Renukaswamy Case: ರೇಣುಕಾಸ್ವಾಮಿ ಕೇಸ್​​ನ ಐವರು ಆರೋಪಿಗಳಿಗೆ ಬಿಗ್ ರಿಲೀಫ್! ಪ್ರಾಸಿಕ್ಯೂಷನ್​ಗೆ ಹಿನ್ನಡೆ | | ACTPnews

ರೇಣುಕಾಸ್ವಾಮಿ ಕೇಸ್


Last Updated:

Renukaswamy Case: ರೇಣುಕಾಸ್ವಾಮಿ ಕೇಸ್​​ಗೆ ಸಂಬಂಧಿಸಿದಂತೆ ಐವರ ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್​​ಗೆ ಹಿನ್ನಡೆಯಾಗಿದೆ.

ರೇಣುಕಾಸ್ವಾಮಿ ಕೇಸ್
ರೇಣುಕಾಸ್ವಾಮಿ ಕೇಸ್

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಸಹಚರರಿಗೆ ಜೈಲುವಾಸ ಫಿಕ್ಸ್ ಆಗುತ್ತಾ ಎನ್ನುವ ಸಂದೇಹವಿತ್ತು. ಐವರು ಆರೋಪಿಗಳು ಜಾಮೀನು (Bail) ರದ್ದು ಕೋರಿದ್ದ ಅರ್ಜಿಯ ಆದೇಶ ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟವಾಗಿದೆ. ಹೈಕೋರ್ಟ್ (Highcourt) ವಿಭಾಗೀಯ ಪೀಠ ಆದೇಶ ಪ್ರಕಟಿಸಿದೆ.

ಐವರು ಆರೋಪಿಗಳ ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ದರ್ಶನ್ ಸೇರಿ ಏಳು ಜನ ಆರೋಪಿಗಳ ಜಾಮೀನು ರದ್ದು ಮಾಡಿತ್ತು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಪ್ರಾಸಿಕ್ಯೂಷನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಆರೋಪಿಗಳಾದ ವಿನಯ್, ನದೀಶ್, ಧನರಾಜು, ಪವನ್, ರಾಘವೇಂದ್ರ ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಈಗಾಗಲೇ ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್ ಇಂದು ಮಧ್ಯಾಹ್ನ 2:30 ಕ್ಕೆ ಆದೇಶ ಪ್ರಕಟಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಸ್ ರಾಚಯ್ಯ ಪೀಠದಿಂದ ಆದೇಶ ಹೊರಬಿದ್ದಿದೆ. ಆಗಸ್ಟ್ ನಲ್ಲಿ ದರ್ಶನ್ ಮತ್ತು ಸಹಚರರು ಜೈಲಿಗೆ ಹೋದ ಬಳಿಕ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ಆದೇಶದ ಅನ್ವಯ ಇತರ ಐವರು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಮನವಿ ಮಾಡಿತ್ತು.

ಸುರ್ಧೀಘವಾಗಿ ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್ ನಿಂದ‌ ಇಂದು ಆದೇಶ ಪ್ರಕಟವಾಗಿದೆ. ಸದ್ಯ ಈ ಕೇಸ್ 59 CCH ನ್ಯಾಯಾಲಯ ದಲ್ಲಿ ಟ್ರಯಲ್ ಗೆ ನಿಗದಿಯಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳಿಗೂ ಕೂಡ ಬಿಗ್ ರಿಲೀಫ್ ಸಿಕ್ಕಿದೆ. ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ವಜಾ ಮಾಡಿಹೈಕೋರ್ಟ್ ನ ರಾಚಯ್ಯ ಪೀಠದಿಂದ ಆದೇಶ ಹೊರಬಿದ್ದಿದೆ. A5 ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಕೋರ್ಟ್​ಗೆ ವರ್ಗವಾಗಿದೆ. ಸೆಷನ್ಸ್ ಕೋರ್ಟ್​ಗಳಿಗೆ ಪೊಲೀಸ್ ಸ್ಟೇಷನ್ ವಾರು ಹೊಸ ನಿಯೋಜನೆ ಮಾಡಲಾಗಿದ್ದು, ಸೆಷನ್ಸ್ ಕೋರ್ಟ್​ಗಳಿಗೆ ಸಬ್ ಡಿವಿಜನ್ಸ್ ಹಂಚಿಕೆ ಮಾಡಿ ಆದೇಶ ನೀಡಲಾಗಿತ್ತು.

ಇದನ್ನೂ ಓದಿ: Sudeep: ಅಕ್ಕ ಪಕ್ಕದಲ್ಲಿ ಕಿಚ್ಚ-ದಚ್ಚು ಫೋಟೋ! ಐಡಿಯಾ ಕೊಟ್ಟಿದ್ದೇ ಸುದೀಪ್

ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಆದೇಶ ಹೊರಡಿಸಿದೆ. ಸೆಷನ್ಸ್ ಕೋರ್ಟ್ ಗಳಿಗೆ ಪೊಲೀಸ್ ಸ್ಟೇಷನ್​ಗಳ ಹಂಚಿಕೆ ಮಾಡಿ ಆದೇಶ ನೀಡಲಾಗಿದ್ದು ವಿಜಯನಗರ ಸಬ್ ಡಿವಿಜನ್ 59ನೇ ಸೆಷನ್ಸ್ ಕೋರ್ಟ್​ನಿಯೋಜನೆಯಾಗಿದೆ. ಇದರಿಂದ ಕಾಮಾಕ್ಷಿಪಾಳ್ಯ ಠಾಣೆ ಕೇಸ್​​ಗಳು 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಆಗಿದೆ.

ವರದಿ: ಮಾದೇಶ ಸಿಎನ್. ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *