Last Updated:
Namo Drone Didi: ಕೇಂದ್ರದ ‘ನಮೋ ಡ್ರೋನ್ ದೀದಿ’ ಯೋಜನೆ ಗ್ರಾಮೀಣ ಮಹಿಳೆಯರಿಗೆ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ನೆರವಾಗುತ್ತಿದೆ. ಕರ್ನಾಟಕ 145 ತರಬೇತಿ ಪಡೆದ ಡ್ರೋನ್ ದೀದಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಗ್ರಾಮೀಣ ಭಾಗದ ಮಹಿಳೆಯರು (rural women) ತಂತ್ರಜ್ಞಾನವನ್ನು ಬಳಸಿ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೇಂದ್ರ ಸರ್ಕಾರದ (Central Government) ‘ನಮೋ ಡ್ರೋನ್ ದೀದಿ’ ಯೋಜನೆಯು (Namo Drone Didi’ scheme) ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ. ಉತ್ತರಪ್ರದೇಶ (Uttar Pradesh) ಸೇರಿದಂತೆ ದೇಶಾದ್ಯಂತ ಗ್ರಾಮೀಣ ಮಹಿಳೆಯರು ಈಗ ಪ್ರಮಾಣೀಕೃತ ಡ್ರೋನ್ ಪೈಲಟ್ಗಳಾಗಿ (certified drone pilots) ಹೊರಹೊಮ್ಮುತ್ತಿದ್ದಾರೆ.














