Rukmini Vasanth: ನಟಿ ರುಕ್ಮಿಣಿ ವಸಂತ್ ಅಶ್ಲೀಲ ಎಐ ಫೋಟೋ ವೈರಲ್​ ಕೇಸ್; ಮೂವರು ಆರೋಪಿಗಳ ಬಂಧನ | | ACTPnews

ರುಕ್ಮಿಣಿ ವಸಂತ್


Last Updated:

Rukmini Vasanth: ನಟಿ ರುಕ್ಮಿಣಿ ವಸಂತ್ ಅಶ್ಲೀಲ ಫೋಟೋ ವೈರಲ್ ಪ್ರಕರಣ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್

ಸ್ಯಾಂಡಲ್ ವುಡ್ ನಟಿ ರುಕ್ಮಿಣಿ ವಸಂತ್ (Actress Rukmini Vasanth)​ ಅವರು ಬಿಕಿನಿ ತೊಟ್ಟು ಸ್ವಿಮ್ಮಿಂಗ್​ ಪೂಲ್​ನಿಂದ ಹೊರಗೆದ್ದು ಬಂದಂತೆ ಎಐ ಬಳಸಿ ಕ್ರಿಯೇಟ್ ಮಾಡಿದ್ದ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿತ್ತು. ಈ ಬಗ್ಗೆ ನಟಿ ದೂರು ನೀಡಿದ್ದರು, ಬಳಿಕ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಬೆಂಗಳೂರು ಸೈಬರ್​ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು, ಕಳೆದ ಕೆಲವು ವಾರಗಳ ಹಿಂದೆ ಎಐ ಬಳಕೆ ಮಾಡಿಕೊಂಡು ಕೆಲ ಕಿಡಿಗೇಡಿಗಳು ನಟಿ ರುಕ್ಮಿಣಿ ವಸಂತ್​ ಅವರ ಡೀಪ್​ಫೇಕ್​ ವಿಡಿಯೋವನ್ನು ವೈರಲ್ ಮಾಡಿದ್ದರು. ಆ ವಿಡಿಯೋದಲ್ಲಿ ಅವರು ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬರುತ್ತಿರುವ ದೃಶ್ಯವನ್ನು ತೋರಿಸಲಾಗಿತ್ತು. ಆದರೆ ಅದು ನಿಜವಾದ ವಿಡಿಯೋ ಅಲ್ಲ ಎಂಬುದು ನಂತರ ಬೆಳಕಿಗೆ ಬಂದಿತ್ತು.

ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ನಟಿ ರುಕ್ಮಿಣಿ ವಸಂತ್ ಬೇಸರವನ್ನು ವ್ಯಕ್ತಪಡಿಸಿದ್ದರು. ತಮ್ಮ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಮೂವರು ಆರೋಪಿಗಳ ಬಂಧನ

ಸುದೀರ್ಘ ತನಿಖೆಯ ಬಳಿಕ ಸೈಬರ್ ಕಮಾಂಡ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರವಿಕುಮಾರ್ (24), ಚಂದ್ರಕಾಂತ್ (33) ಮತ್ತು ರಂಜಿತ್ (25) ಎಂದು ಗುರುತಿಸಲಾಗಿದೆ.

ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನು ಆರೋಪಿಗಳು ಈ ಕೃತ್ಯವನ್ನು ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed