Achievement: ಮಂಜಿನ ಮೈದಾನದಲ್ಲಿ ಕಿಚ್ಚು ಹಚ್ಚಿದ ಮೈಸೂರು ಕಲಿಗಳು; ಅಮೆರಿಕಾದಲ್ಲಿ ಕೊಡವ ಕುಡಿಗಳ ಸಾಧನೆ! | ಕ್ರೀಡಾ ಸುದ್ದಿ | ACTPnews

ಐಸ್‌ ಹಾಕಿ


Last Updated:

ಟೆಕ್ಸಾಸ್ ಫ್ರಿಸ್ಕೊ ಹಾಕಿ ಅಸೋಸಿಯೇಷನ್ 2026 ತಂಡಕ್ಕೆ ಮೈಸೂರು ಮೂಲದ ಸಹೋದರರು ಮೇಯನ್, ಕ್ರಿಶ್ ಮೆರಿಯಾಂಡ ಆಯ್ಕೆಯಾಗಿದ್ದಾರೆ, ಅತೀ ಕಮ್ಮಿ ವಯಸ್ಸಿನಲ್ಲೇ ಈ ಸಾಧನೆ ಮಾಡಿರುವ ಈ ಜೋಡಿ ಮುಂದೆ ಅಮೆರಿಕಾದ ಐಸ್‌ ಹಾಕಿ ತಂಡ ಸೇರುವ ಭರವಸೆ ಮೂಡಿಸಿದೆ

ಐಸ್‌ ಹಾಕಿ
ಐಸ್‌ ಹಾಕಿ

ಮೈಸೂರು/ಕೊಡಗು: ಭಾರತದಲ್ಲಿ ಕ್ರೀಡೆ (Sport) ಎಂದರೆ ತಕ್ಷಣ ನೆನಪಾಗುವುದು ಕ್ರಿಕೆಟ್. ಇಲ್ಲವೇ ಫುಟ್‌ಬಾಲ್ ಅಥವಾ ಫೀಲ್ಡ್ ಹಾಕಿ. ಆದರೆ, ಉತ್ತರ ಅಮೆರಿಕದ (North America) ಅತ್ಯಂತ ಕಠಿಣ, ಅಪಾಯಕಾರಿ ಹಾಗೂ ಪ್ರತಿಷ್ಠಿತ ಕ್ರೀಡೆಯಾದ ‘ಐಸ್ ಹಾಕಿ’ಯಲ್ಲಿ (Ice Hockey) ನಮ್ಮ ಕರುನಾಡಿನ ಇಬ್ಬರು ಸಹೋದರರು ಭರ್ಜರಿ ಕಮಾಲ್ ಮಾಡಿದ್ದಾರೆ! ಅಮೆರಿಕದ ಟೆಕ್ಸಾಸ್‌ನಲ್ಲಿರುವ ಪ್ರಸಿದ್ಧ ಹಾಕಿ ಅಸೋಸಿಯೇಷನ್ ತಂಡಕ್ಕೆ (Hockey Team) ಆಯ್ಕೆಯಾಗುವ ಮೂಲಕ ಅಮೆರಿಕನ್ನರ ಹುಬ್ಬೇರುವಂತೆ ಮಾಡಿದ್ದಾರೆ. ಇಷ್ಟಕ್ಕೂ ಮಂಜಿನ ಮೈದಾನದಲ್ಲಿ ಬೆಂಕಿ ಹಚ್ಚಿದ ಆ ಕನ್ನಡಿಗ ಸಹೋದರರು ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್ ಸ್ಟೋರಿ!

ಮಂಜಿನ ಮೈದಾನದಲ್ಲಿ ಕರುನಾಡಿನ ಹವಾ!

ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೊ ಹಾಕಿ ಅಸೋಸಿಯೇಷನ್ (Frisco Hockey Association) ನ 2026ರ ಬೇಸಿಗೆ ಋತುವಿನ ಸ್ಪರ್ಧಾತ್ಮಕ ತಂಡಗಳಿಗೆ ಮೈಸೂರು ಮೂಲದ ಇಬ್ಬರು ಬಾಲಕರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಹಿರಿಯ ಸಹೋದರ ಮೇಯನ್ (Mayen Machayya Meriyanda): ಕೇವಲ 15 ವರ್ಷದ ಮೇಯನ್, ಫ್ರಿಸ್ಕೊದ ಇಂಡಿಪೆಂಡೆನ್ಸ್ ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದಾನೆ. ತನ್ನ ಅದ್ಭುತ ಆಟದ ಮೂಲಕ ಅತ್ಯುನ್ನತ ‘ವಾರ್ಸಿಟಿ ತಂಡ’ (Varsity Team) ಕ್ಕೆ ಬಡ್ತಿ ಪಡೆದಿದ್ದಾನೆ.

ಕಿರಿಯ ಸಹೋದರ ಕ್ರಿಶ್ (Krish Machayya Meriyanda): ಅಣ್ಣನ ಹಾದಿಯಲ್ಲೇ ಹೆಜ್ಜೆ ಹಾಕುತ್ತಿರುವ 13 ವರ್ಷದ ಕ್ರಿಶ್, ನೆಲ್ಸನ್ ಮಿಡಲ್ ಸ್ಕೂಲ್‌ನಲ್ಲಿ 8ನೇ ತರಗತಿ ಮುಗಿಸಿದ್ದು, ತನ್ನ ಚುರುಕಿನ ಆಟದಿಂದ ‘ಜೂನಿಯರ್ ವಾರ್ಸಿಟಿ ತಂಡ’ (Junior Varsity Team) ದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

ಅಮೆರಿಕದಲ್ಲಿದ್ದರೂ ಬಿಡದ ಮಣ್ಣಿನ ನಂಟು; ಯಾರು ಈ ಸಹೋದರರು?

ಸಾಮಾನ್ಯವಾಗಿ ವಿದೇಶಕ್ಕೆ ಹೋದರೆ ತಾಯ್ನಾಡನ್ನು ಮರೆಯುವವರೇ ಹೆಚ್ಚು. ಆದರೆ ಈ ಬಾಲಕರು ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದರೂ, ತಮ್ಮ ಬೇರನ್ನು ಮರೆತಿಲ್ಲ! ಇವರು ಮೂಲತಃ ಕೊಡಗು ಜಿಲ್ಲೆಯ ಪ್ರತಿಷ್ಠಿತ ‘ಮೆರಿಯಾಂಡ’ (Meriyanda) ಐನ್‌ಮನೆ ಕುಟುಂಬದ ಕುಡಿಗಳು. ಇವರ ತಾತ ಮೆರಿಯಾಂಡ ತಿಮ್ಮಯ್ಯ ಅವರು ಹಲವು ವರ್ಷಗಳ ಹಿಂದೆಯೇ ಕೊಡಗಿನಿಂದ ಮೈಸೂರಿಗೆ ವಲಸೆ ಬಂದು ವಕೀಲರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಈ ಕುಟುಂಬಕ್ಕೆ ಮೈಸೂರು ಮತ್ತು ಕೊಡಗು ಎರಡರೊಂದಿಗೂ ನಿಕಟ ಒಡನಾಟವಿದೆ.
ಪೋಷಕರ ಹಿನ್ನೆಲೆ ಕೇಳಿದ್ರೆ ಅಬ್ಬಬ್ಬಾ ಅನ್ನೋದು ಖಂಡಿತ!

ಇವರ ತಂದೆ ಶ್ರೀಕಾಂತ್ ತಿಮ್ಮಯ್ಯ ಇವರು ಅಮೆರಿಕದ ಶಿರೋ ಟೆಕ್ನಾಲಜಿಸ್ (Shiro Technologies) ಕಂಪನಿಯ ನಿರ್ಮಾತೃ ಮತ್ತು ಸಿಇಒ ಹಾಗೂ ತಾಯಿ ಡಾ. ಗಂಗಮ್ಮ ಚೆನಂಥ – ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಇಷ್ಟೊಂದು ಉನ್ನತ ಹುದ್ದೆಯಲ್ಲಿದ್ದರೂ, ಈ ಕುಟುಂಬ ಪ್ರತಿವರ್ಷ ಮೈಸೂರು ಮತ್ತು ಕೊಡಗಿಗೆ ಭೇಟಿ ನೀಡುವ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಮಣ್ಣಿನೊಂದಿಗಿನ ಅವಿನಾಭಾವ ಸಂಬಂಧವನ್ನು ಇಂದಿಗೂ ಉಳಿಸಿಕೊಂಡಿದೆ. ಎಂದು ತಮಿಳು ದೈನಿಕ ದಿನಮಲರ್‌ ವರದಿ ಮಾಡಿದೆ.

ಕೊಡಗಿನ ಫೀಲ್ಡ್ ಹಾಕಿ ರಕ್ತ, ಅಮೆರಿಕದಲ್ಲಿ ‘ಐಸ್ ಹಾಕಿ’ಯಾಯ್ತು!

ಕೊಡಗು ಎಂದರೆ “ಭಾರತೀಯ ಹಾಕಿಯ ನರ್ಸರಿ”. ಕೊಡವ ಸಮುದಾಯದವರ ರಕ್ತದಲ್ಲೇ ಹಾಕಿ ಹಾಸುಹೊಕ್ಕಾಗಿದೆ. ಪ್ರತಿ ವರ್ಷ ನಡೆಯುವ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ವೇ ಇದಕ್ಕೆ ಸಾಕ್ಷಿ. ತಮ್ಮ ಪೂರ್ವಜರ ಫೀಲ್ಡ್ ಹಾಕಿಯ ಅದೇ ಆಕ್ರಮಣಕಾರಿ ಆಟ ಹಾಗೂ ಕ್ರೀಡಾ ಸ್ಫೂರ್ತಿಯನ್ನು, ಈ ಸಹೋದರರು ಅಮೆರಿಕದ ‘ಐಸ್ ಹಾಕಿ’ಗೆ ಅಳವಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

ಅಮೆರಿಕಾ ತಂಡಕ್ಕೆ ಸೇರಲು ಕಾತರಿಸಿವೆ ಕೊಡವ ಕುಡಿಗಳು!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports