Srinagara Kitty Movie: ಸಿಂಗರ್ ಆದ ಶ್ರೀನಗರ ಕಿಟ್ಟಿ, ಸಿನಿಮಾ ಯಾವುದು? | | ACTPnews

Kannada Actor Srinagara Kitty Sung for Veshagalu Movie


ಸಿಂಗರ್ ಶ್ರೀನಗರ ಕಿಟ್ಟಿ

ಶ್ರೀನಗರ ಕಿಟ್ಟಿ ಅವರು ವೇಷಗಳು ಅನ್ನುವ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಎರಡು ರೀತಿ ಶೇಡ್ ಇರೋ ಮಾತ್ರ ಮಾಡಿದ್ದಾರೆ.

ಶ್ರೀನಗರ ಕಿಟ್ಟಿ ‘ವೇಷಗಳು’ ಸಿನಿಮಾ

ಬಸಪ್ಪ ಅನ್ನುವ ಒಂದು ಪಾತ್ರ ಮಾಡಿದ್ದಾರೆ. ಬಸಮ್ಮ ಜೋಗತಿ ಅನ್ನೋದು ಮತ್ತೊಂದು ಶೇಡ್ ಇರೋ ಪಾತ್ರವೇ ಆಗಿದೆ. ಎರಡನ್ನೂ ಅಷ್ಟೆ ನೀಟ್ ಆಗಿಯೇ ನಿಭಾಯಿಸಿದ್ದಾರೆ.

ದೇವರ ದೃಷ್ಟಿಯಲ್ಲಿ..

ಈ ಚಿತ್ರದ ದೇವರ ದೃಷ್ಟಿಯಲ್ಲಿ ಅನ್ನುವ ಹಾಡನ್ನ ಶ್ರೀನಗರ ಕಿಟ್ಟಿ ಹಾಡಿದ್ದಾರೆ. ಕೌಶಿಕ್ ಹರ್ಷ ಹಾಗೂ ಡಾಕ್ಟರ್ ಚೇತನ್ ಸದಾನಂದ್ ಈ ಹಾಡನ್ನ ಬರೆದಿದ್ದಾರೆ.

ಕೌಶಿಕ್ ಹರ್ಷ ಸಂಗೀತವನ್ನೂ ಮಾಡಿದ್ದಾರೆ. ಇವರ ಸಂಗೀತದ ಹಾಡನ್ನ ಶ್ರೀನಗರ ಕಿಟ್ಟಿ ಹಾಡಿದ್ದಾರೆ. ಗಟ್ಟಿ ಧ್ವನಿಯ ಶ್ರೀನಗರ ಕಿಟ್ಟಿ ಇಲ್ಲಿ ಅಷ್ಟೆ ಎಫೆಕ್ಟಿವ್ ಆಗಿಯೇ ಹಾಡಿದ್ದಾರೆ.

“ದೇವರ ದೃಷ್ಟಿಯಲ್ಲಿ ಎಲ್ಲ ಜೀವ ಒಂದೇ ಕಣಣ್ಣ, ಅವರವರು ಪಡ್ಕಂಡ ಬಂದಿದ್ದ ಅವರವರೇ ಅನುಭವಿಸಬೇಕಣ್ಣ.”

ಈ ರೀತಿ ಸಾಗುವ ಈ ಹಾಡು ಎಲ್ಲರಿಗೂ ಅರ್ಥವಾಗುವ ಆಗುತ್ತದೆ. ಆ ರೀತಿನೇ ಶ್ರೀನಗರ ಕಿಟ್ಟಿ ಇದನ್ನ ಹಾಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ವಿಡಿಯೋ ಕೂಡ ರಿಲೀಸ್ ಆಗಿದೆ.

ಚಿತ್ರದ ಡೈರೆಕ್ಟರ್ ಯಾರು

ವೇಷಗಳು ಚಿತ್ರವನ್ನ ಕಿಶನ್ ರಾವ್ ದಳವಿ ಡೈರೆಕ್ಷನ್ ಮಾಡಿದ್ದಾರೆ. ಚಿತ್ರಕತೆಯೊಂದಿಗೆ ಈ ಸಿನಿಮಾವನ್ನ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

Kannada Actor Srinagara Kitty Sung for Veshagalu Movie

ದೇವರ ದೃಷ್ಟಿಯಲ್ಲಿ..

ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಈ ಚಿತ್ರವನ್ನ ಅರ್ಪಿಸುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದ ಕತೆಯ ವಿಚಾರಕ್ಕೆ ಬಂದ್ರೆ, ರವಿ ಬೆಳಗೆರೆ ಬರೆದ ಕತೆಯನ್ನ ತೆಗೆದುಕೊಂಡು ಚಿತ್ರ ಮಾಡುತ್ತಿದ್ದಾರೆ.

ಶ್ರೀನಗರ ಕಿಟ್ಟಿ ‘ವೇಷಗಳು’ ಸಿನಿಮಾ

ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಈಗಾಗಲೇ ಹೇಳಿದಂತೆ ಎರಡು ರೀತಿ ಪಾತ್ರ ಮಾಡಿದ್ದಾರೆ. ಬಸಪ್ಪ ಅನ್ನುವ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಆದರೆ, ಜೋಗತಿ ಬಸಮ್ಮ ಆಗಿಯೂ ಇಲ್ಲಿ ಅಭಿನಯಿಸಿದ್ದಾರೆ. ಈ ಎರಡೂ ಪಾತ್ರಗಳನ್ನ ಒಟ್ಟಿಗೆ ನೋಡಿದಾಗ ಅರ್ಧನಾರೇಶ್ವರನನ್ನ ಕಂಡಂತೆ ಆಗುತ್ತದೆ.

ಚಿತ್ರದಲ್ಲಿ ಬಳ್ಳಾರಿ ಕನ್ನಡ

ಈ ಚಿತ್ರದಲ್ಲಿ ಬಳ್ಳಾರಿ ಕನ್ನಡ ಭಾಷೆ ಇರುತ್ತದೆ. ಉತ್ತರ ಕರ್ನಾಟಕದ ಸವದತ್ತಿ ಅಲ್ಲದೆ ಉತ್ತರ ಭಾರತದ ಮಹಾಕಾಲೇಶ್ವರದಲ್ಲೂ ಈ ಚಿತ್ರವನ್ನ ತೆಗೆಯುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಆಗಿದೆ. ಎರಡನೇ ಹಂತದ ಶೂಟಿಂಗ್ ಇನ್ನಷ್ಟೆ ಆಗ್ಬೇಕಿದೆ. ಶ್ರೀನಗರ ಕಿಟ್ಟಿ ಪಾತ್ರದ ಶೂಟಿಂಗ್ ಇನ್ನು ಶುರು ಆಗಿಲ್ಲ ಅಂತಲೇ ಮಾಧ್ಯಮಗಳಿಗೆ ಡೈರೆಕ್ಟರ್ ಕಿಶನ್ ರಾವ್ ದಳವಿ ಹೇಳಿಕೊಂಡಿದ್ದಾರೆ.

ಮೊನ್ನೆ ಜನ್ಮ ದಿನ

ಶ್ರೀನಗರ ಕಿಟ್ಟಿ ಜುಲೈ-8 ರಂದು 49 ನೇ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ. ಈ ದಿನವೇ ವೇಷಗಳು ಚಿತ್ರದ ಕಿಟ್ಟಿ ಹಾಡಿರೋ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ಆದರೆ, ಈ ಹಾಡಿನ ವಿಡಿಯೋ ಹೇಗೆ ಇರುತ್ತದೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಕಾರಣ, ಸದ್ಯ ಬಿಟ್ಟಿರೋ ವಿಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಮ್ಯಾಟರ್ ಮಾತ್ರ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports