Nana Patekar’s Funeral: ನಾನಾ ಪಾಟೇಕರ್ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ | | ACTPnews

ನಾನಾ ಪಾಟೇಕರ್


Last Updated:

ಹಿರಿಯ ನಟ ನಾನಾ ಪಾಟೇಕರ್ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುಣೆಯ ಡೋಂಜೆ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ನಾನಾ ಪಾಟೇಕರ್
ನಾನಾ ಪಾಟೇಕರ್

ಪುಣೆ, ಮಹಾರಾಷ್ಟ್ರ: ಹಿಂದಿ ಮತ್ತು ಮರಾಠಿ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆ (Nana Patekar’s funeral) ರಾತ್ರಿ ಪುಣೆಯ (Pune) ಹೊರವಲಯದ ಡೋಂಜೆ (Donje) ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್ ಆವರಣದಲ್ಲಿ ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆದಿದೆ. 75 ವರ್ಷ ವಯಸ್ಸಿನ ನಾನಾ ಪಾಟೇಕರ್ ಗುರುವಾರ ಬೆಳಿಗ್ಗೆ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರದಲ್ಲಿ ಮಹಾರಾಷ್ಟ್ರ ಸಿಎಂ ಸೇರಿದಂತೆ ರಾಜಕೀಯ ನಾಯಕರು, ಸಿನಿ ರಂಗದ ಗಣ್ಯರು ಹಾಜರಿದ್ದರು.

ಇಂದು ಹೃದಯಾಘಾತದಿಂದ ಮೃತಪಟ್ಟಿದ್ದ ನಾನಾ ಪಾಟೇಕರ್

ನಿನ್ನೆ ತಡರಾತ್ರಿ ಸುಮಾರು 2:30–3:30ರ ಸುಮಾರಿಗೆ ಅವರು ಸ್ನೇಹಿತರಿಗೆ ಅಸ್ವಸ್ಥತೆ ಕುರಿತು ಸಂದೇಶ ಕಳುಹಿಸಿದ್ದರು. ಸುಮಾರು 4 ಗಂಟೆಗೆ ಸ್ನೇಹಿತರು ಮನೆಗೆ ತಲುಪಿದಾಗ ಅವರು ಪ್ರಜ್ಞೆ ತಪ್ಪಿದ್ದರು. ಕೇರ್‌ಟೇಕರ್ ಸಹಾಯದಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ನಿರಂತರ CPR ಮತ್ತು ಕಾರ್ಡಿಯಾಕ್ ಮಸಾಜ್ ನೀಡಿದರೂ ಅವರನ್ನು ಉಳಿಸಲಾಗಲಿಲ್ಲ. ಬೆಳಿಗ್ಗೆ 5:20ರ ಸುಮಾರಿಗೆ ಅವರು ನಿಧನರಾದರೆಂದು ಘೋಷಿಸಲಾಯಿತು.

ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ

ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಈ ವಿವರಗಳನ್ನು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಗೋವಾ ಮೆಡಿಕಲ್ ಕಾಲೇಜ್‌ಗೆ ಕಳುಹಿಸಲಾಗಿತ್ತು. ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್, ಮರಾಠಿ ರಂಗಭೂಮಿ ಹಾಗೂ ಮರಾಠಿ ಮತ್ತು ಹಿಂದಿ ಸಿನಿಮಾಗಳಿಗೆ ನಾನಾ ಪಾಟೇಕರ್ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಘೋಷಿಸಿದ್ದರು.

ಸಾರ್ವಜನಿಕ ದರ್ಶನದ ನಂತರ ಅಂತ್ಯಕ್ರಿಯೆ

ನಾಮ್ ಫೌಂಡೇಶನ್‌ನ ಸಿಇಒ ಗಣೇಶ್ ಥೋರಾಟ್ ಹೇಳಿಕೆಯಂತೆ, ಮೃತದೇಹವನ್ನು ಸಂಜೆ ಸುಮಾರು 5 ಗಂಟೆಗೆ ಪುಣೆಗೆ ತರಲಾಯ್ತು. ಅಂತಿಮ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಡೋಂಜೆ ಫಾರ್ಮ್‌ಹೌಸ್ ಆವರಣದಲ್ಲೇ ಅಂತಿಮ ಸಂಸ್ಕಾರ ನಡೆಯಿತು. ಗೋವಾದಲ್ಲಿ ಸ್ವಲ್ಪ ಸಮಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ನಂತರ ಮೃತದೇಹವನ್ನು ಮೋಪಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪುಣೆಗೆ ಕಳುಹಿಸಲಾಗಿದೆ. ನಟನ ಮಗ ಮಲ್ಹಾರ್ ಪಾಟೇಕರ್ ಗೋವಾಕ್ಕೆ ತಲುಪಿದ್ದಾರೆ.

ನಾನಾ ನಿಧನಕ್ಕೆ ಗಣ್ಯರ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚಿತ್ರರಂಗದ ಹಲವು ಮುಖಂಡರು ಮತ್ತು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಕ್ರಾಂತಿವೀರ್, ಪರಿಂದಾ, ನಟಸಾಮ್ರಾಟ್ ಮುಂತಾದ ಚಿತ್ರಗಳ ಮೂಲಕ ತೀವ್ರ ಅಭಿನಯಕ್ಕೆ ಹೆಸರಾದ ನಾನಾ ಪಾಟೇಕರ್ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಪದ್ಮಶ್ರೀ ಪಡೆದಿದ್ದರು. ರೈತರಿಗಾಗಿ ನಾಮ್ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಸರ್ಕಾರದಿಂದ ಸಕಲ ಸರ್ಕಾರಿ ಗೌರವ

ನಾನಾ ಪಾಟೇಕರ್ ಅವರ ಜನಪ್ರಿಯತೆ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಪರಿಣಾಮವಾಗಿ, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ರು. ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ವಿದಾಯ ಹೇಳಿತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports