Ravindra Jadeja: ಕಿವೀಸ್ ಪ್ರವಾಸಕ್ಕೂ ಮುನ್ನ ಶತಕ ಸಿಡಿಸಿ ಅಬ್ಬರಿಸಿದ ಟೀಮ್ ಇಂಡಿಯಾ ಆಲ್​ರೌಂಡರ್! | ಕ್ರೀಡಾ ಸುದ್ದಿ | ACTPnews

ರವೀಂದ್ರ ಜಡೇಜಾ (PTI Photo)

[ad_1]

Last Updated:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 19 ರಿಂದ 23 ರವರೆಗೆ ವೆಲ್ಲಿಂಗ್ಟನ್‌ನಲ್ಲಿ ಮತ್ತು ಎರಡನೇ ಟೆಸ್ಟ್ ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಕೆಲವು ಸ್ಟಾರ್ ಪ್ಲೇಯರ್ ರಣಜಿ ಪಂದ್ಯವನ್ನಾಡುತ್ತಿದ್ದಾರೆ.

 ರವೀಂದ್ರ ಜಡೇಜಾ (PTI Photo)
ರವೀಂದ್ರ ಜಡೇಜಾ (PTI Photo)

ಭಾರತ ತಂಡ ಇದೇ ತಿಂಗಳು ನ್ಯೂಜಿಲೆಂಡ್ ಪ್ರವಾಸ (New Zealand Tour) ಕೈಗೊಳ್ಳಲಿದ್ದು, ಕಿವೀಸ್ ವಿರುದ್ಧ 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಪ್ರವಾಸಕ್ಕೂ ಮುನ್ನ ಟೆಸ್ಟ್ ತಂಡದಲ್ಲಿರುವ ಕೆಲವು ಆಟಗಾರರು ಮೊದಲ ಸುತ್ತಿನ ರಣಜಿ ಟ್ರೋಫಿಯನ್ನಾಡುತ್ತಿದ್ದಾರೆ. ಅದರಲ್ಲಿ ಕೆಲವರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರೆ, ಕೆಲವರು ಅದ್ಭುತ ಪ್ರದರ್ಶನ ತೋರಿ ಮಿಂಚಿದ್ದಾರೆ. ಓಪನರ್​ಗಳಾದ ಜೈಸ್ವಾಲ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ ಕೇವಲ 4 ರನ್​ಗಳಿಸಿದ್ದಾರೆ. ಆದರೆ ಭಾರತ ತಂಡದ ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮಾತ್ರ ದೇಶೀಯ ಕ್ರಿಕೆಟ್‌ಗೆ ಭರ್ಜರಿ ಪುನರಾಗಮನ ಮಾಡಿದ್ದಾರೆ. ರಾಜಕೋಟ್‌ನಲ್ಲಿ ನಡೆಯುತ್ತಿರುವ ಛತ್ತೀಸ್‌ಗಢ ವಿರುದ್ಧದ ರಣಜಿ ಟ್ರೋಫಿ (2026-27) ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿದ ಜಡೇಜಾ, ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ 16ನೇ ಶತಕವಾಗಿದೆ.

ಸಂಕಷ್ಟದಲ್ಲಿದ್ದ ಸೌರಾಷ್ಟ್ರಕ್ಕೆ ಜಡೇಜಾ-ಮಂಕಡ್ ಆಸರೆ

ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡ ಒಂದು ಹಂತದಲ್ಲಿ 120 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತಿಣುಕಾಡುಡುತ್ತಿತ್ತು. ಈ ವೇಳೆ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. 151 ರನ್‌ಗಳಿಗೆ ತಂಡ 4ನೇ ವಿಕೆಟ್ ಕಳೆದುಕೊಂಡ ನಂತರ ಅವರಿಗೆ ಪ್ರೇರಕ್ ಮಂಕಡ್ ಭರ್ಜರಿ ಸಾಥ್ ನೀಡಿದರು.

ಈ ಜೋಡಿ 5ನೇ ವಿಕೆಟ್‌ಗೆ ಬರೋಬ್ಬರಿ 205 ರನ್‌ಗಳ ಬೃಹತ್ ಜೊತೆಯಾಟದ ಕಾಣಿಕೆ ನೀಡುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಪ್ರೇರಕ್ ಮಂಕಡ್ 150 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 129 ರನ್ ಚಚ್ಚಿದರು. ಮತ್ತೊಂದೆಡೆ ಅತ್ಯಂತ ತಾಳ್ಮೆಯ ಆಟ ಪ್ರದರ್ಶಿಸಿದ ಜಡೇಜಾ 209 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 102 ರನ್ ಗಳಿಸಿದರು. ಇವರಿಬ್ಬರ ಅಮೋಘ ಶತಕಗಳ ನೆರವಿನಿಂದ ಸೌರಾಷ್ಟ್ರ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 392 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ವಿಶೇಷವೆಂದರೆ, ಶತಕದ ಬಳಿಕ ಜಡೇಜಾ ಅವರು ಈ ಹಿಂದೆ ಸೌರಾಷ್ಟ್ರ ತಂಡದಲ್ಲೇ ತಮ್ಮ ಸಹ ಆಟಗಾರನಾಗಿದ್ದ, ಪ್ರಸ್ತುತ ಛತ್ತೀಸ್‌ಗಢ ಪರ ಆಡುತ್ತಿರುವ ಧರ್ಮೇಂದ್ರಸಿನ್ಹಗೆ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದರು.

ನ್ಯೂಜಿಲೆಂಡ್ ಸರಣಿಗೆ ಭರ್ಜರಿ ಸಿದ್ಧತೆ

ಮುಂದಿನ ತಿಂಗಳು ನಡೆಯಲಿರುವ ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸದ ಹಿನ್ನೆಲೆಯಲ್ಲಿ ಜಡೇಜಾ ಅವರ ಈ ಇನಿಂಗ್ಸ್ ಅತ್ಯಂತ ಮಹತ್ವದ್ದಾಗಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಜಡೇಜಾ ಆಡಿದ್ದರೂ, ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಕಠಿಣ ಟೆಸ್ಟ್ ಸರಣಿಗೂ ಮುನ್ನ ಮೈದಾನದಲ್ಲಿ ಹೆಚ್ಚು ಸಮಯ ಕಳೆದು ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 19 ರಿಂದ 23 ರವರೆಗೆ ವೆಲ್ಲಿಂಗ್ಟನ್‌ನಲ್ಲಿ ಮತ್ತು ಎರಡನೇ ಟೆಸ್ಟ್ ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ಅಕ್ಟೋಬರ್ 11 ರಿಂದ ಆರಂಭವಾಗಿರುವ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವು ಎಲೈಟ್ ಗ್ರೂಪ್-ಬಿ ನಲ್ಲಿದ್ದು, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಹೈದರಾಬಾದ್, ಕರ್ನಾಟಕ, ಪಂಜಾಬ್ ಮತ್ತು ತ್ರಿಪುರಾ ತಂಡಗಳೊಂದಿಗೆ ಪೈಪೋಟಿ ನಡೆಸುತ್ತಿದೆ. ಕಳೆದ ಸೀಸನ್‌ನಲ್ಲಿ ಆರಂಭಿಕ ಹಂತದಲ್ಲೇ ಹೊರಬಿದ್ದಿದ್ದ ಸೌರಾಷ್ಟ್ರ ತಂಡ, ಈ ಬಾರಿ ಜಡೇಜಾ ಅವರ ಅದ್ಭುತ ಫಾರ್ಮ್‌ನೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಭರವಸೆ ಹೊಂದಿದೆ.

ವಿಫಲರಾದ ಓಪನರ್ಸ್

ಇನ್ನು ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಜೈಸ್ವಾಲ್ ತಮ್ಮ ಮೊದಲ ಪಂದ್ಯದಲ್ಲಿ ನಿರಾಶೆ ಅನುಭವಿಸಿದರು. ಆಂಧ್ರಪ್ರದೇಶದ ವಿರುದ್ಧ ರಾಹುಲ್ ಕೇವಲ 4 ರನ್​ಗಳಿಸಿದರೆ, ಜೈಸ್ವಾಲ್ ಶೂನ್ಯಕ್ಕೆ ನಿರ್ಗಮಿಸಿದರು. ಸರ್ಫರಾಜ್ ಅಹ್ಮದ್ ಕೇವಲ 1 ರನ್​ಗಳಿಸಿ ಔಟ್ ಆದರು.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed