Raj B Shetty: ಕರಾವಳಿ ಸಿನಿಮಾ ನೋಡಿ ಶಿವಮೊಗ್ಗ ಜನ ಏನಂದ್ರು? ಪ್ರೀಮಿಯರ್ ಶೋಗೆ ಪ್ರತಿಕ್ರಿಯೆ ಹೇಗಿತ್ತು? | | ACTPnews

ಕರಾವಳಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ; ಉಸೇನ್ ಬೋಲ್ಟ್ಗೆ ಹೋಲಿಸಿದ ಶಿವಮೊಗ್ಗ ಜನ!


Last Updated:

ಕರಾವಳಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ಪಾತ್ರವನ್ನ ಜನ ಹೆಚ್ಚಾಗಿಯೇ ಮೆಚ್ಚಿಕೊಂಡಿದ್ದಾರೆ. ಉಸೇನ್ ಬೋಲ್ಟ್ ಗೂ ಇವರನ್ನ ಹೋಲಿಸಿದ್ದಾರೆ. ಶಿವಮೊಗ್ಗದ ಜನ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಕರಾವಳಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ; ಉಸೇನ್ ಬೋಲ್ಟ್ಗೆ ಹೋಲಿಸಿದ ಶಿವಮೊಗ್ಗ ಜನ!
ಕರಾವಳಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ; ಉಸೇನ್ ಬೋಲ್ಟ್ಗೆ ಹೋಲಿಸಿದ ಶಿವಮೊಗ್ಗ ಜನ!

ಕರಾವಳಿ ಚಿತ್ರಕ್ಕೆ (Karavali Movie) ಭಾರೀ ರೆಸ್ಪಾನ್ಸ್ ಬರ್ತಿದೆ. ಮಂಗಳೂರು ಜನ ತಮ್ಮೂರಿನ ಕತೆ ಅಂತ ಮೆಚ್ಚಬಹುದು. ಆದರೆ, ಶಿವಮೊಗ್ಗದ (Shivamogga) ಜನರ ಕೂಡ ಇದನ್ನ ಕೊಂಡಾಡಿದ್ದಾರೆ. ಎಲ್ಲಿಂದ ತರ್ತಾರೆ ಇಂತಹ ಕತೆ ಅಂತಲೂ ಆಶ್ಚರ್ಯ ಪಟ್ಟಿದ್ದಾರೆ. ರಾಜ್‌ ಬಿ ಶೆಟ್ಟಿ (Raj B Shetty) ಇಲ್ಲಿ ಉಸೇನ್ ಬೋಲ್ಟ್ (Usain Bolt) ತರವೇ ಕಾಣಿಸಿದ್ದಾರೆ. ಇವರು ಬಂದ್ಮೇಲೆ ಇಡೀ ಚಿತ್ರದ ಚಾರ್ಮ್ ಬದಲಾಗುತ್ತದೆ. ಪ್ರಜ್ವಲ್ ದೇವರಾಜ್ ಪಾತ್ರಕ್ಕೂ ಇಲ್ಲಿ ಬೆಲೆ ಇದೆ. ಜನ ಕೂಡ ಅದನ್ನ ಮೆಚ್ಚಿರೋದು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಉಸೇನ್ ಬೋಲ್ಟ್

ರಾಜ್ ಬಿ ಶೆಟ್ಟಿ ಇಲ್ಲಿ ಉಸೇನ್ ಬೋಲ್ಟ್ ತರವೇ ಕಾಣಿಸಿದ್ದಾರೆ. ಇವರ ಆಗಮನದಿಂದ ಚಿತ್ರ ಮತ್ತೊಂದು ಲೆವೆಲ್‌ಗೆ ಹೋಗುತ್ತದೆ.
Karavali Movie Premier Show Shivamogga Public Response

ಜುಲೈ-24 ರಂದು ಚಿತ್ರ ರಿಲೀಸ್

(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)

ಆ ರೀತಿನೇ ರಾಜ್ ಬಿ ಶೆಟ್ಟಿ ಇಲ್ಲಿ ನಟಿಸಿದ್ದಾರೆ. ಇವರ ಅಭಿನಯವನ್ನ ಕೊಂಡಾಡಿದ ಜನರು ಇವರನ್ನ ಉಸೇನ್ ಬೋಲ್ಟ್ಗೆ ಹೋಲಿಸಿದ್ದಾರೆ ನೋಡಿ.

ಮಹಾಬಲ ಸೂಪರ್

ಮಹಾಬಲ ಪಾತ್ರವು ವಿಶೇಷವಾಗಿಯೇ ಕಾಣಿಸಿದೆ. ಸದಾ ನಗಿಸ್ತಾನೇ ಇದ್ದ ಮಿತ್ರ, ಈ ಚಿತ್ರದಲ್ಲಿ ಅಳಿಸಿದ್ದಾರೆ. ಪ್ರೀಮಿಯರ್ ಶೋದಲ್ಲಿ ಚಿತ್ರ ನೋಡಿದ ಜನರಿಗೆ ನೇರವಾಗಿಯೇ ಮಿತ್ರ ನೋಡುವ ಅವಕಾಶವು ಸಿಕ್ಕಿದೆ.

