Last Updated:
NS Shankar: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಿಧನರಾಗಿದ್ದಾರೆ. ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ಎನ್ಎಸ್ ಶಂಕರ್ 67ನೇ ವಯಸ್ಸಿಗೆ ಮೃತಪಟ್ಟಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕ, ಸಾಹಿತಿ, ಹಿರಿಯ ಪತ್ರಕರ್ತ ಎನ್ ಎಸ್ ಶಂಕರ್ (NS Shankar) (67) ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ (Heart Attack) ಹಿರಿಯ ನಿರ್ದೇಶಕ ಮನೆಯಲ್ಲೇ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ್ ಇತ್ತೀಚೆಗಷ್ಟೇ ಪತ್ನಿಯನ್ನು ಕಳೆದುಕೊಂಡಿದ್ದರು.
ಎನ್ ಎಸ್ ಶಂಕರ್ ಹಿರಿಯ ನಿರ್ದೇಶಕ, ಬರಹಗಾರ, ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ರಮೇಶ್ ನಟನೆಯ ಉಲ್ಟಾಪಲ್ಟಾ ಸಿನಿಮಾ ನಿರ್ದೇಶಿಸಿದ್ದರು. ಶಂಕರ್ ಇಂದು ಮುಂಜಾನೆ ಮಲಗಿದ್ದಲ್ಲೇ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ಜನವರಿಯಲ್ಲಿ ಪತ್ನಿ ಉಮರಾಣಿಯನ್ನ ಕಳೆದುಕೊಂಡಿದ್ದರು. ಸಂಗಾತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಶಂಕರ್ ಈಗ ನಿಧನರಾಗಿರುವ ಸುದ್ದಿ ಬಂದಿದೆ.
ಭಾನುವಾರ ಮುಂಜಾನೆಯೇ ಹಿರಿಯ ನಿರ್ದೇಶಕ ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಡೈರೆಕ್ಟರ್ ಶಂಕರ್ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವರದಿ: ಆಶಿಕ್ ಮುಲ್ಕಿ, ಆನಂದ್ ಸಾಲುಂಡಿ, ನ್ಯೂಸ್18 ಕನ್ನಡ, ಬೆಂಗಳೂರು
Bangalore,Karnataka
Jun 28, 2026 10:48 AM IST













