Last Updated:
ಹುನುಮಾನ್ ಅಂಶ್ ಚಿತ್ರಕ್ಕೆ ರಿಷಬ್ ಶೆಟ್ರು ಸಪೋರ್ಟ್ ಮಾಡಿದ್ದಾರೆ. ಈ ಒಂದು ಸಪೋರ್ಟ್ ಚಿತ್ರದ ಡೈರೆಕ್ಟರ್ ವಿಶಾಲ್ ಚತುರ್ವೇದಿ ಅವರಿಗೆ ಆಶ್ಚರ್ಯ ಮೂಡಿಸಿದೆ. ಅಷ್ಟೆ ಖುಷಿನೂ ತಂದಿದೆ. ಇದನ್ನ ಸಂದರ್ಶನ ಒಂದರಲ್ಲಿ ಇವರು ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹನುಮಾನ್ ಅಂಶ್ ಚಿತ್ರಕ್ಕೆ (Hanuman Ansh) ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಆರಂಭದ ವಾರದಲ್ಲಿ ಇದು ಹೋಯ್ತು ಬಿಡು ಅಂದವರೇ ಹೆಚ್ಚು. 2 ಕೋಟಿ ಬಜೆಟ್ ಅಲ್ಲಿ ಚಿತ್ರ ರೆಡಿ ಆಗಿತ್ತು. ಆದರೆ, ಚಮತ್ಕಾರ ಅನ್ನುವ ಹಾಗೆ ಈ ಚಿತ್ರ ಓಡೋಕೆ ಶುರು ಆಯಿತು. ಅದೆಷ್ಟು ಅಂದ್ರೆ 100 ಕ್ಲಬ್ ಕೂಡ ಈ ಚಿತ್ರ ಸೇರಿಯೇ ಬಿಡ್ತು. ನೋಡ್ ನೋಡ್ತಾನೇ ಈ ಚಿತ್ರ ಬಾಕ್ಸ್ ಆವರಿಸಿಕೊಂಡೇ ಬಿಡ್ತು. ದಕ್ಷಿಣದ ನಾಯಕ ನಟ ರಿಷಬ್ ಶೆಟ್ಟಿ (Rishab Shetty) ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಸಪೋರ್ಟ್ ಮಾಡಿದರು. ಇದನ್ನ ನೋಡಿದ ಚಿತ್ರದ ಡೈರೆಕ್ಟರ್ ಡಾಕ್ಟರ್ ವಿಶಾಲ್ ಚತುರ್ವೇದಿ (Director Dr Vishal Chaturvedi) ಆಶ್ಚರ್ಯ ಪಟ್ಟರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೂ ಏನೆಲ್ಲ ಹೇಳಿದ್ದಾರೆ ಅನ್ನುವುದು ಮುಂದೆ ಇದೆ ಓದಿ.














