Pralhad Joshi Assets: ಕೋಟಿಗಳ ಒಡೆಯ ನೂತನ ಶಿಕ್ಷಣ ಮಂತ್ರಿ! ಪ್ರಹ್ಲಾದ್ ಜೋಶಿ ಆಸ್ತಿ ಎಷ್ಟು ಗೊತ್ತಾ? | ವ್ಯಾಪಾರ ಸುದ್ದಿ | ACTPnews

ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ


Last Updated:

ಪ್ರಹ್ಲಾದ್ ಜೋಶಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ 13ನೇ ಸಚಿವರಾಗಿ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಹೆಚ್ಚುವರಿಯಾಗಿ ಧರ್ಮೇಂದ್ರ ಪ್ರಧಾನ್‌ರಿಂದ ತೆರವಾದ ಶಿಕ್ಷಣ ಇಲಾಖೆ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲೇರಿದೆ.

ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ಕಾಕ್ರೋಚ್​ ಜನತಾ ಪಾರ್ಟಿ (CJP) 35 ದಿನಗಳ ನಿರಂತರ ಹೋರಾಟ ಕೊನೆಯಾಗಿದೆ. ವಿದ್ಯಾರ್ಥಿಗಳ ಕಿಚ್ಚಿನ ಹೋರಾಟಕ್ಕೆ ಕೇಂದ್ರ ಸರ್ಕಾರ ತಲೆಬಾಗಿದೆ. ಕಾಕ್ರೋಚ್‌‌ ಜನತಾ ಪಕ್ಷಗಳ ಬೇಡಿಕೆಯನ್ನ ಈಡೇರಿಸಿದೆ. ಧರ್ಮೇಂದ್ರ ಪ್ರಧಾನ್‌ (Dharmendra P ರಾಜೀನಾಮೆ ಕೊಟ್ಟಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ಸ್ಥಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರಿಗೆ ಈಗ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಪ್ರಹ್ಲಾದ್ ಜೋಶಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ 13ನೇ ಸಚಿವರಾಗಿ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಹೆಚ್ಚುವರಿಯಾಗಿ ಧರ್ಮೇಂದ್ರ ಪ್ರಧಾನ್‌ರಿಂದ ತೆರವಾದ ಶಿಕ್ಷಣ ಇಲಾಖೆ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲೇರಿದೆ.

ಪ್ರಹ್ಲಾದ್​ ಜೋಶಿ ಅವರ ಆಸ್ತಿ ಎಷ್ಟು?

ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅವರ ಕುಟುಂಬವು ತಮ್ಮ ಲೋಕಸಭಾ ಚುನಾವಣಾ ಅಫಿಡವಿಟ್‌ಗಳಲ್ಲಿ ₹21 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗ ಅವರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಿದ್ದರು.

ಪ್ರಹ್ಲಾದ್​ ಜೋಶಿ ಅವರ ಹೆಸರಿನಲ್ಲಿ ₹11.24 ಕೋಟಿ ಮೌಲ್ಯದ ಹಾಗೂ ಅವರ ಪತ್ನಿ ಜ್ಯೋತಿ ಜೋಶಿ ಅವರ ಹೆಸರಿನಲ್ಲಿ ₹86.39 ಲಕ್ಷ ಮೌಲ್ಯದ ಕೃಷಿ ಭೂಮಿ, ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿದಂತೆ ಸ್ಥಿರಾಸ್ತಿಗಳಿವೆ. ಜೋಶಿ ಅವರ ಹೆಸರಿನಲ್ಲಿ ₹2.72 ಕೋಟಿ, ಪತ್ನಿಯ ಹೆಸರಿನಲ್ಲಿ ₹5.93 ಕೋಟಿ ಹಾಗೂ ಮಗಳ ಹೆಸರಿನಲ್ಲಿ ₹32.03 ಲಕ್ಷ ಮೌಲ್ಯದ ಬ್ಯಾಂಕ್ ಠೇವಣಿ, ಚಿನ್ನಾಭರಣ ಹಾಗೂ ಷೇರು ಹೂಡಿಕೆಗಳಿವೆ.  ಇಷ್ಟು ಕೋಟಿ ಆಸ್ತಿ ಹೊಂದಿದ್ದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ಇತರ ವಾಹನಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಸ್ತಿ ಎಷ್ಟು?

ಒಂದು ಕಾಲದಲ್ಲಿ ವಿದ್ಯಾರ್ಥಿ ಜೀವನದಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಧರ್ಮೇಂದ್ರ ಪ್ರಧಾನ್ ಈಗ ಕೋಟಿಗಟ್ಟಲೆ ಮೌಲ್ಯದ ಆಸ್ತಿಗಳ ಮಾಲೀಕರಾಗಿದ್ದಾರೆ. 2024 ರ ಲೋಕಸಭಾ ಚುನಾವಣೆ ವೇಳೆ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ ₹6.92 ಕೋಟಿ.

2022-23 ರ ಅಂಕಿಅಂಶಗಳನ್ನು ನೋಡಿದರೆ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಅವರ ಪತ್ನಿ ಆದಾಯದ ವಿಷಯದಲ್ಲಿ ಬಹಳ ಮುಂದಿದ್ದಾರೆ ಎಂದು ತಿಳಿದುಬಂದಿದೆ. ಧರ್ಮೇಂದ್ರ ಪ್ರಧಾನ್ ಅವರ ವಾರ್ಷಿಕ ಆದಾಯ ₹12.75 ಲಕ್ಷ, ಆದರೆ ಅವರ ಪತ್ನಿಯ ಆದಾಯ ₹49.92 ಲಕ್ಷ ಎಂದು ನ್ಯೂಸ್18 ಹಿಂದಿ ವರದಿ ಮಾಡಿದೆ.

ಧರ್ಮೇಂದ್ರ ಪ್ರಧಾನ್ ಅವರ ಒಟ್ಟು ಘೋಷಿತ ಆಸ್ತಿ ₹6.92 ಕೋಟಿ. ಅವರ ಒಟ್ಟು ಸಾಲಗಳು ಮತ್ತು ಹೊಣೆಗಾರಿಕೆಗಳು ₹2.30 ಕೋಟಿ. ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ನಿಂದ ಒಟ್ಟು ₹31.38 ಲಕ್ಷ ಸಾಲವನ್ನು ಪಡೆದಿದ್ದಾರೆ. ಧರ್ಮೇಂದ್ರ ಪ್ರಧಾನ್ ಬ್ಯಾಂಕುಗಳಿಂದಲೂ ಸಾಲ ಪಡೆದಿದ್ದಾರೆ ಮತ್ತು ಕೆಲವು ವ್ಯಕ್ತಿಗಳಿಗೆ ಸಾಲವನ್ನು ನೀಡಿದ್ದಾರೆ. ಅವರು ತಮ್ಮ ಪತ್ನಿಗೆ ₹10 ಲಕ್ಷ, ತಂದೆಗೆ ₹5 ಲಕ್ಷ ಮತ್ತು ಇತರ ಹಲವಾರು ಸಂಬಂಧಿಕರಿಗೆ ವೈಯಕ್ತಿಕ ಸಾಲವನ್ನು ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports