Ramayana: ರಾಜ ದಶರಥನ ದರ್ಶನ, ಪೋಸ್ಟರ್ ರಿಲೀಸ್ ಮಾಡಿದ ರಾಮಾಯಣ ತಂಡ | Ramayana movie arun govil as dasharath poster released | | ACTPnews

ದಶರಥ (ಚಿತ್ರ ಕೃಪೆ: ವರ್ಲ್ಡ್ ಆಫ್ ರಾಮಾಯಣ ಇನ್​ಸ್ಟಾಗ್ರಾಮ್)


Last Updated:

Ramayana Movie: ಯಶ್, ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾದಲ್ಲಿ ದಶರಥನ ಪಾತ್ರವನ್ನು ಪರಿಚಯ ಮಾಡಲಾಗಿದೆ.

ದಶರಥ (ಚಿತ್ರ ಕೃಪೆ: ವರ್ಲ್ಡ್ ಆಫ್ ರಾಮಾಯಣ ಇನ್​ಸ್ಟಾಗ್ರಾಮ್)
ದಶರಥ (ಚಿತ್ರ ಕೃಪೆ: ವರ್ಲ್ಡ್ ಆಫ್ ರಾಮಾಯಣ ಇನ್​ಸ್ಟಾಗ್ರಾಮ್)

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ (Ramayana Movie) ಅಪ್ಡೇಟ್ಸ್ ಪ್ರೇಕ್ಷಕರನ್ನು ಎಕ್ಸೈಟ್ ಮಾಡುತ್ತಲೇ ಇದೆ. ಸಿನಿಮಾ ಬಿಡುಗಡೆ (Movie Release) ಹಿನ್ನೆಲೆ ಪ್ರಚಾರಗಳು ಜೋರಾಗಿವೆ. ಈ ಬೆನ್ನಲ್ಲೇ ಚಿತ್ರತಂಡ ಇದೀಗ ರಾಮಾಯಣ ಸಿನಿಮಾದಲ್ಲಿ ದಶರಥನ ಪಾತ್ರ ಮಾಡುವ ಅರುಣ್ ಗೋವಿಲ್ ಅವರ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.

ಅವರು ಒಮ್ಮೆ ಒಂದು ಇಡೀ ಜನರೇಷನ್ ಮುಂದೆ ರಾಮನನ್ನು ಜೀವಂತವಾಗಿಸಿದರು. ಈಗ ಅವರು ರಾಮಾಯಣದ ಲೋಕಕ್ಕೆ ಮರಳಿದ್ದು ಈ ಬಾರಿ ಅವರು ರಾಜಾ ದಶರಥನಾಗಿ ಪ್ರೇಕ್ಷಕರ ಮುಂದೆ ಬರುವುದಕ್ಕೆ ರೆಡಿಯಾಗಿದ್ದಾರೆ ಎಂದು ವರ್ಲ್ಡ್ ಆಫ್ ರಾಮಾಯಣ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಬರೆಯಲಾಗಿದೆ. ದಶರಥನಾಗಿ ಅರುಣ್ ಗೋವಿಲ್ ಎಂದೂ ಬರೆಯಲಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರವನ್ನು ನಿರ್ವಹಿಸಿದರೆ, ರವಿ ದುಬೆ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸುತ್ತಾರೆ.

ಈ ಚಿತ್ರದಲ್ಲಿ ಅರುಣ್ ಗೋವಿಲ್ , ಕುನಾಲ್ ಕಪೂರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ . ಈ ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗಿದ್ದು, DNEG ಅದರ ದೃಶ್ಯ ಪರಿಣಾಮಗಳನ್ನು ನಿರ್ವಹಿಸುತ್ತದೆ.

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸುಮಾರು 59,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಯೋಜನೆ ನಿಜವಾದರೆ ಭಾರತೀಯ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed