Namma Run Bengaluru: ಕೊನೆ ದಿನಕ್ಕೂ ಮುನ್ನವೇ ಸೋಲ್ಡ್ ಔಟ್! ಫಿಟ್ನೆಸ್ ಹಬ್ಬಕ್ಕೆ 10 ಸಾವಿರ ಜನ ಬರೋದು ಪಕ್ಕಾ! | ಲೈಫ್‌ಸ್ಟೈಲ್ | ACTPnews

ಮ್ಯಾರಥಾನ್


Last Updated:

ನೆಟ್‌ವರ್ಕ್ 18 ಆಯೋಜಿಸಿ ಟಿಇ ಸ್ಪೋರ್ಟ್ಸ್ ನಡೆಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ ಇನ್ನು ಕೆಲವೇ ದಿನಗಳಲ್ಲಿ ನಗರದ ರನ್ನರ್‌ಗಳನ್ನು ಒಂದುಗೂಡಿಸಲಿದೆ. ಅಂತಿಮ ದಿನಕ್ಕೂ ಮುನ್ನವೇ 10 ಸಾವಿರ ಸ್ಲಾಟ್‌ಗಳು ಭರ್ತಿಯಾಗಿರುವುದು ಬೆಂಗಳೂರಿನ ರನ್ನರ್‌ಗಳ ಉತ್ಸಾಹಕ್ಕೆ ಸ್ಪಷ್ಟ ಸಾಕ್ಷಿ.

ಮ್ಯಾರಥಾನ್
ಮ್ಯಾರಥಾನ್

ನೆಟ್‌ವರ್ಕ್ 18 (Network 18) ಆಯೋಜಿಸಿ ಟಿಇ ಸ್ಪೋರ್ಟ್ಸ್ (TE Sports) ನಡೆಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ (Namma Run Bengaluru) ಇನ್ನು ಕೆಲವೇ ದಿನಗಳಲ್ಲಿ ನಗರದ ರನ್ನರ್‌ಗಳನ್ನು ಒಂದುಗೂಡಿಸಲಿದೆ. ಫಿಟ್ ಇಂಡಿಯಾ (Fit India) ಮತ್ತು ಮಾದಕವಸ್ತು-ಮುಕ್ತ (Drug-Free) ಭಾರತ ಗುರಿಯೊಂದಿಗೆ ನಡೆಯುವ ಈ ಫಿಟ್‌ನೆಸ್ (Fitness) ಹಬ್ಬ ಅಕ್ಟೋಬರ್ 11ರಂದು ಬೆಳಿಗ್ಗೆ 5:30ಕ್ಕೆ ನೈಸ್ ರೋಡ್ ಟೋಲ್ ಪ್ಲಾಜಾ, ಪಿಇಎಸ್ ಕಾಲೇಜು ಹಿಂದೆ, ಹೊಸಕೆರೆಹಳ್ಳಿಯಲ್ಲಿ ಆರಂಭವಾಗಲಿದೆ.

ಮಕ್ಕಳ ಫನ್ ರನ್‌ನಿಂದ ಹಿಡಿದು ಹಿರಿಯರ ವಾಕಥಾನ್, 5ಕಿ.ಮೀ. ಮತ್ತು 10ಕಿ.ಮೀ. ಓಟ ಹಾಗೂ 21ಕಿ.ಮೀ. ಹಾಫ್ ಮ್ಯಾರಥಾನ್ ವರೆಗೆ ವಿವಿಧ ವಿಭಾಗಗಳಿರುವ ಈ ಕಾರ್ಯಕ್ರಮ ಕುಟುಂಬದ ಎಲ್ಲರನ್ನೂ ಒಳಗೊಳ್ಳುವ ಆರೋಗ್ಯ ಉತ್ಸವವಾಗಿದೆ.

ನಮ್ಮ ರನ್ ಬೆಂಗಳೂರು ಮ್ಯಾರಥಾನ್‌ಗೆ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 1 ಅಂತಿಮ ದಿನವಾಗಿತ್ತು. ಈ ಓಟಕ್ಕೆ ಕೇವಲ 10 ಸಾವಿರ ಮಂದಿಗೆ ಮಾತ್ರ ಅವಕಾಶವಿತ್ತು. ಆದರೆ ಅಂತಿಮ ದಿನಕ್ಕೆ ಒಂದು ದಿನ ಮುನ್ನವೇ 10 ಸಾವಿರ ಜನರು ನೋಂದಾಯಿಸಿಕೊಂಡಿದ್ದಾರೆ. ಇದು ಬೆಂಗಳೂರಿನ ರನ್ನರ್‌ಗಳ ಉತ್ಸಾಹಕ್ಕೆ ಸ್ಪಷ್ಟ ಸಾಕ್ಷಿ.

ನಗರದಲ್ಲಿ ಓಡುವ ಆಸಕ್ತಿ ಹೆಚ್ಚುತ್ತಿದೆ. ಈ ಫಿಟ್‌ನೆಸ್ ಹಬ್ಬ ಕೇವಲ ಓಟವಲ್ಲ. ಆರೋಗ್ಯಕರ ಜೀವನ, ಒಗ್ಗಟ್ಟು ಮತ್ತು ಮಾದಕವಸ್ತು-ಮುಕ್ತ ಭಾರತದ ಸಂದೇಶವನ್ನು ಇದು ಒಟ್ಟಿಗೆ ತರುತ್ತದೆ. ಸಾವಿರಾರು ಜನರು ಒಟ್ಟಿಗೆ ಓಡುವ ಈ ಮ್ಯಾರಥಾನ್ ಓಟ ಬೆಂಗಳೂರಿನ ಫಿಟ್‌ನೆಸ್ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಈ ಓಟದ ಕಾರ್ಯಕ್ರಮದಲ್ಲಿ ವಿಭಾಗಗಳು

ಮಕ್ಕಳಿಗೆ 1 ಕಿಮೀ ಮತ್ತು 2 ಕಿಮೀ ಫನ್ ರನ್, ಹಿರಿಯರಿಗೆ 3 ಕಿಮೀ ನಡಿಗೆ (ವಾಕಥಾನ್), ಎಲ್ಲರಿಗೂ 5 ಕಿಮೀ ಮತ್ತು 10 ಕಿಮೀ ಫನ್ ರನ್, ಸ್ಪರ್ಧಾತ್ಮಕ 5 ಕಿಮೀ ಮತ್ತು 10 ಕಿಮೀ ಟೈಮ್ಡ್ ರನ್, 21 ಕಿಮೀ ಹಾಫ್ ಮ್ಯಾರಥಾನ್.

ಸ್ಪರ್ಧಾತ್ಮಕ ವಿಭಾಗಗಳಿಗೆ ಸುಮಾರು ₹3–4 ಲಕ್ಷ ಬಹುಮಾನ ಇದೆ. ನೋಂದಾಯಿಸಿದವರಿಗೆ ಬ್ರಾಂಡೆಡ್ ಟಿ-ಶರ್ಟ್, ಫಿನಿಶರ್ ಮೆಡಲ್, ಬಿಬ್, ಇ-ಸರ್ಟಿಫಿಕೇಟ್, ನೀರು, ಜುಂಬಾ, ಫಿಟ್‌ನೆಸ್ ಫೆಸ್ಟಿವಲ್, ಲೈವ್ ಸಂಗೀತ ಮತ್ತು ಫೋಟೋಗಳು ಸಿಗುತ್ತವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports