IND vs WI: ಭಾರತದ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿದ ವಿಂಡೀಸ್! ODI ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕೆರಿಬಿಯನ್ನರು | ಕ್ರೀಡಾ ಸುದ್ದಿ | ACTPnews

ಭಾರತ vs ವೆಸ್ಟ್ ಇಂಡೀಸ್


Last Updated:

ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಪ್ರಚಂಡ ರನ್ ಮಳೆ ಹರಿಸಿದ್ದಾರೆ. ಭಾರತದ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ ಕೆರಿಬಿಯನ್ನರು, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 405 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

 ಭಾರತ vs ವೆಸ್ಟ್ ಇಂಡೀಸ್
ಭಾರತ vs ವೆಸ್ಟ್ ಇಂಡೀಸ್

ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 2ನೇ ಏಕದಿನ (ODI) ಪಂದ್ಯದಲ್ಲಿ ಕೆರಿಬಿಯನ್ ಬ್ಯಾಟರ್‌ಗಳು ಐತಿಹಾಸಿಕ ಬ್ಯಾಟಿಂಗ್ ಅಬ್ಬರ ಪ್ರದರ್ಶಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಮೂವರು ಬ್ಯಾಟರ್‌ಗಳು ಸಿಡಿಲಬ್ಬರದ ಶತಕಗಳ ನೆರವಿನಿಂದ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್​ಗಳಿಸಿದೆ. ಇದು ಏಕದಿನ ಇತಿಹಾಸದಲ್ಲೇ ಕೆರಿಬಿಯನ್ನರ ಗರಿಷ್ಠ ಮೊತ್ತವಾಗಿದೆ. ಇದುವರೆಗೂ 2 ಬಾರಿಯ ವಿಶ್ವಚಾಂಪಿಯನ್ ಆಗಿರುವ ವಿಂಡೀಸ್ 400ರ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಇಂದು ಹೋಪ್ (104), ಕ್ಯಾಂಪ್​ಬೆಲ್ (101) ಹಾಗೂ ಅಮೀರ್ ಜಂಗೋ (114) ಶತಕಗಳ ನೆರವಿನಿಂದ ಐತಿಹಾಸಿಕ ದಾಖಲೆ ಸಾಧ್ಯವಾಯಿತು.

ಭಾರತದ ನಾಯಕ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ನಿರ್ಧಾರವನ್ನು ಕೆರಿಬಿಯನ್ ಬ್ಯಾಟರ್‌ಗಳು ಸಂಪೂರ್ಣವಾಗಿ ತಲೆಕೆಳಗಾಗಿಸಿದರು. ಭಾರತದ ಯಾವುದೇ ಬೌಲರ್ ಕೂಡ ವಿಂಡೀಸ್ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟರ್ ಕೇಸಿ ಕಾರ್ಟಿ (9) ವಿಕೆಟ್ ಬೇಗ ಪಡೆದರೂ, ಭಾರತ ವಿಂಡೀಸ್ ರನ್ಗತಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 79 ಎಸೆತಗಳಲ್ಲಿ 110 ರನ್​ಗಳ ಜೊತೆಯಾಟ ನಡೆಸಿದರು.

ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಾನ್ ಕ್ಯಾಂಪ್​ಬೆಲ್ 68 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್​ಗಳ ಸಹಿತ 101 ರನ್​ಗಳಿಸಿದರು. ನಂತರ ಬಂದ ಅಮೀರ್ ಜಂಗೋ ನಾಯಕ ಶಾಯ್ ಹೋಪ್ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ 131 ಎಸೆತಗಳಲ್ಲಿ 182 ರನ್​ಗಳ ಜೊತೆಯಾಟ ನಡೆಸಿದರು. ಅಬ್ಬರಿಸಿದ ಹೋಪ್ 94 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್​ಗಳ ಸಹಿತ 104 ರನ್​ಗಳಿಸಿದರೆ, ಜಂಗೋ 77 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ಗಳ ಸಹಿತ 114 ರನ್​ಗಳಿಸಿದರು.

ಕೊನೆಯಲ್ಲಿ ರೋಸ್ಟನ್ ಚೇಸ್ 25 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಅಜೇಯ 29 ರನ್​ಗಳಿಸಿ ತಂಡದ ಮೊತ್ತವನ್ನ 400ರ ಗಡಿ ದಾಟಿಸಿದರು. ಶಮರ್ ಜೋಸೆಫ್ 8 ಎಸೆತಗಳಲ್ಲಿ ಅಜೇಯ 14 ರನ್​ಗಳಿಸಿದರು. ಅಲ್ಜಾರಿ ಜೋಸೆಫ್ 8, ಕೀಮೋ ಪಾಲ್ 3 ರನ್​ಗಳಿಸಿದರು.

ಭಾರತದ ಪರ ಕುಲ್ದೀಪ್ ಯಾದವ್ 65ಕ್ಕೆ2, ರವೀಂದ್ರ ಜಡೇಜಾ 75ಕ್ಕೆ2, ಗುರ್ನೂರ್ ಬ್ರಾರ್ 86ಕ್ಕೆ2 ಹಾಗೂ ಪ್ರಸಿದ್ಧ್ ಕೃಷ್ಣ 45ಕ್ಕೆ1 ವಿಕೆಟ್ ಪಡೆದರು. ಇಂದೇ ಪದಾರ್ಪಣೆ ಮಾಡಿದ ಆಕಿಬ್ ನಬಿ ಕೇವಲ 8.4 ಓವರ್​ಗಳಲ್ಲಿ 84 ರನ್​ ಬಿಟ್ಟುಕೊಟ್ಟು ದುಬಾರಿಯಾದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports