Last Updated:
ಕರ್ನಾಟಕದಲ್ಲಿ 4,699 ಸರ್ಕಾರಿ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ ಹೊರಡಿಸಿದೆ. FDA, SDA ಸೇರಿದಂತೆ ಗ್ರೂಪ್-C ಹುದ್ದೆಗಳಿಗೆ 10ನೇ ತರಗತಿ, PUC, ಡಿಪ್ಲೊಮಾ, ಪದವಿ ಆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ 29-09-2026 ರಿಂದ ಆರಂಭಗೊ
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ (Job) ಕನಸು ಕಾಣುತ್ತಿರುವ ಹತ್ತಾರು ಲಕ್ಷ ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಕ್ಷರಶಃ ಜಾಕ್‌ಪಾಟ್ ಸುದ್ದಿಯೊಂದನ್ನು ನೀಡಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 4,699 ತಾಂತ್ರಿಕ, ತಾಂತ್ರಿಕೇತರ ಹಾಗೂ ಎಫ್‌ಡಿಎ (FDA), ಎಸ್‌ಡಿಎ (SDA) ಸೇರಿದಂತೆ ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗಕ್ಕಾಗಿ ಕಾತರದಿಂದ ಕಾಯುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ವಿದ್ಯಾರ್ಹತೆಗಳಿಗೆ ತಕ್ಕಂತೆ ಹುದ್ದೆಗಳನ್ನು ವರ್ಗೀಕರಿಸಲಾಗಿದೆ. ಒಟ್ಟು 4,699 ಹುದ್ದೆಗಳಲ್ಲಿ ಹೈದರಾ ಕರ್ನಾಟಕ ಮತ್ತು ವಲಯವಾರು ಹುದ್ದೆಗಳ ಹಂಚಿಕೆ ಹೀಗಿದೆ.
ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: ಒಟ್ಟು 2,062
ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳು: ಒಟ್ಟು 216
ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: ಒಟ್ಟು 2,421
SC/ST ಅಭ್ಯರ್ಥಿಗಳಿಗೆ: 5 ವರ್ಷಗಳ ವಯೋಮಿತಿ ಸಡಿಲಿಕೆ
ಆನ್‍ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29-09-2026
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-10-2026
ಸರ್ಕಾರಿ ನೌಕರಿಯ ಗ್ಯಾರಂಟಿ ಪಡೆಯಲು ಇದೊಂದು ಅದ್ಭುತ ಚಾನ್ಸ್ ಆಗಿದ್ದು, ಕೊನೆಯ ದಿನದ ತನಕ ಕಾಯದೆ ಈಗಲೇ KEA ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಒಳ್ಳೆಯದು. ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಖಚಿತಪಡಿಸಿಕೊಳ್ಳಿ.














