Darshan: ದರ್ಶನ್ ಮನವಿಗೆ ಅಸ್ತು ಎನ್ನುತ್ತಾ ಸುಪ್ರೀಂಕೋರ್ಟ್? ಪ್ರದೋಷ್ ಹೇಳಿಕೆ ಎಫೆಕ್ಟ್ ಆಗಲ್ವಾ? ನಟನ ಲಾಯರ್ ಹೇಳಿದ್ದೇನು? | | ACTPnews

ದರ್ಶನ್


Last Updated:

Darshan: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್, ಹಾಗಿದ್ರೂ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಯಾಕೆ ತಡೆಯಾಗಲಿಲ್ಲ?

ದರ್ಶನ್
ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamu Case) ಪ್ರಕರಣದಲ್ಲಿ ಇಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ದರ್ಶನ್ (Darshan) ಪರ ವಕೀಲರು ಸಾಕಷ್ಟು ಪ್ರಯತ್ನ ಪಟ್ಟರೂ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆಗೆ ತಡೆ ಸಿಕ್ಕಿಲ್ಲ. ಅಂತೂ ಇಂತೂ ಇಂದು ನಿಗದಿಯಾಗಿದ್ದಂತೆ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ನಡೆದಿದೆ. ಶನಿವಾರ ಅಂದರೆ ಸೆ.26ರಂದು ದರ್ಶನ್ ಲಾಯರ್ ಅರ್ಜಿ ಸಲ್ಲಿಸಿದ್ದರು. ಅದು ವಜಾ ಆಗಿತ್ತು.

ಇಂದಿಗೆ ಪ್ರದೋಷ್ ಮಾಪಿ ಸಾಕ್ಷಿ ಹೇಳಿಕೆ ದಾಖಲು ನಿಗದಿಯಾಗಿತ್ತು. ಇಂದು ಸೆ. 28ಕ್ಕೆ ಹೇಳಿಕೆ ದಾಖಲು ನಿಗದಿಯಾದ ನಂತರವೂ ಪ್ರದೋಷ್ ಕೋರ್ಟ್​ಗೆ ಬಂದ ನಂತರವೂ ದರ್ಶನ್ ಲಾಯರ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆ ಅರ್ಜಿ ವಜಾ ಆಗಿದೆ.

ಸುಪ್ರೀಂ ಕೋರ್ಟ್ ಗೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದು ಇದೀಗ ನಟನ ಪರ ಲಾಯರ್ ಈ ಎಲ್ಲ ಬೆಳವಣಿಗಗಳ ಬಗ್ಗೆ ಮಾತನಾಡಿದ್ದಾರೆ. ಮಾಫಿ ಸಾಕ್ಷಿ ಹೇಳಿಕೆಗೆ ತಡೆ ಕೋರಿ ಎಸ್ ಎಲ್ ಪಿ ಅರ್ಜಿ ಸಲ್ಲಿಕೆ ಮಾಡಿದ್ದು, ಪ್ರದೋಷ್ ಸ್ಟೇಟ್ ಮೆಂಟ್ ತಡೆಹಿಡಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದಿದ್ದಾರೆ.

ಇನ್ನೂ ಲಿಸ್ಟ್ ಆಗಿಲ್ಲದ ಕಾರಣ ಅರ್ಜಿ ವಿಚಾರಣೆಗೆ ಬಂದಿಲ್ಲ. ಇವತ್ತು ಇದೇ ವಿಚಾರವಾಗಿ ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್ ಗೆ ಅರ್ಜಿ ಹಾಕಿದ್ದೆವು. ಆದರೆ ನಮ್ಮ ಅರ್ಜಿಯನ್ನ ನ್ಯಾಯಾಲಯ ಪುರಸ್ಕರಿಸಿಲ್ಲ ಎಂದಿದ್ದಾರೆ.

ಇವತ್ತು ಪ್ರದೋಷ್ ಅರ್ಧ ಹೇಳಿಕೆ ದಾಖಲು ಮಾಡಿದ್ದಾರೆ. ನಾಳೆ ಉಳಿದ ಸ್ಟೇಟ್ಮೆಂಡ್ ದಾಖಲು ಮಾಡಲಿದ್ದಾರೆ. ಎಸ್ ಪಿ ಪಿ ಮೈನ್ ಎಕ್ಸಾಮಿನೇಷನ್ ಮಾಡಿದ್ದಾರೆ. ಸುಪ್ರೀಂ ನಲ್ಲಿ ನಮ್ಮ ಪರವಾಗಿ ತೀರ್ಪು ಬಂದ್ರೆ ಈ ಸ್ಟೇಟ್ ಮೆಂಟ್ ಗೆ ಪ್ರಭಾವ ಇರೊಲ್ಲ. ನಮ್ಮ ಕಕ್ಷಿದಾರರ ಹಿತರಕ್ಷಣೆಗೆ ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಕ್ರಾಸ್ ಎಕ್ಸಾಮಿನ್ ಗೆ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ಅವಕಾಶ ಕೊಟ್ಟಿದೆ ಎಂದಿದ್ದಾರೆ.

ಇಂದು ಹೇಳಿಕೆ ದಾಖಲು ಏನಾಯ್ತು?

59 ನೇ ಸಿಸಿಎಚ್ ಕೋರ್ಟ್ ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ನಡೆಯುತ್ತಿದ್ದು ಕೋರ್ಟ್ ಪ್ರದೋಷ್ ನಿಂದ ಹೇಳಿಕೆ ಪಡೆಯುತ್ತಿದ್ದಾರೆ. ಜಡ್ಜ್ ಸುಜಾತಾ ಎಂ ಸಾಂಬ್ರಾಣಿಯಿಂದ ಹೇಳಿಕೆ ದಾಖಲು ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೂ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದ್ದು ಊಟದ ವಿರಾಮದ ಬಳಿಕ ಮತ್ತೆ ಹೇಳಿಕೆ ದಾಖಲಿಸಲಾಗುತ್ತಿದೆ.

3 ಗಂಟೆ ಬಳಿಕ ಪ್ರದೂಷ್ ನಿಂದ ಮತ್ತೆ ಹೇಳಿಕೆ ದಾಖಲು ನಡೆದಿದ್ದು ತಾನೂ ಅರ್ಜಿಯಲ್ಲಿ ಉಲ್ಲೇಖ ಮಾಡಿದ ಎಲ್ಲಾ ಅಂಶಗಳನ್ನು ಕೋರ್ಟ್ ಮುಂದೆ ಹೇಳಿದ್ದಾನೆ.

ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇಂದು ಸಂಪೂರ್ಣವಾಗಿ ಮುಗಿಯದ ಹಿನ್ನೆಲೆಯಲ್ಲಿ, ಪ್ರದೋಷ್ ನ ನಾಳೆ ಬೆಳಗ್ಗೆ ಸೆ.29ರಂದು 11 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.

ಪವಿತ್ರಗೌಡ ಕಣ್ಣೀರು

ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಗೌಡ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದ ಪವಿತ್ರಗೌಡ ನಿರಂತರವಾಗಿ ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ.

ದರ್ಶನ್ ಕೂಡ ಮೌನ

ಪ್ರಕರಣದ ಎ-2 ಆರೋಪಿಯಾಗಿರುವ ನಟ ದರ್ಶನ್ ಕೂಡ ಪ್ರದೋಷ್ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಮೌನವಾಗಿದ್ದರು ಎನ್ನಲಾಗಿದೆ. ಪ್ರದೋಷ್ ನೀಡುತ್ತಿದ್ದ ಹೇಳಿಕೆಯನ್ನು ಕೇಳಿಸಿಕೊಂಡ ಬಳಿಕ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದ್ದರು ಎಂದು ತಿಳಿದುಬಂದಿದೆ.

ವರದಿ: ಮಂಜುನಾಥ್ ಎನ್, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed