Last Updated:
ಪ್ರಶಾಂತ್ ನೀಲ್ ಸ್ನೇಹಿತರು ಯಾರು? ಸ್ನೇಹಿತರ ದಿನ ಇವರಿಗೆ ಪ್ರಶಾಂತ್ ಹೇಳಿದ್ದೇನು? ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಸ್ನೇಹಿತರ ದಿನಕ್ಕೆ ವಿಶ್ (Friendshipday Wish) ಮಾಡಿದ್ದಾರೆ. ಆದರೆ, ಇವರ ಆತ್ಮೀಯ ಸ್ನೇಹಿತರು ಯಾರು? ಇವರ ಫ್ರೆಂಡ್‌ಶಿಪ್ ಲಿಸ್ಟ್ ಅಲ್ಲಿ ಯಾರೆಲ್ಲ ಇದ್ದಾರೆ.? ಆಗಸ್ಟ್-2 ರಂದು ಅಂತರರಾಷ್ಟ್ರೀಯ ಸ್ನೇಹಿತರ ದಿನ ಇದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ (Prashanth Neel) ತಮ್ಮ ಯಾವ ಸ್ನೇಹಿತರಿಗೆ (Friendship) ವಿಶ್ ಮಾಡಿದ್ದಾರೆ. ಈ ಪ್ರಶ್ನೆಗೆ ಸ್ವತಃ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಇವರ ಆ ಸ್ನೇಹಿತರು ಯಾರು ಅನ್ನೋದು ಇಲ್ಲಿದೆ ಓದಿ.
ರಾಕಿ ಭಾಯ್ ‘ನೀಲ್’ ಸ್ನೇಹಿತರು
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಆದರೆ, ಯಶ್ ಅವರ ಆಸೆಯಂತೆ ಕೆಜಿಎಫ್ ಚಿತ್ರ ಎರಡು ಭಾಗದಲ್ಲಿಯೇ ಬಂತು. ಸೂಪರ್ ಹಿಟ್ ಕೂಡ ಆಯಿತು. ಪ್ಯಾನ್ ಇಂಡಿಯಾ ದಾರಿಯನ್ನೆ ತೋರಿಸಿತು. ಮೂರನೇ ಭಾಗವೂ ಬರುತ್ತದೆ ಬಿಡಿ.
ಡಾರ್ಲಿಂಗ್ ಪ್ರಭಾಸ್ ಕೂಡ ಪ್ರಶಾಂತ್ ನೀಲ್ ಅವರ ಸ್ನೇಹಿತರೇ ಆಗಿದ್ದಾರೆ. ಸಲಾರ್ ಚಿತ್ರದ ಮೂಲಕವೇ ವರ್ಷಾನುಗಟ್ಟಲೆ ಒಟ್ಟಿಗೆ ಕೆಲಸ ಮಾಡಿರೋ ಇವರು ಒಳ್ಳೆ ಸ್ನೇಹಿತರೇ ಆಗಿದ್ದಾರೆ.
ಪ್ರಭಾಸ್ ಕೂಡ ಫ್ರೆಂಡ್
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ತುಂಬಾನೆ ಆತ್ಮೀಯರೂ ಆಗಿದ್ದಾರೆ. ಈ ಅಂತರರಾಷ್ಟ್ರೀಯ ಸ್ನೇಹಿತರ ದಿನಕ್ಕೆ ಪ್ರಶಾಂತ್ ನೀಲ್ ವಿಶ್ ಮಾಡಿದ್ದಾರೆ.”ಹ್ಯಾಪಿ ಫ್ರೆಂಡ್‌ಶಿಪ್ ಡೇ ಫಾರ್ ಎವರ್” ಅಂತಲೂ ಬರೆದುಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರ ಸ್ನೇಹಿತರ ಪಟ್ಟಿಯಲ್ಲಿ ಜೂನಿಯರ್ ಎನ್.ಟಿ.ಆರ್.ಕೂಡ ಇದ್ದಾರೆ. ಇವರು ಒಟ್ಟಿಗೆ ಡ್ರ್ಯಾಗನ್ ಚಿತ್ರ ಮಾಡುತ್ತಿದ್ದಾರೆ.
ಈ ಚಿತ್ರದ ಮೂಲಕ ಹೊಸದನ್ನೆ ಕೊಡುವುದಕ್ಕೆ ಮುಂದಾಗಿದ್ದಾರೆ. ಹಾಗೆ ಜೂನಿಯರ್ ಎನ್‌ಟಿಆರ್ ಹಾಗೂ ಡೈರೆಕ್ಟರ್ ಪ್ರಶಾಂತ್ ಒಳ್ಳೆ ಸ್ನೇಹಿತರೇ ಆಗಿದ್ದಾರೆ. ಸ್ನೇಹಿತರ ದಿನಕ್ಕೆ ಜೂನಿಯರ್ ಎನ್‌ಟಿಆರ್ ಜೊತೆಗಿನ ಫೋಟೋವನ್ನೆ ಪ್ರಶಾಂತ್ ನೀಲ್ ಹಂಚಿಕೊಂಡು ವಿಶ್ ಮಾಡಿದ್ದಾರೆ.
ರೋರಿಂಗ್ ಸ್ಟಾರ್ ಮುರಳಿ
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಉಗ್ರಂ ಚಿತ್ರದಿಂದಲೇ ಇವರು ಜೊತೆಗೆ ಕೆಲಸ ಮಾಡಿದ್ದಾರೆ.
ಈ ಚಿತ್ರ ಶ್ರೀಮುರಳಿ ಅವರಿಗೆ ಅತಿ ದೊಡ್ಡ ಬ್ರೇಕ್ ಕೊಟ್ಟಿದೆ. ಈ ಚಿತ್ರದ ಮೂಲಕವೇ ಪ್ರಶಾಂತ್ ನೀಲ್ ಡೈರೆಕ್ಟರ್ ಆಗಿದ್ದಾರೆ.
ಈ ಚಿತ್ರದ ಕತೆಯನ್ನೆ ಪ್ರಶಾಂತ್ ನೀಲ್ ಮತ್ತೊಮ್ಮೆ ಚಿತ್ರ ಮಾಡಿದರು. ಅದು ಸಲಾರ್ ಅಂತ ಗೊತ್ತೆ ಇದೆ. ಇನ್ನುಳಿದಂತೆ ಈ ನಾಲ್ಕು ಜನ ಸಿನಿಮಾ ತಾರೆಯರು ಪ್ರಶಾಂತ್ ನೀಲ್ ಅವರ ಸ್ನೇಹಿತರೇ ಆಗಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Aug 02, 2026 10:09 PM IST














