Prajwal Karavali Movie: ಹೊಸ ದಾಖಲೆ ಬರೆಯಲು ಸಜ್ಜಾದ ‘ಕರಾವಳಿ’! ಸು ಫ್ರಮ್ ಸೋ ರಿಲೀಸ್ ಆದ ದಿನವೇ ಬಿಡುಗಡೆ | | ACTPnews

prajwal devaraj karavali movie release date officially announced


ಕರಾವಳಿ ರಿಲೀಸ್ ಡೇಟ್ ಅನೌನ್ಸ್

ಕಳೆದ ವರ್ಷ ಜುಲೈ-25 ರಂದು ಸು ಫ್ರಮ್ ಸೋ ಚಿತ್ರ ರಿಲೀಸ್ ಆಗಿತ್ತು. ಕಡಿಮೆ ಬಜೆಟ್‌ನ ಈ ಚಿತ್ರ ಹೊಸ ದಾಖಲೆಯನ್ನೆ ಬರೆಯಿತು. ಕನ್ನಡ ಇಂಡಸ್ಟ್ರಿಯಲ್ಲಿ ಇದು ಹೊಸ ಅಲೆಯನ್ನೆ ಎಬ್ಬಿಸಿತ್ತು.

ಜುಲೈ-24 ರಂದು ರಿಲೀಸ್

ಹೆಸರು ಕೂಡ ಹೇಳಲು ಬರ್ತಾ ಇರಲಿಲ್ಲ. ಆ ರೀತಿನೇ ಈ ಚಿತ್ರದ ಪ್ರಚಾರ ಇತ್ತು. ಒಂದೇ ಒಂದು ಪ್ರೆಸ್ ಮೀಟ್ ಮಾಡಿದ್ದರು. ಆದರೆ, ಈ ಚಿತ್ರ ತನ್ನ ಕಂಟೆಂಟ್‌ ನಿಂದಲೇ ಎಲ್ಲರ ದಿಲ್ ಕದ್ದಿದೆ.

ಕರಾವಳಿ ಬಿಗ್ ಸಿನಿಮಾ

ಅದರೆ, ಕರಾವಳಿ ಚಿತ್ರ ದೊಡ್ಡ ಸಿನಿಮಾನೇ ಆಗಿದೆ. ಬಜೆಟ್ ಕೂಡ ದೊಡ್ಡದೇ ಇದೆ. ಪ್ರಜ್ವಲ್ ದೇವರಾಜ್ ಚಿತ್ರ ಜೀವನದ ಮಹತ್ವದ ಚಿತ್ರವೂ ಆಗಿದೆ.

ಈ ಚಿತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಇನ್ನಿಲ್ಲದಂತೆ ರೂಪಗಳನ್ನು ತಾಳಿದ್ದಾರೆ. ಯಕ್ಷಗಾನದ ರೂಪದಲ್ಲೂ ಪ್ರಜ್ವಲ್ ದೇವರಾಜ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಗುರುದತ್ ಗಾಣಿಗ ಡೈರೆಕ್ಷನ್

ಗುರುದತ್ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕರಾವಳಿಯ ತಮ್ಮೂರಿನ ಕಡೆಯ ಕಲೆ ಮತ್ತು ಸಂಸ್ಕೃತಿಯನ್ನು ಇಲ್ಲಿ ತೋರಿದ್ದಾರೆ. ಇಲ್ಲೂ ಕೋಣಗಳು ಇವೆ.

prajwal devaraj karavali movie release date officially announced

ಗುರುದತ್ ಗಾಣಿಗ ಡೈರೆಕ್ಷನ್

ಆದರೆ, ಈ ಚಿತ್ರಕ್ಕೂ ಕಾಂತಾರ ಚಿತ್ರಕ್ಕೂ ಸಂಬಂಧ ಇಲ್ವೇ ಇಲ್ಲ. ಹಾಗಂತ ಈ ಹಿಂದೆ ಚಿತ್ರದ ಡೈರೆಕ್ಟರ್ ಗುರುದತ್ ಗಾಣಿಗ ಅವರು ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿಕೊಂಡಿದ್ದರು.

ಜುಲೈ-24 ರಂದು ರಿಲೀಸ್

ಕರಾವಳಿ ಚಿತ್ರ ಜುಲೈ ತಿಂಗಳು 24 ರಂದು ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರ ಸು ಫ್ರಮ್ ಸೋ ರಿಲೀಸ್ ಆದ ದಿನವೇ ಬರ್ತಿದೆ ಅಂತ ಚಿತ್ರ ತಂಡ ಹೇಳಿಕೊಂಡಿದೆ.

ಸಚಿನ್ ಬಸ್ರೂರು ಸಂಗೀತ

ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಅಭಿಮನ್ಯೂ ಸದಾನಂದನ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಕತೆ ವಿಚಾರಕ್ಕೆ ಬಂದ್ರೆ, ಈ ಚಿತ್ರ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕತೆ ಹೊಂದಿದೆ.

ಈಗಾಗಲೇ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನಿಂದ ಹೆಚ್ಚು ಗಮನ ಸೆಳೆದಿದೆ. ಹಾಡು ಕೂಡ ಮೋಡಿ ಮಾಡಿದೆ. ಪ್ರಜ್ವಲ್ ದೇವರಾಜ್ ಪಾತ್ರವಂತೂ ವೈಬ್ರೇಷನ್ ಕ್ರಿಯೇಟ್ ಮಾಡುತ್ತದೆ.

ಸಂಪದಾ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ರಾಜ್ ಬಿ ಶೆಟ್ಟಿ, ರಮೇಶ್ ಇಂದಿರಾ, ಮಿತ್ರಾ, ಶ್ರೀಧರ್ ಸೇರಿದಂತೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports