Last Updated:
ರಾಕಿಂಗ್ ಸ್ಟಾರ್ ಯಶ್ 12 ವರ್ಷದ ಹಿಂದಿನ ಒಂದು ಸಂದರ್ಶನದಲ್ಲಿ ಸಖತ್ ಆಗಿಯೇ ಮಾತನಾಡಿದ್ದಾರೆ. ಮದುವೆ ಬಗ್ಗೆ ಇವರಿಗಿದ್ದ ಪರಿಕಲ್ಪನೆ ಬೇರೆ ಇತ್ತು. ಸ್ಟೈಲಿಂಗ್ ಬಗ್ಗೆ ಅಂತಹ ದೊಡ್ಡ ಆಸಕ್ತಿ ಏನೂ ಇರಲಿಲ್ಲ. ಇವರ ಆ ದಿನದ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) 12 ವರ್ಷದ ಹಿಂದೆ ಒಂದು ಸಂದರ್ಶನ ಕೊಟ್ಟಿದ್ದರು. ಗಜಕೇಸರಿ ಚಿತ್ರದ (Gajakesari Movie) ಪ್ರಚಾರದ ಸಮಯದಲ್ಲಿಯೇ ಯಶ್ ಚಿತ್ರದ (Yash Movie) ಬಗ್ಗೆನೂ ಹೇಳಿಕೊಂಡಿದ್ದರು. ಮದುವೆ ಬಗ್ಗೆನೂ ಹೇಳಿಕೊಂಡಿದ್ದರು. ಸ್ಟೈಲಿಂಗ್ ಕುರಿತು ಹೇಳಿದ್ದರು. ಪ್ರತಿ ದಿನ ಕಡಿಮೆ ತಿನ್ನಿ, ವರ್ಕೌಟ್ ಮಾಡಿ, ಲಿಕ್ವಿಡ್ ಡಯಟ್ ಕಡಿಮೆ ಮಾಡಿ, ಸುಮ್ನೆ ಕುಳಿತುಕೊಳ್ಳಬೇಡಿ, ವಾಕ್ (Walk) ಮಾಡಿ, ಪತ್ನಿಗೆ ಹೆಲ್ಪ್ ಮಾಡಿ, ಹೀಗೆ ಹೇಳಿಕೊಂಡಿದ್ದರು. ಮದುವೆ ಯಾವಾಗ ಆಗ್ತೀರಾ ಅಂತ ಕೇಳುವ ಪ್ರಶ್ನೆಗೆ ಕೂಡ ಉತ್ತರ ಕೊಟ್ಟಿದ್ದರು. ಈ ಎಲ್ಲದರ ಒಂದು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.














