Last Updated:
ಮೃತ ಮನೋಜ್ ಸೋನಿ ಅವರ ಅಪ್ರಾಪ್ತ ಮಗಳು, ಅದೇ ಊರಿನ 22 ವರ್ಷದ ವಿಮಲ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗುವುದಕ್ಕೆ ರೆಡಿಯಾಗಿದ್ದರು. ಇದಕ್ಕೆ ಮನೋಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಘಟನೆ ಬಗ್ಗೆ ಕೇಳಿದ್ರೆ, ಪ್ರಪಂಚದಲ್ಲಿ ನಿಜಕ್ಕೂ ಈ ರೀತಿಯ ಮನುಷ್ಯರು ಇರ್ತಾರೆ ಅನ್ನೋ ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ಮಗಳ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಪತ್ನಿ, ಅಪ್ರಾಪ್ತ ಮಗಳು ಹಾಗೂ ಆಕೆಯ ಬಾಯ್ಫ್ರೆಂಡ್ (Boyfriend) ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿ ಈ ಘಟನೆ ನಡೆದಿದ್ದು, ಜೈಸಿಂಗ್ಪುರಾದ ಗಣೇಶ್ ಧಾಮ್ ಕಾಲೋನಿಯ ನಿವಾಸಿ ಮನೋಜ್ ಸೋನಿ (42) ಕೊಲೆಯಾಗಿದ್ದಾನೆ.














