ಗಗನ್ ಚಿನ್ನಪ್ಪ ಕಣ್ಣೀರಾಗಿದ್ದಾರೆ. ಎರಡೂ ಕಣ್ಣಿನಲ್ಲಿ ನೀರು ಬರುವಷ್ಟು ಎಮೋಷನಲ್ ಆಗಿದ್ದಾರೆ. ಆದರೆ, ಇವರು ಯಾರ ಮಾತುಗಳಿಗೆ ಇಷ್ಟು ಎಮೋಷನಲ್ ಆದರು ಅಂತ ತಿಳಿಯೋದಿಲ್ಲ.
ಆದರೆ, ಗಗನ್ ಚಿನ್ನಪ್ಪ ಅಳುವಾಗ ಪ್ರೋಮೊದಲ್ಲಿ ಜಗ್ಗ ಮಮ್ಮಿ ವಿಡಿಯೋ ತೋರಿಸುತ್ತಾರೆ. ಗಗನ್ ಚಿನ್ನಪ್ಪ ಕತೆ ಇದಾದ್ರೆ, ತಾಂಡವರ್ ರಾಮ್ ಅವರ ಎಮೋಷನಲ್ ಮಾತು ಬೇರೆ ಇದೆ.
ಇವರು ಧನುಷ್ ಮಂಜುನಾಥ್ ಕುರಿತು ಮಾತನಾಡಿದ್ದಾರೆ. ಮಾತು ಗಂಟಲಲ್ಲಿಯೇ ಉಳಿದಿದೆ ಅಂತಲೂ ಹೇಳ್ತಾರೆ. ಧನುಷ್ ಮಂಜುನಾಥ್ ಕೂಡ ಕಣ್ಣೀರಾಗಿದ್ದಾರೆ.
ದೊಡ್ಮೆನೆಯಿಂದ ಒಬ್ಬರು ಎಮರ್ಜೆನ್ಸಿ ಎಕ್ಸಿಟ್ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ಮನಸ್ಸು ಬಿಚ್ಚಿ ಮಾತನಾಡಲು ಬಿಗ್ ಬಾಸ್ ಚಾನ್ಸ್ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲರೂ ಮನಸ್ಸಿನ ಅಷ್ಟು ನೋವು ಮತ್ತು ಎಮೋಷನ್ಸ್ ಅನ್ನ ಹೊರಗೆ ಹಾಕಿದ್ದಾರೆ. ಬಹುತೇಕ ಎಲ್ಲರೂ ಕಣ್ಣೀರೇ ಹಾಕಿದ್ದಾರೆ. ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ, ಕಿರಣ್ ಶಾಸ್ತ್ರಿ ಹೀಗೆ ಎಲ್ಲರೂ ಎಮೋಷನಲ್ ಆಗಿದ್ದಾರೆ.
ಜಗ್ಗ ಮಮ್ಮಿ ಅಳ್ತಾನೆ ಇದ್ದಾರೆ. ಮನೆಯಲ್ಲಿ ನನ್ನವರು ಅಂತ ಯಾರೂ ಇಲ್ಲ. ಆದರೂ ಮನೆಯಲ್ಲಿ ನಾನು ಆಟ ಆಡ್ತಾ ಇದ್ದೇನೆ ಅಂತಲೇ ಕಣ್ಣೀರು ಸುರಿಸಿದ್ದಾರೆ.
ಈ ಒಂದು ಮನೆಯಿಂದ ಇದೀಗ ಮತ್ತೊಬ್ಬ ಸದಸ್ಯ ಮನೆ ಹೋಗ್ತಾರೆ. ಆದರೆ, ಅದು ಯಾರು ಅನ್ನುವ ಕುತೂಹಲ ಇದೆ.
ಈ ದೊಡ್ಮನೆಯಲ್ಲಿ ಒಟ್ಟು 16 ಜನ ಇದ್ದರು. ಮೊದಲು ಪ್ರಥಮ ಪ್ರಸಾದ್ ಎಲಿಮಿನೇಟ್ ಆದರು. ಇವರಾದ್ಮೇಲೆ ಆರೋಗ್ಯದ ಸಮಸ್ಯೆಯಿಂದ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರು ಆಟವನ್ನ ಅರ್ಧಕ್ಕೆ ಬಿಟ್ಟು ಬಂದರು.
ಈ ವಾರ ಯಾರು ಮನೆಗೆ ಹೋಗುತ್ತಾರೆ. ಎಮರ್ಜೆನ್ಸಿ ಎಕ್ಸಿಟ್ನಿಂದ ಯಾರು ಹೊರಗೆ ಹೋಗ್ತಾರೆ ಅನ್ನುವ ಕುತೂಹಲ ಜಾಸ್ತಿ ಇದೆ. ಇದರೊಟ್ಟಿಗೆ ಈ ದಿನ ಬಿಟ್ಟಿರೋ ಪ್ರೋಮೋದಲ್ಲಿ ಮನೆಯ ಬಹುತೇಕ ಸದಸ್ಯರು ಎಮೋಷನಲ್ ಆಗಿದ್ದಾರೆ.
ಬಿಗ್ ಬಾಸ್ ಹೇಳಿದಂತೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಮನೆಯ ಸದಸ್ಯರಲ್ಲಿ ತಮಗೆ ನೋವು ಮಾಡಿರೋ ಸದಸ್ಯರ ಹೆಸರು ಹೇಳಿ ಕಣ್ಣೀರು ಹಾಕಿದ್ದಾರೆ ಅಂತಲೂ ಹೇಳಬಹುದು.













