ಮದರ್ ಪ್ರಾಮಿಸ್ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಮುಂದಿನ ತಿಂಗಳು ಇದು ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರ ತಂಡ ಈ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ.
ಅಕ್ಟೋಬರ್-2 ರಿಂದ ಸ್ಟ್ರೀಮಿಂಗ್
(ಚಿತ್ರ ಕೃಪೆ: ಮದರ್ ಪ್ರಾಮಿಸ್ ಸಿನಿಮಾ ಟೀಮ್)
ಮದರ್ ಪ್ರಾಮಿಸ್ ಸಿನಿಮಾದಲ್ಲಿ ಸಾಕಷ್ಟು ವಿಷಯ ಇದೆ. ಹಾಸ್ಯವು ಇದೆ. ಜೂಜುಕೋರ ರೊಸ್ಸಿ ಯ ಕತೆನೂ ಇದೆ. ಭೂಗತ ಲೋಕದ ಚಿತ್ರಣವು ಇಲ್ಲಿದೆ.
ಮದರ್ ಪ್ರಾಮಿಸ್ ಚಿತ್ರ ಜುಲೈ-10 ರಂದು ರಿಲೀಸ್ ಆಗಿತ್ತು. ಸಿಂಗಲ್ ಥಿಯೇಟರ್ ಅಲ್ಲಿ ಪ್ರದರ್ಶನ ಕಂಡ ಮೂರು ತಿಂಗಳ ಬಳಿಕ ಈ ಚಿತ್ರ ಒಟಿಟಿಗೆ ಕಾಲಿಡುತ್ತಿದೆ.
ಮದರ್ ಪ್ರಾಮಿಸ್ ಚಿತ್ರ ಒಟಿಟಿಗೆ ಬಂದಿದೆ. ಅಕ್ಟೋಬರ್-2 ರಿಂದ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾ ತಂಡ ಈ ಮಾಹಿತಿಯನ್ನ ಅಧಿಕೃತವಾಗಿಯೆ ಕೊಟ್ಟಿದೆ.
ಮದರ್ ಪ್ರಾಮಿಸ್ ಚಿತ್ರವನ್ನ ಡಾಲಿ ಧನಂಜಯ್ ಗೆಳೆಯ ಪೂರ್ಣಚಂದ್ರ ಮೈಸೂರು ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ್, ಪೂರ್ಣಚಂದ್ರ ಮೈಸೂರು, ಮಹಾದೇವ್ ಪ್ರಸಾದ್, ವಿನಯಾ ಪ್ರಸಾದ್ ನಟಿಸಿದ್ದಾರೆ.
ಸ್ಟ್ರೀಮಿಂಗ್ ಎಲ್ಲಿ? ಯಾವಾಗ?
(ಚಿತ್ರ ಕೃಪೆ: ಮದರ್ ಪ್ರಾಮಿಸ್ ಸಿನಿಮಾ ಟೀಮ್)
ವಿನಯಾ ಪ್ರಸಾದ್ ಇಲ್ಲಿ ಡಾಲಿಯ ಅಮ್ಮನಾಗಿಯೇ ನಟಿಸಿದ್ದಾರೆ. ಹಿರಿಯ ನಟಿ ಗೀತಾ, ಚಿ.ಗುರುದತ್ ಈ ಚಿತ್ರದಲ್ಲಿ ನಟಿಸಿದ್ದಾರೆ. ನವನೀತ್ ಶ್ಯಾಮ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಭೂಗತ ಲೋಕ ಇದೆ. ಆದರೆ, ಇದು ಕಾಲ್ಪನಿಕ ಲೋಕವೇ ಆಗಿದೆ. ಇದರಲ್ಲಿಯೇ ಇಬ್ಬರು ಡಾನ್‌ಗಳು ಇರ್ತಾರೆ. ಒಬ್ಬ ಸಾಫ್ಟ್ ಸ್ವಭಾವದ ಗ್ಯಾಂಗ್‌ಸ್ಟ್ ರೊಸ್ಸಿ ಇರ್ತಾರೆ.
ದೊನ್ನೆ ಬಿರಿಯಾನಿ ಅನ್ನುವ ಮತ್ತೊಬ್ಬ ಡಾನ್ ಇರ್ತಾನೆ. ಆದರೆ, ಜೂಜುಕೋರನೊಬ್ಬ 20 ಲಕ್ಷ ರೂಪಾಯಿ ಸಾಲ ಮಾಡಿ, ಈ ಇಬ್ಬರು ಡಾನ್‌ಗಳ ನಡುವೆ ಸಿಲುಕಿಕೊಳ್ಳುತ್ತಾನೆ.
ಈ ಚಿತ್ರವನ್ನ ಡಾಲಿ ಧನಂಜಯ್ ಗೆಳೆಯ ಪೂರ್ಣಚಂದ್ರ ಡೈರೆಕ್ಷನ್ ಮಾಡಿದ್ದಾರೆ. ಕ್ರೈಂ ಜಾನರ್ ಅಲ್ಲಿ ಹಾಸ್ಯ ಮತ್ತು ತಾಯಿಯ ಮಾತಿನ ಪಾವಿತ್ರ್ಯತೆಯನ್ನು ಒಟ್ಟಿಗೆ ತರೋದು ಸವಾಲಿನ ಕೆಲಸವಾಗಿತ್ತು.
ಇದೀಗ ಈ ಚಿತ್ರ ಒಟಿಟಿಗೆ ಬರ್ತಿದೆ. ಇಲ್ಲಿ ಇದು ದೊಡ್ಡಮಟ್ಟದಲ್ಲಿಯೇ ಪ್ರೇಕ್ಷಕರನ್ನ ತಲುಪುತ್ತದೆ ಅನ್ನುವ ನಿರೀಕ್ಷೆ ಇದೆ ಅಂತಲೇ ಪೂರ್ಣಚಂದ್ರ ಮೈಸೂರು ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













