Metro Rail: ಮೆಟ್ರೋದಲ್ಲಿ ಯುವತಿಯಿಂದ ಮೇಕಪ್ ಬ್ರ್ಯಾಂಡ್ ಪ್ರಚಾರ, ಹೀಗೆ ಮಾಡಬಹುದಾ? ವೈರಲ್ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವೈರಲ್ ವಿಡಿಯೋ ಸ್ಕ್ರೀನ್ ಶಾಟ್


Last Updated:

ದೆಹಲಿಯ ಮಹಿಳಾ ಮೀಸಲು ಮೆಟ್ರೋ ಕೋಚ್ ನಲ್ಲಿ ಸೈಶಾ ತಮ್ಮ ಮೇಕಪ್ ಸ್ಟಾರ್ಟ್ ಅಪ್ ಬ್ರ್ಯಾಂಡ್ ಪ್ರಚಾರದ ವಿಡಿಯೋ ವೈರಲ್, ಮೆಟ್ರೋಗಳಲ್ಲಿ ಅನಧಿಕೃತ ಪ್ರಚಾರ ನಿಷೇಧಿತ ಎಂದು ನೆನಪು

ವೈರಲ್ ವಿಡಿಯೋ ಸ್ಕ್ರೀನ್ ಶಾಟ್
ವೈರಲ್ ವಿಡಿಯೋ ಸ್ಕ್ರೀನ್ ಶಾಟ್

ಯುವತಿಯೊಬ್ಬರು ಮಹಿಳೆಯರಿಗಾಗಿ (Woman) ಮಾತ್ರವೇ ಮೀಸಲು ಇಟ್ಟಿದ್ದ ಮಹಿಳಾ ಕೋಚ್ (Metro Coach) ಅನ್ನು ಬಳಕೆ ಮಾಡಿಕೊಂಡು ತಮ್ಮ ಮೇಕಪ್ ಸ್ಟಾರ್ಟ್ ಅಪ್ (Makeup Startups) ಬಗ್ಗೆ ಪ್ರಚಾರ ಮಾಡಿದ್ದಾರೆ. ಅಲ್ಲದೇ, ಪ್ರಯಾಣಿಕರೊಂದಿಗೆ ನೇರವಾಗಿ ಮಾತನಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.

ಹೊಸ ಸ್ಟಾರ್ಟ್ ಮಾಡುವ, ಹೊಸ ಬ್ಯುಸಿನೆಸ್ ಶುರು ಮಾಡುವ ಇಂದಿನ ನವೋದ್ಯಮಿಗಳು ತಮ್ಮ ಉತ್ಪನ್ನದ ಬಗ್ಗೆ ಪ್ರಚಾರ ಮಾಡಲು ವಿವಿಧ ತಂತ್ರಗಳನ್ನು ಬಳಕೆ ಮಾಡುತ್ತಾರೆ. ಸಾಮಾನ್ಯವಾಗಿ ಹಲವು ಸಾರ್ವಜನಿಕರ ಸ್ಥಳಗಳಲ್ಲಿ ಸರಳವಾಗಿ ತಮ್ಮ ಉತ್ಪನ್ನದ ಬಗ್ಗೆ ಮಾಹಿತಿ ನೀಡಿ ಪ್ರಚಾರ ಮಾಡ್ತಾರೆ. ಆದರೆ ಇಲ್ಲೋರ್ವ ಯುವತಿ ಮೆಟ್ರೋದಲ್ಲಿಯೇ ಪ್ರಚಾರಕ್ಕೆ ಇಳಿದು ಎಲ್ಲರ ಗಮನ ಸೆಳೆದಿದ್ದಾರೆ.

ಅಂದಹಾಗೇ, ಈ ಘಟನೆ ನಡೆದಿರೋದು ದೆಹಲಿಯ ಮೆಟ್ರೋದಲ್ಲಿ. ಯುವತಿ ತನ್ನ ಮೇಕಪ್ ಬ್ರ್ಯಾಂಡ್ ಬಗ್ಗೆ ಪ್ರಚಾರ ಮಾಡಿಕೊಳ್ಳಲು ಮೆಟ್ರೋದ ಮಹಿಳಾ ಮೀಸಲು ಕೋಚ್ ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೇ, ಈ ಸಂದರ್ಭದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಿನನಿತ್ಯದ ಚಟುವಟಿಕೆಗಳ ಪ್ರಯಾಣದ ಸಂದರ್ಭದಲ್ಲಿ ಜನರು ಮೆಟ್ರೋ ರೈಲುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಸೈಶಾ ಎಂಬ ಇನ್ ಸ್ಟಾ ಖಾತೆ ಹೊಂದಿರುವ ಯುವತಿ ದಿಟ್ಟ ಹೆಜ್ಜೆ ಇಟ್ಟು, ತಮ್ಮ ಬ್ರ್ಯಾಂಡ್ ಬಗ್ಗೆ ಪ್ರಚಾರ ಮಾಡಿ, ಸಹ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಈ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ ಅಂತ ನೋಡುವುದಾದರೆ, ಮೊದಲಿಗೆ ಯುವತಿ ಮೆಟ್ರೋ ನಿಲ್ದಾಣದಲ್ಲಿ ತಾವು ಏನು ಮಾಡ್ತೀವಿ ಅನ್ನೋದನ್ನು ವಿಡಿಯೋ ಮಾಡುತ್ತಾ ವಿವರಿಸಿದ್ದಾರೆ. ಅಲ್ಲದೇ ಈ ರೀತಿ ಮಾಡಲು ನನಗೆ ಅನುಮತಿ ಇದೆಯೋ ತಿಳಿದಿಲ್ಲ ಎಂದಿರುವ ಆಕೆ, ಮೇಕಪ್ ಬ್ರ್ಯಾಂಡ್ ಬಗ್ಗೆ ಪ್ರಚಾರ ಮಾಡಲು ಮಹಿಳಾ ಮೀಸಲು ಇರುವ ಮೆಟ್ರೋ ಕೋಚ್​ಗಿಂತ ಉತ್ತಮ ಸ್ಥಳ ಬೇರೆ ಇರೋದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vijayapura: ಬಿಚ್ಚಿಕೊಳ್ತು ಭೀಮಾತೀರದ ಕೊಲೆ ರಹಸ್ಯ; ಸಿನಿಮಾವನ್ನೂ ಮೀರಿಸುತ್ತೆ ಹಂತಕರ ಸ್ಕೆಚ್‌‌!

ಆ ಬಳಿಕ ಮೆಟ್ರೋ ಕೋಚ್​ಗೆ ಎಂಟ್ರಿ ಆಗಿರುವ ಯುವತಿ, ಪ್ರಯಾಣಿಕರಿಗೆ ನೇರವಾಗಿ ತಮ್ಮ ಬ್ರ್ಯಾಂಡ್ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಲು ಪ್ರಾರಂಭಿಸುತ್ತಾರೆ. ಒಂದು ಕೋಚ್ ನಿಂದ ಮತ್ತೊಂದು ಕೋಚ್ ನಡುವೆ ಚಲಿಸುತ್ತಾ ಉತ್ಪನ್ನದ ವಿಶೇಷತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪ್ರಯಾಣಿಕರು ಕೂಡ ಯುವತಿ ಏನು ಹೇಳುತ್ತಿದ್ದಾಳೆ ಎಂದು ಆಸಕ್ತಿಯಿಂದ ಕೇಳಲು ಶುರು ಮಾಡುವ ದೃಶ್ಯಗಳನ್ನು ನೋಡಬಹುದು. ಆದರೆ ಯುವತಿಯ ಮಾತು ಕೇಳಿಸಿಕೊಂಡ ಇತರ ಮಹಿಳೆಯರು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಇದರಿಂದ ನನಗೆ ಬೇಸರ ಆಗಿಲ್ಲ, ಒಂದು ಒಳ್ಳೆಯ ಅನುಭವ ಸಿಕ್ತು ಎಂದು ಯುವತಿ ಹೇಳಿದ್ದಾರೆ.

ಇನ್ನು, ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಹಲವರು, ಯುವತಿಯ ಕಲ್ಪನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಅತ್ಯುತ್ತಮ ತಂತ್ರ, ನಾನು ಅಲ್ಲಿದಿದ್ದರೆ ನಿಮಗೆ ಬೆಂಬಲ ನೀಡುತ್ತಿದ್ದೆ. ಇದಕ್ಕೆ ತುಂಬಾ ಧೈರ್ಯಬೇಕು ಎಂದು ಇತರರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಮೆಟ್ರೋದಲ್ಲಿ ಕರಪತ್ರ ಹಂಚಿಕೆ ಮಾಡುವುದು, ಕೂಗಿ ಪ್ರಚಾರ ಮಾಡುವುದು, ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಆದರೆ ಅಧಿಕೃತವಾಗಿ ಕಡಿಮೆ ಮೊತ್ತ ಖರ್ಚು ಮಾಡಿ ನೀವು ಮೆಟ್ರೋದಲ್ಲಿ ಜಾಹೀರಾತು ನೀಡಬಹುದು. ಇದಕ್ಕೆ ನೀವು ಮೆಟ್ರೋ ಅಧಿಕಾರಿಗಳನ್ನು ಸಂಪರ್ಕ ಮಾಡಿ, ಡಿಜಿಟಲ್ ಸ್ಕ್ರೀನ್ ಗಳ ಮೇಲೆ ಜಾಹೀರಾತು ಪ್ರಕಟಣೆ ಮಾಡಿಸಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed