Last Updated:
ರಶ್ಮಿಕಾ ಮಂದಣ್ಣ ಅವರು ರಣಬಾಲಿ ಹಾಗೂ ಮೈಸಾ ಚಿತ್ರದ ಕೆಲಸವನ್ನ ಬ್ಯಾಕ್ ಟು ಬ್ಯಾಕ್ ಮಾಡುತ್ತಿದ್ದಾರೆ. ಈ ಎರಡೂ ಚಿತ್ರಗಳ ಸಮಯದಲ್ಲಿಯೇ ಸೊಂಟದ ಭಾಗಕ್ಕೆ ತೀವ್ರವಾಗಿಯೇ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ರಶ್ಮಿಕಾ ಮಂದಣ್ಣ ಸದ್ಯ ರೆಸ್ಟ್ ಅಲ್ಲಿಯೇ ಇದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಶ್ಮಿಕಾ ಮಂದಣ್ಣ (Rashmika Mandanna) ಗಾಯಗೊಂಡಿದ್ದಾರೆ. ಸಿನಿಮಾದ ಶೂಟಿಂಗ್ (Cinema Shooting) ಸಮಯದಲ್ಲಿಯೇ ಗಾಯ (Injury) ಮಾಡಿಕೊಂಡಿದ್ದಾರೆ. ಇದರಿಂದ ರಶ್ಮಿಕಾ ಮಂದಣ್ಣ 6 ವಾರಗಳವರೆಗೂ ವಿಶ್ರಾಂತಿ ಪಡೆಯಬೇಕಿದೆ. ಕ್ರೀಡಾಪಟುಗಳಿಗೆ ಆಗುವ ಗಾಯದ ರೀತಿನೇ ರಶ್ಮಿಕಾ ಮಂದಣ್ಣ (Rashmika Mandanna) ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬ್ಯಾಕ್ ಟು ಬ್ಯಾಕ್ ಕೆಲಸ
(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ಆದರೆ, ಈ ಎರಡೂ ಸಿನಿಮಾಗಳ ಸತತ ಕೆಲಸದ ಸಮಯದಲ್ಲಿಯೇ ಇವರು ಸೊಂಟಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಸೊಂಟದ ಭಾಗಕ್ಕೆ ತೀವ್ರವಾದ ಗಾಯ ಆಗಿದೆ.
ಶ್ರೀವಲ್ಲಿ ರಶ್ಮಿಕಾ ಮಂದಣ್ಣ ರೆಸ್ಟ್ ಅಲ್ಲಿಯೇ ಇದ್ದಾರೆ. 6 ವಾರಗಳವರೆಗೂ ಇನ್ನು ವಿಶ್ರಾಂತಿ ಪಡೆಯಬೇಕಿದೆ. ಈ 6 ವಾರಗಳಲ್ಲಿ ಚಿತ್ರದ ಯಾವುದೇ ಕೆಲಸ ಮಾಡುವಂತೆ ಇಲ್ಲ.
ಮೈಸಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಭಾರೀ ಆ್ಯಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕಾಗಿಯೇ ರಶ್ಮಿಕಾ ಭಾರೀ ತಯಾರಿ ಕೂಡ ಮಾಡಿಕೊಂಡಿದ್ದಾರೆ.
ಈ ತಯಾರಿಯೊಂದಿಗೆ ರಶ್ಮಿಕಾ ಮಂದಣ್ಣ ಭರ್ಜರಿ ಆ್ಯಕ್ಷನ್ ಕೂಡ ಮಾಡಿದ್ದಾರೆ. ಈ ಒಂದು ಚಿತ್ರದ ಕೆಲಸವು ಸತತವಾಗಿಯೇ ನಡೆದಿದೆ. ರಣಬಾಲಿ ಸಿನಿಮಾದ ಕೆಲಸವು ನಡೆದಿದೆ.
ರಶ್ಮಿಕಾ ಮಂದಣ್ಣ ಅತಿ ದೊಡ್ಡ ಪ್ರಾಜೆಕ್ಟ್ಗಳನ್ನ ಮಾಡುತ್ತಿದ್ದಾರೆ. ಮೈಸಾ ಚಿತ್ರ ಈ ಒಂದು ಸಾಲಿನಲ್ಲಿದೆ. ರಣಬಾಲಿ ಸಿನಿಮಾ ಕೂಡ ಬಿಗ್ ಪ್ರಾಜೆಕ್ಟ್ ಆಗಿದೆ.
ಸದ್ಯ ರೆಸ್ಟ್ ಅಲ್ಲಿರೋ ರಶ್ಮಿಕಾ
(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ಈ ಚಿತ್ರಗಳ ಕೆಲಸವನ್ನ ಬ್ಯಾಕ್ ಟು ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಗಳ ಕೆಲಸದ ಸಮಯದಲ್ಲಿಯೇ ಸೊಂಟದ ಭಾಗಕ್ಕೆ ಗಾಯ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಸದ್ಯ ರೆಸ್ಟ್ ಅಲ್ಲಿಯೇ ಇದ್ದಾರೆ. ವೈದ್ಯರ ಸಲಹೆಯಂತೆ 6 ವಾರಗಳವರೆಗೂ ಇವರು ವಿಶ್ರಾಂತಿ ಪಡೆಯಬೇಕಿದೆ. ಇದಾದ್ಮೇಲೆ ಮತ್ತೆ ಎಂದಿನಂತೆ ಇವರು ಸಿನಿಮಾ ಕೆಲಸದಲ್ಲಿ ತೊಡಗಬಹುದು ಅನಿಸುತ್ತದೆ.
ರಶ್ಮಿಕಾ ಮಂದಣ್ಣ ಸದ್ಯ ರಣಬಾಲಿ ಮತ್ತು ಮೈಸಾ ಚಿತ್ರಗಳ ಕೆಲಸದಲ್ಲಿಯೇ ಬ್ಯುಸಿ ಇದ್ದರು. ಆದರೆ, ಈ ಚಿತ್ರಗಳು ಬಿಟ್ಟರೆ ಹೊಸ ಚಿತ್ರಗಳ ಘೋಷಣೆ ಏನು ಆಗಿಲ್ಲ ನೋಡಿ.
ಈ ಹಿಂದಿನ ಚಿತ್ರಗಳನ್ನ ನೆನಪಿಸಿಕೊಳ್ಳುವುದಾದ್ರೆ, ಬಾಲಿವುಡ್ನ ಕಾಕ್ಟೇಲ್-2 ಚಿತ್ರ ಬಂದು ಹೋಗಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಅಷ್ಟೇನೂ ಮಹತ್ವ ಕೂಡ ಇರಲಿಲ್ಲ. ದಿ ಗರ್ಲ್ ಫ್ರೆಂಡ್ ಬಂದು ಹೋಯಿತು. ಕುಬೇರ ಸದ್ದು ಮಾಡ್ತು. ಬಾಲಿವುಡ್ನ ಥಮ ಚಿತ್ರ ಬಂತು ಹೋಯಿತು ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Aug 01, 2026 10:53 AM IST














