Last Updated:
ಈ ಬ್ಯಾರಕ್ನಲ್ಲಿ ಇರುವುದರಿಂದ ಅರ್ಲಜಿ, ಸೋಂಕು ಹೆಚ್ಚಿದೆ. ಹೀಗಾಗಿ ಜೈಲ್ಲಿನ ಮತ್ತೊಂದು ಬ್ಯಾರಕ್ಗೆ ವರ್ಗಾವಣೆ ಮಾಡುವಂತೆ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ರು.
ಬೆಂಗಳೂರು (ಸೆ.05): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಬಂಧನ ಕ್ಕೊಳಗಾಗಿ ಪರಪ್ಪನ ಅಗ್ರಹಾರ ಕಾರಾಗೃದಲ್ಲಿರುವ ಆರೋಪಿ ಪವಿತ್ರಾ ಗೌಡ (Pavithra Gowda), ತನ್ನನ್ನು ಬೇರೆ ಬ್ಯಾರಕ್ಗೆ ವರ್ಗಾಯಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಹಿಂದೆ ಇಬ್ಬರು ಕೈದಿಗಳಿರುವ ಬ್ಯಾರಕ್ನಲ್ಲಿ ಪವಿತ್ರಾ ಅವರನ್ನ ಇರಿಸಲಾಗಿತ್ತು. ಬಳಿಕ ಹಲವು ಜನರಿರೋ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಜೈಲಿನಲ್ಲಿ ಮತ್ತೊಂದು ಬ್ಯಾರಕ್ಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. 59ನೇ CCH ನ್ಯಾಯಾಲಯದಲ್ಲಿ (Court) ಅರ್ಜಿಯ ವಿಚಾರಣೆ ನಡೆದಿದ್ದು, ಇಂದು ಮಹತ್ವದ ತೀರ್ಪು ಹೊರಬೀಳಲಿದೆ.














