Last Updated:
ರಚಿತಾ ರಾಮ್ ಅವರನ್ನ ಕಂಡ ಹಳ್ಳಿ ಹೆಣ್ಣುಮಕ್ಕಳು ತುಂಬಾನೆ ಖುಷಿಪಟ್ಟಿದ್ದಾರೆ. ಟಿವಿಯಲ್ಲಿ ನೋಡ್ತಾ ಇದ್ದೇವು. ಈಗ ನೇರವಾಗಿ ನೋಡಿ ತುಂಬಾನೆ ಖುಷಿ ಆಗಿದೆ ಅಂತಲೂ ಹೇಳಿದ್ದಾರೆ. ಆಗ ರಚಿತಾ ರಾಮ್ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರ (Ayogya-2 Movie) ರಿಲೀಸ್ ಹಂತಕ್ಕೆ ಬಂದಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ಈ ಚಿತ್ರದ ಹುಡುಗೀರ್ ಡೇಂಜರಸ್ ಹಾಡು (Hudugir Dangerous Song) ರಿಲೀಸ್ ಆಗಿದೆ. ಆದರೆ, ಈ ಹಾಡಿನ ಮೇಕಿಂಗ್ ವಿಡಿಯೋ ಈಗ ಹೊರ ಬಂದಿದೆ. ಹಳ್ಳಿಯಲ್ಲಿ ಇದು ಶೂಟ್ ಆಗಿದೆ. ಈ ಸಮಯದಲ್ಲಿಯೇ ಹಳ್ಳಿ ಹೆಣ್ಣುಮಕ್ಕಳು ರಚಿತಾ ರಾಮ್ (Rachita Ram) ಅವರನ್ನ ನೋಡಿಯೇ ತುಂಬಾನೆ ಖುಷಿಪಟ್ಟಿದ್ದಾರೆ. ಸುಮಾರು ಹೊತ್ತು ಮಾತನಾಡಿದ್ದಾರೆ. ಹೆಣ್ಣುಮಕ್ಕಳ ಜೊತೆಗೆ ಸ್ವತಃ ರಚಿತಾ ರಾಮ್ (Rachita Ram) ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆಗಸ್ಟ್-7 ರಂದು ರಿಲೀಸ್
(ಚಿತ್ರ ಕೃಪೆ: ಸುದ್ದಿಮನೆ ನ್ಯೂಸ್ ಇನ್‌ಸ್ಟಾಗ್ರಾಮ್)
ಮಂಡ್ಯ ಕಡೆಯ ಹಳ್ಳಿಯಲ್ಲಿಯೇ ಈ ಒಂದು ಹಾಡನ್ನ ಚಿತ್ರೀಕರಿಸಲಾಗಿದೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅವರ ಮೇಲೆ ಚಿತ್ರೀಕರಿಸಿರೋ ಹಾಡು ಇದಾಗಿದೆ. ಈ ಹಾಡಿನ ಸಮಯದಲ್ಲಿಯೇ ಹಳ್ಳಿ ಹೆಣ್ಣುಮಕ್ಕಳು ರಚಿತಾ ರಾಮ್ ಅವರನ್ನ ನೋಡಿ ಬೆರಗಾಗಿದ್ದಾರೆ.
ರಚಿತಾ ರಾಮ್ ಅವರು ಹಳ್ಳಿ ಹೆಣ್ಣುಮಕ್ಕಳ ಜೊತೆಗೆ ಸುಮಾರು ಹೊತ್ತು ಮಾತನಾಡಿದ್ದಾರೆ. ಅವರ ಮಾತುಗಳನ್ನ ಅಷ್ಟೆ ಆಸಕ್ತಿಯಿಂದ ಕೇಳಿಸಿಕೊಂಡಿದ್ದಾರೆ. ಅಷ್ಟೆ ಖುಷಿನೂ ಪಟ್ಟಿದ್ದಾರೆ.
ಇತ್ತೀಚಿಗೆ ಯಾವ ಸಿನಿಮಾ ನೋಡಿದಿರಿ ಅಂತ ರಚಿತಾ ರಾಮ್ ಅವರು ಹಳ್ಳಿ ಹಣ್ಣುಮಕ್ಕಳನ್ನ ಕೇಳ್ತಾರೆ. ಆಗಲೇ ಅವರೆಲ್ಲ ಒಂದೇ ಮಾತು ಹೇಳ್ತಾರೆ. ನಾವೆಲ್ಲ ಸಿನಿಮಾ ನೋಡೋದಿಲ್ಲ. ಯಾಕೆಂದ್ರೆ ಕೆಲಸವೇ ಜಾಸ್ತಿ ಇರುತ್ತದೆ.
ಆದರೆ, ನಿಮ್ಮನ್ನ ಟಿವಿಯಲ್ಲಿ ನೋಡ್ತಾನೇ ಇರ್ತೀವಿ. ಜೀ ಕನ್ನಡ ಕಾರ್ಯಕ್ರಮದಲ್ಲಿ ನೋಡಿದ್ದೇವೆ. ಆದರೆ, ಇವತ್ತು ನೇರವಾಗಿಯೇ ನೋಡ್ತಾ ಇದ್ದೇವೆ. ಇದು ತುಂಬಾನೆ ಖುಷಿ ಕೊಡ್ತಿದೆ ಅಂತಲೂ ಹೇಳಿದ್ದಾರೆ.
ರಚಿತಾ ರಾಮ್ ನೋಡಿ ಲೇಡಿ ಫ್ಯಾನ್ಸ್ ಮಾಡಿದ್ದೇನು?
(ಚಿತ್ರ ಕೃಪೆ: ಸುದ್ದಿಮನೆ ನ್ಯೂಸ್ ಇನ್‌ಸ್ಟಾಗ್ರಾಮ್)
ರಚಿತಾ ರಾಮ್ ಅವರು ಈ ವೇಳೆ ಇನ್ನು ಒಂದು ಕೆಲಸ ಮಾಡ್ತಾರೆ. ಹೆಣ್ಣುಮಕ್ಕಳಲ್ಲಿಯೇ ಒಬ್ಬರ ಫೋನ್ ತೆಗೆದುಕೊಳ್ಳುತ್ತಾರೆ. ಅಲ್ಲಿಯೇ ಇರೋ ಸೆಟ್ ಹುಡುಗರ ಕೈಗೆ ಫೋನ್ ಕೊಡ್ತಾರೆ.
ಅಯೋಗ್ಯ-2 ಚಿತ್ರ ಇದೇ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರ ಕೂಡ ಜೋರಾಗಿದೆ. ಸತೀಶ್ ನೀನಾಸಂ, ದಡಿಯಾ ಗಿರಿ, ಶಿವರಾಜ್ ಕೆ.ಆರ್.ಪೇಟೆ ಎಲ್ಲ ಒಟ್ಟಿಗೆ ಸೇರಿಯೇ ಈ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ಹುಬ್ಬಳ್ಳಿಗೂ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧರೂಢ ಮಠಕ್ಕೂ ಬಂದು ಹೋಗಿದ್ದಾರೆ. ವಿಶೇಷ ಪೂಜೆ ಕೂಡ ಮಾಡಿಸಿದ್ದಾರೆ. ಈ ಚಿತ್ರದ ಪ್ರಚಾರ ಜೋರಾಗಿಯೇ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 25, 2026 10:46 PM IST














