Last Updated:
ಪ್ರದೋಷ್ ಈಗಾಗಲೇ 40 ಪ್ಯಾರಾಗಳಷ್ಟು ಹೇಳಿಕೆ ದಾಖಲಿಸಿದ್ದು ಇಂದು ಮತ್ತೆ ಮುಂದುವರಿಯುತ್ತಿದೆ. ಈ ದಿನವೂ ಪ್ರದೋಷ್ ಮಾಫಿ ಸಾಕ್ಷಿ ನುಡಿಯಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಇಂದೂ ಕೂಡ ಮಾಫಿ ಸಾಕ್ಷಿ (Approver) ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಪೊಲೀಸರು ಮಾಫಿ ಸಾಕ್ಷಿ ಪ್ರದೋಷ್ನನ್ನು (Pradosh) ನೇರವಾಗಿ ಕೋರ್ಟ್ಗೆ ಹಾಜರುಪಡಿಸಿದ್ದು ಈಗಾಗಲೇ ಜೈಲಿನಿಂದ ಪ್ರದೋಷ್ನನ್ನು ಕರೆ ತಂದಿದ್ದಾರೆ.
11 ಗಂಟೆ ಹೊತ್ತಿಗೆ ಪ್ರದೂಷ್ನ ಕೋರ್ಟ್ಗೆ ಹಾಜರುಪಡಿಸಲು ಸಮಯ ನಿಗದಿಯಾಗಿತ್ತು. ಹಲಸೂರ್ ಗೇಟ್ ಪೊಲೀಸರಿಂದ ಕೋರ್ಟ್ ಬಳಿ ಬಂದೋಬಸ್ತ್ ನಡೆದಿದೆ.
ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಮೊದಲ ದಿನವಾಗಿದ್ದ ಸೆ. 28ರಂದು ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಲಾಗಿತ್ತು. 40 ಪ್ಯಾರಾ ಹೇಳಿಕೆ ದಾಖಲಿಸಿದ್ದ ಪ್ರದೂಷ್ ಇಂದು ಮತ್ತೆ ಅದನ್ನು ಮುಂದುವರಿಸಲಿದ್ದಾನೆ.
ರೇಣುಕಾಸ್ವಾಮಿ ಕೊಲೆ ನಡೆದ ದಿನದ ಕ್ರೌರ್ಯ ಬಿಚ್ಚಿಡ್ತಿರುವ ಪ್ರದೂಷ್ ಇಂದು ಮತ್ತೆ ಜಡ್ಜ್ ಮುಂದೆ ಮಾಫಿ ಸಾಕ್ಷಿ ನುಡಿಯಲಿದ್ದಾನೆ. ಇಂದು ಕೂಡ ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ನಲ್ಲಿ ಹೇಳಿಕೆ ದಾಖಲಿಸಲಿರುವ ಕೋರ್ಟ್ ಮತ್ತೆ ಹೇಳಿಕೆಯನ್ನು ದಾಖಲಿಸಲಿದೆ.
ತನ್ನ ಪರಿಚಯ ಹಾಗು ದರ್ಶನ್ ನಡುವಿನ ಸ್ನೇಹ ಸಂಬಂಧದಿಂದ ಹಿಡಿದು ಕೊಲೆಯಾದ ದಿನ ನಡೆದ ಬೆಳವಣಿಗೆಗಳು, ಹೇಗೆ ಕೊಲೆ ಮಾಡಲಾಯಿತು. ಯಾರ್ಯಾರ ಪಾತ್ರ ಏನು ಹೀಗೆ ಸಂಪೂರ್ಣವಾಗಿ ಈ ಹಿಂದೆ ಮಾಫಿ ಅರ್ಜಿಯಲ್ಲಿ ದಾಖಲಿಸಿದ್ದ ಅಂಶಗಳನ್ನ ಪ್ರದೋಷ್ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದು, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಕೇಳಿದ ಮುಖ್ಯ ವಿಚಾರಣೆಯ ಪ್ರಶ್ನೆಗಳಿಗೆ ಸಹ ಪ್ರದೋಷ್ ಉತ್ತರಿಸಿದ್ದಾರೆ.














