Actor: ನನ್ನ ಪತಿಗೆ ತುಂಬಾನೇ ಅಫೇರ್ಸ್ ಇತ್ತು! ಖ್ಯಾತ ನಟನ ಸೀಕ್ರೆಟ್ಸ್ ಬಿಚ್ಚಿಟ್ಟ ಪತ್ನಿ ! | | ACTPnews

ನಟ ಗೋವಿಂದ


Last Updated:

ಇತ್ತೀಚೆಗೆ ಪ್ರಸಾರವಾದ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸುನೀತಾ ಅಹುಜಾ ತಮ್ಮ ಕುಟುಂಬ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ನಟ ಗೋವಿಂದ
ನಟ ಗೋವಿಂದ

ಬಾಲಿವುಡ್‌ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಹಲವು ವರ್ಷಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ದಂಪತಿಗಳಲ್ಲಿ ಒಬ್ಬರು. ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೀಡುವ ಹೇಳಿಕೆಗಳಿಂದ ಅವರು ಆಗಾಗ ಸುದ್ದಿಯಾಗುತ್ತಾರೆ. ಇದೀಗ ರಿಯಾಲಿಟಿ ಶೋ ಒಂದರಲ್ಲಿ ಸುನೀತಾ ಅಹುಜಾ ಹಂಚಿಕೊಂಡಿರುವ ಕೆಲವು ವೈಯಕ್ತಿಕ ಅನುಭವಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಇತ್ತೀಚೆಗೆ ಪ್ರಸಾರವಾದ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸುನೀತಾ ಅಹುಜಾ ತಮ್ಮ ಕುಟುಂಬ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದ ವೇಳೆ ನಿರೂಪಕಿ ಫರಾ ಖಾನ್, ಸುನೀತಾ ಅವರು ಹಿಂದೆ ನೀಡಿದ್ದ ಒಂದು ಹೇಳಿಕೆಯನ್ನು ಪ್ರಸ್ತಾಪಿಸಿದರು. ಅದರಲ್ಲಿ ನನಗೆ ಗೋವಿಂದ ಅವರಂತಹ ಮಗ ಬೇಕು, ಆದರೆ ಗಂಡನಾಗಿ ಬೇಡ ಎಂದು ಹೇಳಿದ್ದನ್ನು ನೆನಪಿಸಿ ಅದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ಸುನೀತಾ ಅಹುಜಾ ಯಾವುದೇ ಮುಚ್ಚುಮರೆ ಇಲ್ಲದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರ ಉತ್ತರವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀತಾ, ಪ್ರೀತಿಯ ಸಂಬಂಧದಲ್ಲಿ ಕೆಲವೊಮ್ಮೆ ಅನೇಕ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ತಮ್ಮ ಪತಿ ಗೋವಿಂದ ಅವರ ಜೀವನದಲ್ಲಿ ಹಲವು ಅಫೇರ್ಸ್ ಇದ್ದವು ಎಂಬ ವಿಚಾರವನ್ನು ಅವರು ಬಹಿರಂಗವಾಗಿ ಉಲ್ಲೇಖಿಸಿದರು.

ಸುನೀತಾ ಅಹುಜಾ ಅವರ ಈ ಹೇಳಿಕೆ ಹೊರಬಂದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports