Last Updated:
ಇದೀಗ ನಟಿ ರಾಖಿ ಸಾವಂತ್ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ನಟ ಆಮಿರ್ ಖಾನ್ ಕುರಿತು ಅವರು ನೀಡಿದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ.
ಮನರಂಜನೆಗೆ ಮತ್ತೊಂದು ಹೆಸರೇ ರಾಖಿ ಸಾವಂತ್ (Rakhi Sawant). ಡ್ರಾಮಾ ಕ್ವೀನ್ ಎಂದೇ ಪ್ರಸಿದ್ಧರಾಗಿರುವ ಇವರು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ತುಂಬಾ ಫೇಮಸ್. ರಾಖಿ ಸಾವಂತ್ ಅವರ ಹೆಸರು ಯಾವಾಗಲೂ ಒಂದಲ್ಲಾ ಒಂದು ಕಾರಣದಿಂದಾಗಿ ಸುದ್ದಿಯಲ್ಲಿರುತ್ತದೆ. ರಾಖಿ ಸಾವಂತ್ ಅವರ ನೇರ ಮಾತು, ಅವರ ಬಟ್ಟೆ, ಅವರ ನೇರ ನಡೆ, ಅವರ ಮಾನವೀಯತೆ, ಇವೆಲ್ಲವೂ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ನಟಿಯ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ನಟ ಆಮಿರ್ ಖಾನ್ ಕುರಿತು ಅವರು ನೀಡಿದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ.
ಏನಪ್ಪಾ ವಿಚಾರ ಅಂದ್ರೆ ಇತ್ತೀಚಿಗೆ ರಾಖಿ ಸಾವಂತ್, ಆಮಿರ್ ಖಾನ್ ಮೂರನೇ ಬಾರಿಗೆ ಮದುವೆಯಾಗಲಿದ್ದಾರೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಆಮಿರ್ ಖಾನ್ ಮತ್ತೆ ಮದುವೆಯಾಗಲು ಬಯಸಿದರೆ ತಾವು ಸಿದ್ಧವಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಅಗತ್ಯವಿದ್ದರೆ ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕೂ ಸಿದ್ಧ ಎಂದು ನಟಿ ಹೇಳಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಖಿ ಸಾವಂತ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಹೇಳಿಕೆಯನ್ನು ಹಾಸ್ಯವಾಗಿ ಪರಿಗಣಿಸಿ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಟ್ರೋಲ್ ಮಾಡಿದ್ದಾರೆ. ಹಲವು ಬಳಕೆದಾರರು ಅವರ ಹಿಂದಿನ ವೈಯಕ್ತಿಕ ಜೀವನವನ್ನು ಉಲ್ಲೇಖಿಸುತ್ತಾ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ರಾಖಿ ಸಾವಂತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಲ ನೆಟ್ಟಿಗರು, ಅವರು ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದು, ಬಳಿಕ ವಿಚ್ಛೇದನವನ್ನೂ ಪಡೆದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ, ಕೆಲ ಅಭಿಮಾನಿಗಳು ರಾಖಿಯ ಮಾತುಗಳನ್ನು ತಮಾಷೆಯಾಗಿ ಮಾತ್ರ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಹಾಗೂ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅಧಿಕೃತವಾಗಿ ಯಾವುದೇ ದೃಢೀಕರಣ ಲಭ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಖಿ ಸಾವಂತ್ ನೀಡಿರುವ ಹೇಳಿಕೆ ಮನರಂಜನಾ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
Bangalore [Bangalore],Bangalore,Karnataka
Jun 30, 2026 12:34 PM IST













