Namma Metro: ₹1,274 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಎಲ್ಲಾ ನಿಲ್ದಾಣಗಳಿಗೂ ‘ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್’; ಅವಘಡಗಳಿಗೆ ಬಿಗ್ ಬ್ರೇಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನಮ್ಮ ಮೆಟ್ರೋ (ಸಂಗ್ರಹ ಚಿತ್ರ)


Last Updated:

ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ 1,274 ಕೋಟಿ ರೂ. ವೆಚ್ಚದಲ್ಲಿ 191 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲು ಅಳವಡಿಸಲು BMRCL ನಿರ್ಧಾರ.

ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)

ಬೆಂಗಳೂರಿನ (Bengaluru) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುಡ್​​ನ್ಯೂಸ್ ನೀಡಿದೆ. ಅದೇನು ಅಂದರೆ, ನಮ್ಮ ಮೆಟ್ರೋದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (Platform Screen Door) ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 1,274 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ.

ಸದ್ಯ ನಮ್ಮ ಮೆಟ್ರೋ ಈಗಾಗಲೇ ಇರುವ ನಿಲ್ದಾಣಗಳು ಹಾಗೂ ಮುಂಬರುವ ನಿರ್ಮಾಣಗಳು ಸೇರಿ ಒಟ್ಟು 191 ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಬಾಗಿಲು ಅಳವಡಿಸಲು ಬಿಎಂಆರ್​ಸಿಎಲ್ ಮುಂದಾಗಿದೆ. ಪಿಂಕ್ ಲೈನ್​​ನ 12 ಭೂಗತ ನಿಲ್ದಾಣ ಹಾಗೂ 2 ಎತ್ತರಿಸಿದ ನಿಲ್ದಾಣಗಳು ಸೇರಿ ಒಟ್ಟು 14 ನಿಲ್ದಾಣಗಳಲ್ಲಿ ಈ ಬಾಗಿಲುಗಳನ್ನು ಅಳವಡಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 10 ಲಕ್ಷಕ್ಕೆ ತಲುಪಿದೆ. ಆದರೆ ಇದರ ನಡುವೆಯೇ ಕಳೆದ ಎರಡ್ಮೂರು ವರ್ಷಗಳಲ್ಲಿ ಮೆಟ್ರೋ ಹಳಿಗೆ ಹಾರುವ ಅಥವಾ ಆಕಸ್ಮಿಕವಾಗಿ ಜಾರಿ ಬೀಳುವ ಪ್ರಕರಣಗಳು ಹೆಚ್ಚಾಗಿದೆ. 2024ರಲ್ಲಿ ಬರೋಬ್ಬರಿ ಎಂಟು ಬಾರಿ ಅನಧಿಕೃತವಾಗಿ ಹಳಿ ಪ್ರವೇಶ ಮಾಡುವ ಪ್ರಕರಣ, 7 ಆತ್ಮಹತ್ಯೆ ಪ್ರಕರಣಗಳು, 2 ಆತ್ಮಹತ್ಯೆ ಪ್ರಯತ್ನಗಳು ಹಾಗೂ ಎರಡು ಆಕಸ್ಮಿಕ ಬೀಳುವಿಕೆ ಪ್ರಕರಣಗಳು ವರದಿಯಾಗಿದೆ.

ಉಳಿದಂತೆ 2025ರಲ್ಲಿ ಐದು ಅನಧಿಕೃತ ಪ್ರವೇಶ, ಐದು ಆತ್ಮಹತ್ಯೆ ಹಾಗೂ ಎರಡು ಆತ್ಮಹತ್ಯೆ ಪ್ರಯತ್ನ ಸೇರಿದಂತೆ ಇತರ ಪ್ರಕರಣಗಳು ವರದಿಯಾಗಿದೆ. ಈ ಸಮಸ್ಯೆಗಳನ್ನು ತಡೆಯಲು ಪ್ಲಾಟ್ ಫಾರ್ಮ್ ಸ್ಕ್ರೀನ್ ಬಾಗಿಲುಗಳು ಅಳವಡಿಸಲು ಬಿಎಂಆರ್​​ಸಿಎಲ್ ಮುಂದಾಗಿದೆ.

ಸದ್ಯ ನಮ್ಮ ಮೆಟ್ರೋದ ಹಂತ-1, ಹಂತ 2, 2ಎ, 2ಬಿ, 3 ಮತ್ತು 3ಎ ಯೋಜನೆಯ ಎಲ್ಲಾ ನಿಲ್ದಾಣಗಳಲ್ಲಿ ಈ ಯೋಜನೆ ಜಾರಿ ಆಗಲಿದೆ. ಎತ್ತರಿಸಿದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅರ್ಧ ಎತ್ತರಿಸಿದ ಬಾಗಿಲು ಮತ್ತು ಭೂಗತ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದ ಎತ್ತರದ ಬಾಗಿಲುಗಳನ್ನು ಅಳವಡಿಸಲು ಬಿಎಂಆರ್​ಸಿಎಲ್ ಮುಂದಾಗಿದೆ.

ನಮ್ಮ ಮೆಟ್ರೋ ನಿಲ್ದಾಣ (ಸಂಗ್ರಹ ಚಿತ್ರ)

ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಅಳವಡಿಕೆ ಮಾಡುವುದರಿಂದ ಆಕಸ್ಮಿಕವಾಗಿ ಜಾರಿ ಬೀಳುವ ಹಾಗೂ ಆತ್ಮಹತ್ಯೆಗೆ ಯತ್ನಿಸುವ ಅಥವಾ ಅನಧಿಕೃತವಾಗಿ ಮೆಟ್ರೋ ಹಳಿ ಪ್ರವೇಶವನ್ನು ತಡೆಯಬಹುದಾಗಿದೆ. ಏಕೆಂದರೆ ಮುಂಬರುವ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಬಹುತೇಕ ಚಾಲಕ ರಹಿತ ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಲಿದೆ. ಇನ್ನು ಮೆಟ್ರೋ ನಿಲ್ದಾಣದಲ್ಲಿ ಶಬ್ದ, ಗಾಳಿ, ಸ್ವಚ್ಛತೆಯ ನಿಯಂತ್ರಣ ಮಾಡಲು ಕೂಡ ಸಹಕಾರಿಯಾಗಲಿದೆ. ವಿಶೇಷ ಎಂದರೇ, ಈ ಮೆಟ್ರೋ ಬಾಗಿಲುಗಳ ಮೇಲೆ ಜಾಹೀರಾತು ನೀಡುವ ಮೂಲಕ ಮೆಟ್ರೋ ಹೆಚ್ಚುವರಿಯಾಗಿ ಆದಾಯ ಕೂಡ ಪಡೆದುಕೊಳ್ಳಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed