Last Updated:
Parle-G: 1929 ರಲ್ಲಿ ಪಾರ್ಲೆ-ಜಿ ಬ್ರ್ಯಾಂಡ್ ಪ್ರಾರಂಭವಾದಾಗ, ಸ್ವಾತಂತ್ರ್ಯ ಹೋರಾಟವು ಉತ್ತುಂಗದಲ್ಲಿತ್ತು. ಸ್ವದೇಶಿ ಚಳುವಳಿ ದೇಶಾದ್ಯಂತ ವ್ಯಾಪಿಸುತ್ತಿತ್ತು, ಮತ್ತು ಈ ಚಳುವಳಿಯಿಂದ ಪ್ರೇರಿತರಾದ ಮೋಹನ್ ಲಾಲ್ ದಯಾಳ್, ಈ ಭಾರತೀಯ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಆರಂಭದಲ್ಲಿ, ಕ್ಯಾಂಡಿ ತಯಾರಿಸುವುದು ಅವರ ಉದ್ದೇಶವಾಗಿತ್ತು!
ಸ್ವಾತಂತ್ರ್ಯೋತ್ಸವದ (Independence Day) ಈ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಪ್ರಾಣ ತ್ಯಾಗ ಮಾಡಿದ ಹೋರಾಟಗಾರರು, ವೀರರ ಬಗ್ಗೆ ತಿಳಿದುಕೊಳ್ಳುತ್ತೇವೆ. ಇದರ ಜೊತೆಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ (British Empire) ಸೆಡ್ಡು ಹೊಡೆದು, ಬ್ರಿಟಿಷ್ ಬ್ರಾಂಡ್ಗೆ ಪೈಪೋಟಿ ಕೊಟ್ಟ ದೇಸಿಯ ಬ್ರಾಂಡ್ (Indian brands), ದೇಸೀಯ ಸಂಸ್ಥೆಗಳ (Indian companies) ಬಗ್ಗೆಯೂ ತಿಳಿದುಕೊಳ್ಳಲೇ ಬೇಕು. ಇದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಪಾರ್ಲೆ-ಜಿ (Parle-G) ಕಂಪನಿಯದ್ದು! ಇದು ಸ್ವದೇಶಿ ಚಳವಳಿಯ (Swadeshi movement) ಸಂದರ್ಭದಲ್ಲಿ ಭಾರತೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭವಾಯಿತು. ಬಳಿಕ ಭಾರತೀಯರ ಮನೆ ಮಾತಾಗಿದ್ದು ಇತಿಹಾಸ!














