Last Updated:
ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಗಸ್ಟ್ 6-17ರವರೆಗೆ 220ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ಪಶ್ಚಿಮ ಗಂಗರ ಇತಿಹಾಸ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿ ಬೆಂಗಳೂರಿನ (Bengaluru) ಪ್ರಸಿದ್ಧ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನವು (Flower Show) ಕೇವಲ ಹೂವುಗಳ ಹಬ್ಬವಷ್ಟೇ ಅಲ್ಲ, ಕರ್ನಾಟಕವನ್ನು (Karnataka) ದೀರ್ಘಕಾಲ ಆಳಿದ ಪಶ್ಚಿಮ ಗಂಗರ ರೋಮಾಂಚಕ ಇತಿಹಾಸವನ್ನು ತೆರೆದಿಡಲಿದೆ. ಆಗಸ್ಟ್ 6 ರಿಂದ 17ರವರೆಗೆ ನಡೆಯಲಿರುವ ಈ ವಿಶೇಷ ಪ್ರದರ್ಶನದಲ್ಲಿ ಗಂಗರ ಕಾಲದ ವೈಭವವನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.
ಕಿ.ಶ. 350 ರಿಂದ 1004 ರವರೆಗೆ ಆಡಳಿತ ನಡೆಸಿದ ಪ್ರಮುಖ ರಾಜವಂಶವಾದ ಪಶ್ಚಿಮ ಗಂಗರ ಆಡಳಿತ, ವಾಸ್ತುಶಿಲ್ಪ, ಶಿಕ್ಷಣ ಮತ್ತು ಸಂಸ್ಕೃತಿಯ ಅನಾವರಣ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.
ನಂದಿ ಬೆಟ್ಟದ ಯೋಗ ನಂದೀಶ್ವರ ದೇವಸ್ಥಾನ, ಕೋಣಾರ್ಕ್, ರಾಷ್ಟ್ರಕೂಟರ ಮೇಲಿನ ಯುದ್ಧದ ಸನ್ನಿವೇಶಗಳು ಹಾಗೂ ಗೊಮ್ಮಟೇಶ್ವರ ಪ್ರತಿಮೆಯ ಅರ್ಧಭಾಗದ ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದು.
ಗಂಗ ರಾಜವಂಶದ ಸ್ಥಾಪಕ ದಡಿಗ ಅಥವಾ ಕೊಂಗುಣಿವರ್ಮ, ಶ್ರೀಪುರುಷ, ರಾಜಮಲ್ಲ, ಮಾರಸಿಂಹ ಮುಂತಾದ ಪ್ರಮುಖ ರಾಜರುಗಳ ಪ್ರತಿಮೆಗಳು ಹಾಗೂ ಗಂಗರ ಕಾಲದ ಶಾಸನಗಳು ಮತ್ತು ವೀರಗಲ್ಲುಗಳ ಮಾದರಿಗಳನ್ನು ಇಲ್ಲಿ ವೀಕ್ಷಿಸಬಹುದು.
Bangalore [Bangalore],Bangalore,Karnataka
Jul 21, 2026 11:29 AM IST














