Pregnant: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಡಿಎನ್​​ಎ ಟೆಸ್ಟ್​​ಗೆ ಪಟ್ಟು ಹಿಡಿದ ಗಂಡ, ನೊಂದು ನೇಣಿಗೆ ಶರಣಾದ ಪತ್ನಿ | Crime News | ACTPnews

ಮೃತ ಮಹಿಳೆ/ ಬಂಧಿತ ಆರೋಪಿ


Last Updated:

ಮೆದಕ್ ನಲ್ಲಿ ಗರ್ಭಿಣಿ ಮಹಿಳೆಗೆ ಡಿಎನ್ಎ ಟೆಸ್ಟ್ ಒತ್ತಾಯ, ದೈಹಿಕ ಮಾನಸಿಕ ಹಿಂಸೆ ಕಾರಣ ಆತ್ಮಹತ್ಯೆ, ಪತಿ-ಅತ್ತೆ ಬಂಧನ, ಐಪಿಸಿ ಸೆಕ್ಷನ್ 85, 108, 3(5) ಅಡಿ ಎಫ್ಐಆರ್ ದಾಖಲು.

ಮೃತ ಮಹಿಳೆ/ ಬಂಧಿತ ಆರೋಪಿ
ಮೃತ ಮಹಿಳೆ/ ಬಂಧಿತ ಆರೋಪಿ

ಹೊಟ್ಟೆಯಲ್ಲಿದ್ದ ಮಗುವಿಗೆ ಡಿಎನ್​​ಎ ಪರೀಕ್ಷೆ (DNA Test) ಮಾಡಲು ಪತಿ ಹಠಕ್ಕೆ ಬಿದ್ದ ಕಾರಣ, ನೊಂದುಕೊಂಡ ಪತ್ನಿ (Wife) ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ (Telangana) ಮೆದಕ್ ಜಿಲ್ಲೆಯಲ್ಲಿ ಘಟನೆ ವರದಿಯಾಗಿದ್ದು, ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿಯನ್ನು (Husband) ಬಂಧಿಸಿದ್ದಾರೆ.

ಏನಿದು ಪ್ರಕರಣ?

ಮೆದಕ್ ಜಿಲ್ಲೆಯ ನಿವಾಸಿಗಳಾಗಿದ್ದ 23 ವರ್ಷದ ಸುಶ್ಮಿತಾ, ಜಿ ಅಭಿಲಾಷ್ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಪತ್ನಿ ಗರ್ಭಿಣಿಯಾಗಿದ್ದಳು. ಆದರೆ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದಲ್ಲ ಎಂದು ಆರೋಪಿಸಿದ್ದ ಪತಿ ಪ್ರವೀಣ್, ತೀವ್ರವಾಗಿ ನಿಂಧಿಸಲು ಶುರು ಮಾಡಿದ್ದನಂತೆ.

ಅಲ್ಲದೇ, ಹೊಟ್ಟೆಯಲ್ಲಿರುವ ಮಗು ತನ್ನದೇ ಅಂತ ಸಾಬೀತು ಪಡಿಸಲು ಭ್ರೂಣಕ್ಕೆ ಡಿಎನ್​​ಎ ಟೆಸ್ಟ್ ನಡೆಸಲು ಸುಶ್ಮಿತಾಗೆ ನಿರಂತರವಾಗಿ ದೈಹಿಕ, ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದನಂತೆ. ಈ ಕಿರುಕುಳ ಮನೆಯಲ್ಲಿದ್ದ ಅತ್ತೆ-ಮಾವ ಕೂಡ ಸಾಥ್ ನೀಡಿದ್ದರುವ ಆರೋಪ ಕೇಳಿ ಬಂದಿದೆ. ಅನುಮಾನದಿಂದ ಪ್ರತಿದಿನ ಹೆಚ್ಚಾಗುತ್ತಿದ್ದ ಪತಿಯ ಕಿರುಕುಳದಿಂದ ನೊಂದ ಶ್ರಾವಣಿ, ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೃತ ಸುಶ್ಮಿತಾ ತಂದೆ ಪೊಲೀಸರಿಗೆ ನೀಡಿದ ಮೇರೆಗೆ ಎಫ್​​ಐಆರ್ ದಾಖಲಾಗಿದ್ದು, ಗರ್ಭಿಣಿಯಾಗಿದ್ದ ಮಗಳಿಗೆ ತೀವ್ರ ಹಿಂಸೆ ನೀಡಿ ಮಗಳ ಸಾವಿಗೆ ಕಾರಣವಾಗಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಎನ್​​ಡಿ ಟಿವಿ ವರದಿ ಮಾಡಿದೆ.

ಇದನ್ನೂ ಓದಿ: Earn with Bed: ಬಾಡಿಗೆಗೆ ಸಿಗುತ್ತೆ ಅರ್ಧ ಬೆಡ್, ಮಹಿಳೆಯ ಪಕ್ಕದಲ್ಲೇ ನಿದ್ದೆ ಮಾಡುವ ಆಫರ್! ಷರತ್ತುಗಳು ಅನ್ವಯ!

ಮೃತ ಸುಶ್ಮಿತಾ ತಂದೆ-ತಾಯಿ ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರೇರಣೆ ನೀಡಿದ ಆರೋಪ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ), 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಸಾಮಾನ್ಯ ಉದ್ದೇಶಕ್ಕೆ ಸಂಬಂಧಿಸಿದ ಸೆಕ್ಷನ್ 3(5) ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪತಿ ಜಿ ಅಭಿಲಾಷ್, ಅತ್ತೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಸುದ್ದಿ/ ನ್ಯೂಸ್/Crime/

Pregnant: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಡಿಎನ್​​ಎ ಟೆಸ್ಟ್​​ಗೆ ಪಟ್ಟು ಹಿಡಿದ ಗಂಡ, ನೊಂದು ನೇಣಿಗೆ ಶರಣಾದ ಪತ್ನಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed