Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews

peddi movie ram charan workout video share on social media


ಪೆದ್ದಿ ಪೈಲ್ವಾನ್ ಆದದ್ದು ಹೇಗೆ

ರಾಮ್ ಚರಣ್ ಈ ಹಿಂದೆ ಚಿತ್ರ ಮಾಡಿದ್ದಾರೆ. ಒಳ್ಳೆ ಹೆಸರು ಮಾಡಿದ್ದಾರೆ. ಆದರೆ, ಇಡೀ ದೇಹವನ್ನ ಕಲ್ಲಿನಂತೆ ಗಟ್ಟಿ ಮಾಡಿಕೊಳ್ಳುವ ಪಾತ್ರವೇ ಬಂದಿರಲಿಲ್ಲ.
ಶಿವಣ್ಣ ಫುಲ್ ಫಿದಾ

(ಚಿತ್ರ ಕೃಪೆ: ರಾಮ್ ಚರಣ್ ಇನ್‌ಸ್ಟಾಗ್ರಾಮ್)

ಆದರೆ, ಡೈರೆಕ್ಟರ್ ಬುಚಿ ಬಾಬು ಸನಾ ಇಂತಹ ಒಂದು ಪಾತ್ರ ಬರೆದಿದ್ದಾರೆ. ಇದು ಕ್ರೀಡೆಯಲ್ಲಿ ಮಾಸ್ಟರ್ ಆಗಿರೋ ಪಾತ್ರವೇ ಆಗಿದೆ. ಕ್ರಿಕೆಟ್ ಅಲ್ಲೂ ಈ ಪೆದ್ದಿ ಮುಂದೆ ಇರುತ್ತಾನೆ. ರನ್ನಿಂಗ್ ಅಲ್ಲೂ ಈ ಪೆದ್ದಿನೆ ಇತರರಿಗೂ ಸ್ಪೂರ್ತಿ ನೋಡಿ.

ಪೈಲ್ವಾನ್ ಕೂಡ ಆದ ಪೆದ್ದಿ

ಪೆದ್ದಿ ಚಿತ್ರದಲ್ಲಿ ರಾಮ್ ಚರಣ್ ಪೈಲ್ವಾನ್ ಕೂಡ ಆಗಿದ್ದಾರೆ. ಗುರು ಗೌರ್ ನಾಯ್ಡು ಶಿವಣ್ಣ ಇಲ್ಲಿ ಈ ಪೆದ್ದಿಗೆ ಕುಸ್ತಿ ತರಬೇತಿ ಕೊಡ್ತಾರೆ.

ಪೈಲ್ವಾನ್ ಪೆದ್ದಿ ಮೇಕಿಂಗ್

ಪೈಲ್ವಾನ್ ಪೆದ್ದಿ ಪಾತ್ರದ ಸಮಯದಲ್ಲಿ ಏನೆಲ್ಲ ಆಯಿತು. ಯಾವ ರೀತಿ ಈ ಪಾತ್ರದ ಚಿತ್ರೀಕರಣ ಆಗಿದೆ. ರೇನ್ ಎಫೆಕ್ಟ್ ಅಲ್ಲಿ ಅದೆಷ್ಟು ಕಷ್ಟ ಆಯಿತು.

ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಅದು ಮೇಕಿಂಗ್ ವಿಡಿಯೋದಲ್ಲಿಯೇ ಇದೆ. ಈ ಒಂದು ವಿಡಿಯೋವನ್ನ ರಾಮ್ ಚರಣ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.

ಮೇಕಿಂಗ್ ವಿಡಿಯೋ ನೋಡಿದ್ರೆ

ಈ ಪೆದ್ದಿ ಚಿತ್ರದ ಮೇಕಿಂಗ್ ವಿಡಿಯೋ ನೋಡಿದ್ರೆ ರಾಮ್ ಚರಣ್ ಅವರ ಕಷ್ಟದ ಕ್ಷಣಗಳು ಗೊತ್ತಾಗುತ್ತವೆ. ಒಂದು ಪಾತ್ರಕ್ಕೆ ಅದೆಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ತಿಳಿಯುತ್ತದೆ.

peddi movie ram charan workout video share on social media

ಪೆದ್ದಿ ಪೈಲ್ವಾನ್

ಪೈಲ್ವಾನ್ ರೀತಿ ಸಿನಿಮಾಗಾಗಿಯೇ ಕಾಣಿಸೋದು ಬೇರೆ. ಆದರೆ, ಪೈಲ್ವಾನ್ ಆಗಿಯೇ ಬದಲಾಗುವುದು ಕಷ್ಟವೇ ನೋಡಿ. ರಾಮ್ ಚರಣ್ ಅದನ್ನ ಸಾಧಿಸಿದ್ದಾರೆ. ಇನ್ನಿಲ್ಲದಂತೆ ಕಷ್ಟಪಟ್ಟು ದೇಹವನ್ನ ಕಲ್ಲಿನಂತೆ ಮಾಡಿಕೊಂಡಿದ್ದಾರೆ. ಅದರ ಫಲವೇ ಇಡೀ ಚಿತ್ರದಲ್ಲಿ ರಾಮ್ ಚರಣ್ ರಿಯಲ್ ಪೈಲ್ವಾನ್ ಅನಿಸುತ್ತಾರೆ.

ಶಿವಣ್ಣ ಫುಲ್ ಫಿದಾ

ಶಿವರಾಜ್ ಕುಮಾರ್ ಫಿದಾ ಆಗಿದ್ದಾರೆ. ರಾಮ್ ಚರಣ್ ಅವರ ಕಷ್ಟವನ್ನ ನೋಡಿದ್ದಾರೆ. ದೇಹ ಬದಲಾಗೋವುದನ್ನು ಕಂಡಿದ್ದಾರೆ. ಕೊನೆಗೆ ಬಂದ ರಿಸಲ್ಟ್ ಅನ್ನೂ ನೋಡಿ ಆಶ್ಚರ್ಯ ಪಟ್ಟಿದ್ದಾರೆ.

ಮೇ-4 ರಂದು ಚಿತ್ರ ರಿಲೀಸ್

ಪೆದ್ದಿ ಚಿತ್ರ ಮೇ-4 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಈ ಚಿತ್ರದ ಪ್ರೀಮಿಯರ್ ಶೋ ಪ್ಲಾನ್ ಆಗಿವೆ. ಮೇ-3 ರಂದು ಈ ಚಿತ್ರದ ಪ್ರೀಮಿಯರ್ ಶೋ ಇವೆ.

ಇದರಲ್ಲಿಯೇ ಚಿತ್ರ ಹೇಗಿದೆ ಅನ್ನೋದು ಒಂದು ದಿನ ಮೊದಲೇ ತಿಳಿಯುತ್ತದೆ. ದೇಶ ವಿದೇಶಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ರತ್ನವೇಲು ಅವರ ಕ್ಯಾಮರಾವರ್ಕ್, ಎ.ಆರ್.ರೆಹಮಾನ್ ಸಂಗೀತ ಇಲ್ಲಿ ಮೋಡಿ ಮಾಡಿದೆ. ಬುಚಿ ಬಾಬು ಸನಾ ಅವರ ಕತೆ ಯಾವ ರೀತಿ ಸ್ಪೂರ್ತಿ ನೀಡುತ್ತದೆ ಅನ್ನೋದು ಸದ್ಯದ ಕುತೂಹಲ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed