಗ ಹಳೆಯದಾಯಿತು; ಕೆಲವ್ರು ಇನ್ನು ಅದೇ ಗುಂಗಲ್ಲಿಯೇ ಇದ್ದಾರೆ" ರಿಷಬ್ ಶೆಟ್ಟಿ!
“ಒಟಿಟಿನೂ ಈಗ ಹಳೆಯದಾಯಿತು; ಕೆಲವ್ರು ಇನ್ನು ಅದೇ ಗುಂಗಲ್ಲಿಯೇ ಇದ್ದಾರೆ” ರಿಷಬ್ ಶೆಟ್ಟಿ!

ಡಿವೈನ್ ಸ್ಟಾರ್ ರಿಷಬ್ ಶೆಟ್ರು (Rishab Shetty) ಸದ್ಯದ ಕನ್ನಡ ಇಂಡಸ್ಟ್ರೀಯನ್ನ (Kannada Film Industry) ಯಾವ ರೀತಿ ನೋಡ್ತಾರೆ? ಪತ್ರಕರ್ತರ ಈ ಪ್ರಶ್ನೆಗೆ ರಿಷಬ್ ಶೆಟ್ರು (Rishab Shetty) ಉತ್ತರ ಕೊಟ್ಟಿದ್ದಾರೆ. ತಮ್ಮದೇ ವಿಶ್ಲೇಷಣೆಯನ್ನ ಹೇಳಿದ್ದಾರೆ. ಕೋಳಿ ಮೊದಲ ಮೊಟ್ಟೆ ಮೊದಲ ಅನ್ನುವ ಸ್ಥಿತಿ ಇದೆ. ಒಳ್ಳೆ ಸಿನಿಮಾ ಕೊಡ್ತಿಲ್ವಾ? ಜನ ಥಿಯೇಟರ್‌ಗೆ ಬರ್ತಿಲ್ವಾ? ಈ ರೀತಿಯ ಸ್ಥಿತಿ ಇದೆ. ಒಂದು ರೀತಿ ಇದು ಕ್ವೀಜ್ ರೀತಿನೆ ಆಗಿದೆ. ಆದರೆ, ಪರ ಭಾಷೆಯಲ್ಲಿ ಸಿನಿಮಾಗಳು ಬರ್ತಿವೆ ಅಂತಲೇ ಗೊತ್ತಾಗಲ್ಲ. ಥಿಯೇಟರ್‌ಗೆ ಬಂದಾಗಲೇ 200 -300 ಕೋಟಿ ಗಳಿಕೆ ಮಾಡಿ ಬಿಡುತ್ತೇವೆ. ನಮ್ಮಲ್ಲಿ ಒಂದು ಮಾತು ಈಗಲೂ ಇದೆ. ಒಟಿಟಿ (Ott) ಬಂದಿದೆ. ಇದರಿಂದ ಸಿನಿಮಾ ಹೋಗ್ತಿಲ್ಲ ಅನ್ನುವ ನಂಬಿಕೆ ಇದೆ. ಆದರೆ, ಇದು ಹಳೆಯದಾಗಿದೆ ಅನ್ನುವ ರಿಷಬ್ ಶೆಟ್ರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಒಟಿಟಿನೂ ಹಳೆಯದಾಗಿದೆ..

ನಮ್ಮಲ್ಲಿ ಕೆಲವರು ಇನ್ನು ಅದೇ ಗುಂಗಿನಲ್ಲಿಯೇ ಇದ್ದಾರೆ. ಒಟಿಟಿ ಬಂದಿದೆ. ಅದರಿಂದ ಜನರ ಥಿಯೇಟರ್‌ಗೆ ಬರೋದಿಲ್ಲ ಅಂತಲೇ ಹೇಳ್ತಾರೆ. ಆದರೆ, ಒಟಿಟಿನೂ ಈಗ ಮತ್ತೊಂದು ಟಿವಿ ತರವೇ ಆಗಿದೆ ಅಷ್ಟೆ.

rishab shetty talk about present kannada film industry situation

ಕೋಳಿ ಮೊದಲ, ಮೊಟ್ಟೆ ಮೊದಲ

(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಆದರೆ, ಥಿಯೇಟರ್‌ಗಳೇ ಎಲ್ಲ ಎಂಟರ್‌ಟೈನಮೆಂಟ್‌ಗೆ “ಅಪ್ಪ” ನೋಡಿ. ಥಿಯೇಟರ್‌ಗೆ ತರುವ ಸಿನಿಮಾಗಳನ್ನ ಹೇಗೆ ಮಾಡ್ಬೇಕು ಅನ್ನೋದರ ಬಗ್ಗೆ ಯೋಚೆನ ಮಾಡ್ಬೇಕಿದೆ. ಒಳ್ಳೆ ಚಿತ್ರ ಕೊಡ್ಬೇಕಿದೆ. ಒಟಿಟಿ ಎಲ್ಲ ಬಂದು ಹೋಗಿದೆ.

ಸು ಫ್ರಮ್ ಸೋ ಯಾರಿಗೆ ಗೊತ್ತಿತ್ತು

ಸು ಫ್ರಮ್ ಸೋ ಚಿತ್ರ ಯಾರಿಗೆ ಗೊತ್ತಿತ್ತು. ಜೆ.ಪಿ. ತುಮಿನಾಡು ಅವರೂ ಹೊಸಬರೇ ಆಗಿದ್ದರು. ರಾಜ್ ಬಿ.ಶೆಟ್ಟಿ ಒಬ್ಬರು ಗೊತ್ತಿರೋರು ಈ ಚಿತ್ರದಲ್ಲಿದ್ದರು.

ಆದರೆ, ಉಳಿದವರೆಲ್ಲ ಹೊಸಬರೇ ಅಲ್ಲವೇ? ಹಾಗಾಗಿಯೇ ಒಳ್ಳೆ ಸಿನಿಮಾ ಮಾಡುವ ಅಗತ್ಯ ಇದೆ. ಅದರ ಮೇಲೆ ಹೆಚ್ಚಿಗೆ ಫೋಕಸ್ ಮಾಡ್ಬೇಕಿದೆ ಅನ್ನುವ ಅರ್ಥದಲ್ಲಿಯೇ ರಿಷಬ್ ಶೆಟ್ರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಕೋಳಿ ಮೊದಲ, ಮೊಟ್ಟೆ ಮೊದಲ

ಒಳ್ಳೆ ಸಿನಿಮಾ ಕೊಡ್ತಿಲ್ಲವ? ಜನ ಥಿಯೇಟರ್‌ಗೆ ಬರ್ತಿಲ್ಲವ? ಈ ಒಂದು ಚರ್ಚೆ ಇದ್ದೇ ಇದೆ. ಇದು ಒಂದು ರೀತಿ ಕ್ವೀಜ್ ರೀತಿನೇ ಆಗಿದೆ.

rishab shetty talk about present kannada film industry situation

43 ನೇ ಜನ್ಮ ದಿನ

ಕೋಳಿ ಮೊದಲ, ಮೊಟ್ಟೆ ಮೊದಲ ಅನ್ನುವ ಸ್ಥಿತಿ ಇದೆ. ಆದರೆ, ಒಟಿಟಿಯಿಂದ ಎಫೆಕ್ಟ್ ಆಗುತ್ತದೆ ಅನ್ನೋದೆಲ್ಲ ಇಲ್ಲ ಬಿಡಿ. ಒಟಿಟಿ ಬಂದು ಹೋಗಿದೆ. ಈಗೇನಿದ್ದರು ಒಳ್ಳೆ ಸಿನಿಮಾ ಮಾಡಬೇಕಿದೆ.

ಪರಭಾಷೆಯ ಸಿನಿಮಾಗಳು

ಪರ ಭಾಷೆಯಲ್ಲಿ ಸಿನಿಮಾ ಬರ್ತಿವೆ. ಆ ಸಿನಿಮಾಗಳು ಬರ್ತಿವೆ ಅಂತಲೂ ಗೊತ್ತಾಗಲ್ಲ. ಆದರೂ ಥಿಯೇಟರ್ ಅಲ್ಲಿ ಬಂದ್ಮೇಲೆ ಆ ಚಿತ್ರಗಳು 200 -300 ಕೋಟಿ ಮಾಡುತ್ತವೆ. ಇಷ್ಟು ದುಡ್ಡು ಮಾಡಿದಾಗಲೇ ನಮಗೆ ಗೊತ್ತಾಗುತ್ತದೆ.

43 ನೇ ಜನ್ಮ ದಿನ

ರಿಷಬ್ ಶೆಟ್ರು ಜುಲೈ-7 ರಂದು 43 ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಆದರೆ, ಜುಲೈ-6 ರಂದು ಬೆಂಗಳೂರಿನಲ್ಲಿ ಸಿನಿಮಾ ಪತ್ರಕರ್ತರ ಜೊತೆಗೆ ಸೆಲೆಬ್ರೇಟ್ ಕೂಡ ಮಾಡಿಕೊಂಡಿದ್ದಾರೆ.

ಈ ಸಮಯದಲ್ಲಿ ಸಿನಿಮಾ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಸದ್ಯದ ಸಿನಿಮಾ ಸ್ಥಿತಿ ಹೇಗಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಒಳ್ಳೆ ಸಿನಿಮಾ ಮಾಡುವ ಅಗತ್ಯವೂ ಇದೆ ಅಂತಲೇ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports