PM Modi Video: ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಪ್ರಕರಣ, ಗದ್ದಲದ ನಂತರ ಕ್ಷಮೆಯಾಚಿಸಿದ ಮೆಟಾ! ಸರ್ಕಾರದಿಂದ ಸಮನ್ಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಫೇಸ್‌ಬುಕ್‌ನಿಂದ ವಿಡಿಯೋ ಡಿಲೀಟ್ ಆದ ತಕ್ಷಣ, ಅದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. PM ಮೋದಿಯವರ ವೀಡಿಯೊವನ್ನು ತೆಗೆದುಹಾಕಿರುವುದಕ್ಕೆ Facebook ಮತ್ತು Meta ತೀವ್ರ ಟೀಕೆಗೆ ಗುರಿಯಾದವು.

News18
News18

ನವದೆಹಲಿ: NEET ಪತ್ರಿಕೆ ಸೋರಿಕೆ ವಿವಾದದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ Facebookನಲ್ಲಿ Zen-Gಗಳನ್ನು ಉದ್ದೇಶಿಸಿ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆದರೆ ಆ ವೀಡಿಯೊ ಪ್ರಧಾನಿ ಮೋದಿಯವರ ಫೇಸ್‌ಬುಕ್ ಖಾತೆಯಿಂದ ಸ್ವಲ್ಪ ಸಮಯದ ನಂತರ ಕಣ್ಮರೆಯಾಯಿತು.

ಫೇಸ್‌ಬುಕ್‌ನಿಂದ ವಿಡಿಯೋ ಡಿಲೀಟ್ ಆದ ತಕ್ಷಣ, ಅದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. PM ಮೋದಿಯವರ ವೀಡಿಯೊವನ್ನು ತೆಗೆದುಹಾಕಿರುವುದಕ್ಕೆ Facebook ಮತ್ತು Meta ತೀವ್ರ ಟೀಕೆಗೆ ಗುರಿಯಾದವು. ಪ್ರಧಾನಿಯವರ ವಿಡಿಯೋವನ್ನು ಏಕೆ ತೆಗೆದುಹಾಕಲಾಯಿತು ಎಂದು ಅನೇಕ ಜನರು ಪ್ರಶ್ನಿಸಿದರು. ನರೇಂದ್ರ ಮೋದಿಯವರು ಜೆನ್‌ ಜಿ ಕುರಿತು ಮಾತನಾಡಿದ ವಿಡಿಯೋವನ್ನು ಭಾರತದಲ್ಲಿ ಏಕೆ ನಿರ್ಬಂಧಿಸಲಾಯಿತು? ಎಂದು Facebook ನ ಪೋಷಕ ಕಂಪನಿಯಾದ Meta ಅನ್ನು ಸಹ ಬಿಜೆಪಿ ತೀವ್ರ ಟೀಕಿಸಿತು.

ಇದೀಗ ಈಗ ಪ್ರಧಾನಿ ಮೋದಿಯವರ ವಿಡಿಯೋ ಮತ್ತೆ ಕಾಣಿಸಿಕೊಂಡಿದೆ. ಆದರೆ ಆ ವಿಡಿಯೋವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕಾಗಿ Meta ಕಂಪನಿ ಕ್ಷಮೆಯಾಚಿಸಿದೆ. ಈ ತಪ್ಪಿನ ಹಿಂದಿನ ಕಾರಣವನ್ನು Meta ವಿವರಿಸಿದೆ. ಹಾಗಾದರೆ, PM ಮೋದಿಯವರ ವೀಡಿಯೊದ ಹಿಂದಿನ ಅಸಲಿತ್ತೇನು? Facebook ಡಿಲೀಟ್ ಮಾಡಿದ್ದೇಕೆ? ಈ ಕುರಿತ ವಿವರ ಇಲ್ಲಿದೆ.

ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಆದರೆ, ಮೆಟಾ ಈ ಘಟನೆಗೆ ಕ್ಷಮೆಯಾಚಿಸಿದೆ ಮತ್ತು ಕಂಪನಿಯ ವಕ್ತಾರರು ವೀಡಿಯೊವನ್ನು ತೆಗೆದುಹಾಕಲು ತಾಂತ್ರಿಕ ದೋಷ ಕಾರಣ, ಇದು ಬೇಕಂತಲೇ ಅಥವಾ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿದೆ.

ಸಿಟ್ಟಿಗೆದ್ದ ಕೇಂದ್ರ ಸರ್ಕಾರ

ಪ್ರಧಾನಿ ಮೋದಿಯವರ ಅಧಿಕೃತ ವೀಡಿಯೊಗಳಿಗೆ ಸಾರ್ವಜನಿಕ ಪ್ರವೇಶವನ್ನು ಇದ್ದಕ್ಕಿದ್ದಂತೆ ನಿರ್ಬಂಧಿಸಲು ಕಾರಣವನ್ನು ಕೇಂದ್ರ ಸರ್ಕಾರ ತನಿಖೆ ಮಾಡಲು ಬಯಸಿದೆ. ಇಂತಹ ಘಟನೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಅಂದುಕೊಂಡಿದ್ದು, ಸಂಬಂಧಿತ ಅಧಿಕಾರಿಗಳಿಂದ ಉತ್ತರಗಳನ್ನು ಪಡೆಯಲು ಮುಂದಾಗಿದೆ. ಆದರೆ, ಈ ವಿವಾದದ ನಂತರ ಫೇಸ್‌ಬುಕ್ ಪ್ರಧಾನಿ ಮೋದಿಯವರ ವೀಡಿಯೋಗೆ ನಿರ್ಬಂಧವನ್ನು ತೆಗೆದುಹಾಕಿದೆ.

ಜುಲೈ 28 ರ ಮುಂಜಾನೆ ಮೆಟಾ ಒಡೆತನದ ಫೇಸ್‌ಬುಕ್‌ನಲ್ಲಿರುವ ಭಾರತೀಯ ಬಳಕೆದಾರರು ತಾತ್ಕಾಲಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ವೀಕ್ಷಿಸಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಬೆಳಕಿಗೆ ಬಂದಿತು. ಬಳಕೆದಾರರು ವೀಡಿಯೊವನ್ನು ತೆರೆಯಲು ಪ್ರಯತ್ನಿಸಿದಾಗ, ಕಾನೂನು ಕಾರಣದಿಂದ ಭಾರತದಲ್ಲಿ ಈ ವೀಡಿಯೊಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳುವ ಸ್ವಯಂಚಾಲಿತ ಸಂದೇಶ ಕಾಣಿಸಿಕೊಂಡಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು, ಜೊತೆಗೆ ಫೇಸ್‌ಬುಕ್ ಟೀಕೆಗೆ ಗುರಿಯಾಯಿತು.

ತಪ್ಪಿನ ಕಾರಣ ವಿವರಿಸಿದ ಮೆಟಾ

ಆದರೆ, ವಿಷಯ ಉಲ್ಬಣಗೊಳ್ಳುತ್ತಿದ್ದಂತೆ ಮೆಟಾ ತನ್ನ ತಪ್ಪನ್ನು ಅರಿತುಕೊಂಡಿತು. ಘಟನೆಗೆ ಮೆಟಾ ವಿಷಾದ ವ್ಯಕ್ತಪಡಿಸಿದೆ. ಫೇಸ್‌ಬುಕ್ ಒಡೆತನದ ಮೆಟಾ, ಇದು ಯಾವುದೇ ಕಾನೂನು ಕ್ರಮದ ಪರಿಣಾಮವಲ್ಲ, ಬದಲಾಗಿ ತಾಂತ್ರಿಕ ದೋಷ ಎಂದು ಹೇಳಿದೆ.

ಮೋದಿಯ ಆ ವಿಡಿಯೋದಲ್ಲಿ ಏನಿತ್ತು?

ಈ ವೀಡಿಯೊ ಪ್ರಧಾನಿ ನರೇಂದ್ರ ಮೋದಿಯವರು ಸೆಲ್ಫಿಯಲ್ಲಿ ರೆಕಾರ್ಡ್ ಮಾಡಿದ ಸಂದೇಶವಾಗಿದ್ದು, ವಿಶೇಷವಾಗಿ ನೀಟ್ ಪತ್ರಿಕೆ ಸೋರಿಕೆ ವಿವಾದ ಮತ್ತು ಈ ವಿಷಯದ ಕುರಿತು ಕೇಂದ್ರ ಸಚಿವ ಸಂಪುಟದ ಮುಂಬರುವ ಕ್ರಮದ ಕುರಿತು ದೇಶದ ಜೆನ್-ಜಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಇದೇ ವೀಡಿಯೊವನ್ನು 24 ಗಂಟೆಗಳ ಒಳಗೆ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಈ ಇಡೀ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗ ಮೆಟಾದ ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕಂಪನಿಯ ಅಧಿಕಾರಿಗಳಿಂದ ವಿವರವಾದ ವಿವರಣೆಯನ್ನು ಪಡೆಯಬಹುದು ಎಂದು ನಂಬಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed