ಪುಣ್ಯಕೋಟಿ ಕತೆ ಎಲ್ಲರಿಗೂ ಗೊತ್ತೇ ಇದೆ. ಹಸಿದ ಹುಲಿಯೊಂದು ಪುಣ್ಯಕೋಟಿ ಅನ್ನುವ ಹಸುವನ್ನ ತಿನ್ನಲು ರೆಡಿ ಆಗುತ್ತದೆ. ಆದರೆ, ಆ ಪುಣ್ಯಕೋಟಿ ಹಸು ಹೇಳುತ್ತದೆ. ಕೊಟ್ಟಿಗೆಯಲ್ಲಿ ಕರು ಇದೆ. ಅದಕ್ಕೆ ಹಾಲುಣಿಸಿ ಬಂದು ಬಿಡುವೆ ಅಂತಲೇ ಹೇಳುತ್ತದೆ.
ಪುಣ್ಯಕೋಟಿ ಹೊಸ ಕತೆ
ಹುಲಿಗೆ ಕೊಟ್ಟ ಮಾತಿನಂತೇನೆ ಪುಣ್ಯಕೋಟಿ ಹುಲಿಯ ಗುಹೆ ಕಡೆಗೆ ಬಂದೇ ಬಿಡುತ್ತದೆ. ಪುಣ್ಯಕೋಟಿಯ ಈ ನಿಯತ್ತಿಗೆ ಹುಲಿ ಸೋತು ಹೋಗುತ್ತದೆ. ನಿನ್ನಂತಹ ಹಸುವನ್ನ ಕೊಂದು ನಾನು ಎಲ್ಲಿಗೆ ಹೋಗಲಿ, ನೀನು ನನ್ನ ಒಡಹುಟ್ಟಿದ ಅಕ್ಕ ಅಂತ ಹೇಳಿ ಬೆಟ್ಟದಿಂದ ಕೆಳಗೆ ಬಿದ್ದು ಜೀವ ಕಳೆದುಕೊಳ್ಳುತ್ತದೆ.
ಕೆ.ಎನ್ ಗಣೇಶಯ್ಯ ಕತೆ ಬೇರೆ ಇದೆ. ಇದಕ್ಕೆ ಪುಣ್ಯಕೋಟಿ ಶತಕರುಣಿ ಅಂತ ಹೆಸರಿಟ್ಟಿದ್ದಾರೆ. ಈ ಕತೆಯಲ್ಲಿ ಹುಲಿಯ ಕತೆಯನ್ನ ಇವರು ಹೇಳಿದ್ದಾರೆ.
ಇಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಷಯ ಇದೆ. ಪುಣ್ಯಕೋಟಿ ಹುಲಿಯ ಗುಹೆಯ ಮುಂದೆ ಬರುತ್ತದೆ. ನನ್ನ ಕೊಂದು ತಿಂದು ಬಿಡು ಅಂತ ಹುಲಿಗೆ ಹೇಳುತ್ತದೆ.
ಆದರೆ ಪುಣ್ಯಕೋಟಿಯ ಪ್ರಾಮಾಣಿಕತೆಗೆ ಆ ಹುಲಿ ಆ ತಪ್ಪು ಮಾಡೋದಿಲ್ಲ. ಬದಲಾಗಿ ಈ ಕತೆಯಲ್ಲೂ ಬೆಟ್ಟದಿಂದ ಬಿದ್ದು ಸತ್ತು ಹೋಗುತ್ತದೆ. ಆದರೆ, ಮುಂದುವರೆದ ಕತೆ ಏನು ಗೊತ್ತಾ? ಪುಣ್ಯಕೋಟಿ ಇಲ್ಲಿ ಹುಲಿಮರಿಯನ್ನ ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಇಡೀ ಕಾಡನ್ನ ಆ ಹುಲಿ ಮರಿಗೆ ತೋರಿಸುತ್ತದೆ.
ಬೆಟ್ಟದಿಂದ ಬಿದ್ದು ಸಾಯುವ ಪುಣ್ಯಕೋಟಿ
ಹೌದು, ಈ ಕತೆಯಲ್ಲಿ ಹೀಗೆ ಆಗುತ್ತದೆ. ಹುಲಿಮರಿಯನ್ನ ಒಂದು ಕಡೆಗೆ ಇಳಿಸಿದ ಪುಣ್ಯಕೋಟಿ, ಬೆಟ್ಟದ ಮೇಲೆ ಹೋಗುತ್ತದೆ. ಅಲ್ಲಿಂದ ಕಳೆಗೆ ಬಿದ್ದು ಜೀವ ಬಿಡುತ್ತದೆ.
ಈ ಕತೆಯನ್ನ ಇಲ್ಲಿಗೆ ನಿಲ್ಲಿಸಬೇಡಿ. ಪುಣ್ಯಕೋಟಿ ಹಾಗೂ ಶತಕರುಣಿ ಹುಲಿ ವಂಶ ಬೆಳೆಯಿತು ಅಂತ ಸೇರಿಸಿ ಅಂತಲೇ ಹೇಳಿದ್ದಳು. ಹಾಗಾಗಿಯೇ ಈ ಪುಣ್ಯಕೋಟಿ ಶತಕರುಣಿ ಕತೆಯಲ್ಲಿ ಪುಣ್ಯಕೋಟಿ ಹಾಗೂ ಹುಲಿಯ ವಂಶ ಬೆಳೆಯುತ್ತದೆ ಅಂತಲೇ ಹೇಳಬಹುದು.
ಈ ಒಂದು ಕತೆ ಅದ್ಭುತ ಅನಿಮೇಷನ್ ಅಲ್ಲಿಯೇ ಮೂಡಿ ಬಂದಿದೆ. ಬಾಲು ಚಂದ್ರಶೇಖರ್ ಇದನ್ನ ಡೈರೆಕ್ಷನ್ ಮಾಡಿದ್ದಾರೆ. ಅಜಯ್ ಶ್ರೀನಿವಾಸಮೂರ್ತಿ ಸಂಗೀತ ಕೊಟ್ಟಿದ್ದಾರೆ.
ಮೇಘನ ಹಳಿಯಾಳ್, ಚಿಂತನ್ ವಿಕಾಸ್ ಹಾಗೂ ಆರವ್ ಜೋಶಿ ಈ ಕತೆಯನ್ನ ಹಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಇದು ರೆಡಿ ಆಗಿದೆ. ಇಂಗ್ಲಿಷ್ ಕತೆಗೆ ರಮೇಶ್ ಅರವಿಂದ್ ಧ್ವನಿ ನೀಡಿದ್ದಾರೆ. ಕನ್ನಡದ ಕತೆಗೆ ಆರಂಭದಲ್ಲಿ ಕೆ.ಎನ್ ಗಣೇಶಯ್ಯ ಧ್ವನಿ ಇದೆ ಅಂತಲೇ ಹೇಳಬಹುದು.













