Last Updated:
PM Modi-Meloni: ಜಾಗತಿಕ ರಾಜಕಾರಣದ ಮೋಸ್ಟ್ ಫೇವರೆಟ್ ಜೋಡಿ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ರೋಮ್‌ನಲ್ಲಿ ಮೋದಿ ಕೊಟ್ಟ ಆ ಒಂದು ಸ್ಪೆಷಲ್ ಇಂಡಿಯನ್ ಗಿಫ್ಟ್‌ಗೆ ಇಟಲಿ ಸುಂದರಿ ಫುಲ್ ಫ್ಲಾಟ್ ಆಗಿರೋದರ ರೋಚಕ ವಿವರ ಇಲ್ಲಿದೆ.
ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡ್ತಿರೋ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ತಮ್ಮ ದೇಶದ ರಾಜಧಾನಿ ರೋಮ್‌ಗೆ ಅತ್ಯಂತ ಸಡಗರದಿಂದ ಸ್ವಾಗತಿಸಿದ್ದಾರೆ. ಇವರಿಬ್ಬರು ಭೇಟಿಯಾಗ್ತಿದ್ದಂತೆ ಇಡೀ ಇಂಟರ್ನೆಟ್ ಜಗತ್ತು ಮತ್ತೊಮ್ಮೆ “ಮೆಲೋಡಿ” ಹವಾಕ್ಕೆ ಸಾಕ್ಷಿಯಾಗಿದೆ. ಪಿಎಂ ಮೆಲೋನಿ ಅವರು ಪ್ರಧಾನಿ ಮೋದಿಯವರೊಂದಿಗೆ ಕ್ಲಿಕ್ ಮಾಡಿದ ಸೂಪರ್ ಕ್ಯೂಟ್ ಸೆಲ್ಫಿಯನ್ನು (Selfie) ತಮ್ಮ ಅಧಿಕೃತ ‘X’ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ರೋಮ್‌ಗೆ ಸುಸ್ವಾಗತ ನನ್ನ ಆತ್ಮೀಯ ಗೆಳೆಯನೇ” ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರಸ್ತುತ ಹಮ್ಮಿಕೊಂಡಿರುವ ತಮ್ಮ ಐದು ರಾಷ್ಟ್ರಗಳ ಭರ್ಜರಿ ವಿದೇಶಿ ಪ್ರವಾಸದ ಕೊನೆಯ ಹಂತವಾಗಿ ಇಟಲಿ ದೇಶಕ್ಕೆ ಭೇಟಿ ನೀಡಿದ್ದಾರೆ. ಇಟಲಿಯ ರೋಮ್ ನಗರಕ್ಕೆ ಮೋದಿ ನಯವಾಗಿ ಲ್ಯಾಂಡ್ ಆಗುತ್ತಿದ್ದಂತೆ ಇಟಲಿ ಪ್ರಧಾನಿ ಸ್ವತಃ ಎದುರಾಗಿ ಬಂದು ಆತ್ಮೀಯ ಅಪ್ಪುಗೆಯೊಂದಿಗೆ ವೆಲ್ಕಮ್ ಮಾಡಿದ್ದಾರೆ. ಇವರಿಬ್ಬರ ಮುಖಾಮುಖಿಯ ಬೆನ್ನಲ್ಲೇ ಇಬ್ಬರು ನಾಯಕರು ಒಟ್ಟಿಗೆ ಇರುವ ಸಾಲು ಸಾಲು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳು ಹೊರಬಂದಿದ್ದು, ಜಾಗತಿಕ ಮಾಧ್ಯಮಗಳಲ್ಲಿ ಮುಖ್ಯಾಂಶಗಳಾಗಿ ರಾರಾಜಿಸುತ್ತಿವೆ.
ಇನ್ನು ಈ ಭೇಟಿಯ ಹೈಲೈಟ್ ಅಂದ್ರೆ ಪ್ರಧಾನಿ ಮೋದಿ ಅವರು ಪಿಎಂ ಮೆಲೋನಿ ಅವರಿಗೆ ನೀಡಿದ ಆ ಒಂದು ಅತ್ಯಂತ ವಿಶೇಷ ಮತ್ತು ವಿಭಿನ್ನವಾದ ಗಿಫ್ಟ್. ಮೋದಿ ಅವರು ಇಟಲಿ ಪ್ರಧಾನಿಗೆ ಭಾರತದ ಪ್ರಸಿದ್ಧ ಬ್ರ್ಯಾಂಡ್ ಆದ ‘ಮೆಲೋಡಿ’ (Melody) ಕಂಪನಿಯ ಚಾಕೋಲೇಟ್ ಟಾಫಿಗಳ ದೊಡ್ಡ ಪ್ಯಾಕೆಟ್ ಅನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದಾರೆ. “ಮೆಲೋಡಿ ಇತ್ನಿ ಚಾಕೊಲೇಟಿ ಕ್ಯೂ ಹೋತಿ ಹೈ” ಅನ್ನೋ ಡೈಲಾಗ್ ತರಹ, ಜಾಗತಿಕವಾಗಿ ಫೇಮಸ್ ಆಗಿರೋ ಇವರಿಬ್ಬರ ‘ಮೆಲೋಡಿ’ ಹೆಸರಿಗೇ ಮ್ಯಾಚ್ ಆಗೋ ತರಹ ಮೋದಿ ಈ ಚಾಕೋಲೇಟ್ ಪ್ಯಾಕೆಟ್ ಕೊಟ್ಟಿದ್ದು ನಿಜಕ್ಕೂ ಸಖತ್ ಚಾಣಾಕ್ಷ ಮತ್ತು ಕ್ಯೂಟ್ ಐಡಿಯಾ ಆಗಿತ್ತು.
ಭಾರತದ ಈ ಸಿಹಿ ಚಾಕೋಲೇಟ್ ಗಿಫ್ಟ್ ಅನ್ನು ಪ್ರೀತಿಯಿಂದ ಕೈಗೆ ಸ್ವೀಕರಿಸಿದ ಜಾರ್ಜಿಯಾ ಮೆಲೋನಿ ಅವರು ನಗುತ್ತಲೇ ಪ್ರಧಾನಿ ಮೋದಿಯವರಿಗೆ ವಿನಮ್ರವಾಗಿ “ಥ್ಯಾಂಕ್ ಯು” ಎಂದು ಹೇಳಿದ್ದಾರೆ. ಇದರ ಒಂದು ಕ್ಯೂಟ್ ವಿಡಿಯೋವನ್ನು ಮೆಲೋನಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಜಾಗತಿಕ ನಾಯಕರು ಒಬ್ಬರನ್ನೊಬ್ಬರು ನೋಡಿ ಮುಗ್ಧವಾಗಿ ನಗುತ್ತಿರುವ ದೃಶ್ಯವಿದ್ದು, ಇದನ್ನು ನೋಡಿ ಮೆಲೋನಿ ಮತ್ತು ಮೋದಿಯವರ ಫ್ಯಾನ್ಸ್ ತುಂಬ ಖುಷಿಪಟ್ಟಿದ್ದಾರೆ.
May 20, 2026 12:24 PM IST