ಪ್ರಜ್ವಲ್ ದೇವರಾಜ್

ಕರಾವಳಿ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕೂಡ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಇವರ ಪಾತ್ರವನ್ನು ಕೂಡ ಜನ ಮೆಚ್ಚಿಕೊಂಡಿದ್ದಾರೆ.

ಮಹಾಬಲ, ಮಹಾವೀರ ಪಾತ್ರಗಳನ್ನೆ ಹೆಚ್ಚಾಗಿ ಮೆಚ್ಚಿಕೊಂಡ ಜನರಿಗೆ ಪಜ್ವಲ್ ದೇವರಾಜ್ ಕುಮಾರ್ ಇಷ್ಟ ಆಗಿದ್ದಾರೆ. ಆದರೆ, ಇವರೆಲ್ಲರನ್ನ ಮೆಚ್ಚಿಕೊಳ್ಳಲು ಮೂಲ ಕಾರಣ ಯಾರು? ಅದು ಡೈರೆಕ್ಟರ್ ಅಲ್ವೇ? ಈ ಚಿತ್ರದಲ್ಲಿ ಬೇರೆ ಯಾರೂ ಹೀರೋ ಅಲ್ವೇ ಅಲ್ಲ ನೋಡಿ.

Karavali Movie Premier Show Shivamogga Public Response

ಜುಲೈ-24 ರಂದು ಚಿತ್ರ ರಿಲೀಸ್

(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)

ಡೈರೆಕ್ಟರೇ ಹೀರೋ ನೋಡಿ

ಕರಾವಳಿ ಚಿತ್ರದಲ್ಲಿ ಯಾರೂ ಹೀರೋ ಅಲ್ವೇ ಅಲ್ಲ. ಬದಲಾಗಿ ಡೈರೆಕ್ಟರೇ ಈ ಚಿತ್ರದ ಹೀರೋ ನೋಡಿ ಅನ್ನುವ ಅಭಿಪ್ರಾಯವು ಇಲ್ಲಿ ಬಂದಿವೆ.

ಈ ಚಿತ್ರದ ಬಗ್ಗೆ ಈ ಅಭಿಪ್ರಾಯ ಶಿವಮೊಗ್ಗದಲ್ಲಿಯೆ ಬಂದಿದೆ. ಮೊನ್ನೆ ಜುಲೈ-19 ರಂದು ಈ ಚಿತ್ರದ ಮೊದಲ ಪ್ರೀಮಿಯರ್ ಶೋ ನಡೆದಿದೆ. ಅದಾದ್ಮೇಲೆ ಜುಲೈ-20 ರಂದು ಶಿವಮೊಗ್ಗದಲ್ಲಿಯೇ ಈ ಚಿತ್ರದ ಪ್ರೀಮಿಯರ್ ಶೋ ಆಗಿದೆ ನೋಡಿ.

ಜುಲೈ-24 ರಂದು ಚಿತ್ರ ರಿಲೀಸ್

ಈ ಚಿತ್ರದ ಪ್ರೀಮಿಯರ್ ಶೋ ನಾಲ್ಕು ಕಡೆಗೆ ಪ್ಲಾನ್ ಆಗಿದೆ. ಈಗಾಗಲೇ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಆಗಿದೆ. ಜುಲೈ-21 ರಂದು ದಾವಣಗೆರೆಯಲ್ಲಿಯೇ ಈ ಚಿತ್ರದ ಪ್ರೀಮಿಯರ್ ಶೋ ಇದೆ.

ಇದಾದ್ಮೇಲೆ ಜುಲೈ-22 ರಂದು ಮೈಸೂರಿನಲ್ಲಿ ಪ್ರೀಮಿಯರ್ ಶೋ ಇದೆ. ಹಾಗೆ ಜುಲೈ-23 ರಂದು ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಪ್ಲಾನ್ ಆಗಿದೆ. ಮರು ದಿನ ಜುಲೈ-24 ರಂದು ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ.

ಕರಾವಳಿ ಚಿತ್ರದ ಇತರ ಮಾಹಿತಿ

ಕರಾವಳಿ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ಇವರು ಈ ಚಿತ್ರದ ನಿರ್ಮಾಪಕರೂ ಆಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್, ಸಂಪದ, ರಾಜ್ ಬಿ ಶೆಟ್ಟಿ, ಮಿತ್ರ, ಶ್ರೀಧರ್, ರಮೇಶ್ ಇಂದಿರಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed