Actress: 12 ವರ್ಷಗಳ ಬಳಿಕ ಮತ್ತೆ ಹಸೆಮಣೆ ಏರಲಿರುವ 41 ವರ್ಷದ ಖ್ಯಾತ ನಟಿ; ಸಿಂಗಾಪುರ ಉದ್ಯಮಿಯೊಂದಿಗೆ ವಿವಾಹ | | ACTPnews

ಜೆನ್ನಿಫರ್ ವಿಂಗೆಟ್


Last Updated:

ಈಗ 41 ವರ್ಷದ ಜೆನ್ನಿಫರ್ ವಿಂಗೆಟ್ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಮನರಂಜನಾ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಲವು ವರ್ಷಗಳಿಂದ ಒಂಟಿಯಾಗಿದ್ದ ನಟಿ ಇದೀಗ ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಜೆನ್ನಿಫರ್ ವಿಂಗೆಟ್
ಜೆನ್ನಿಫರ್ ವಿಂಗೆಟ್

ಜೆನ್ನಿಫರ್ ವಿಂಗೆಟ್ (Jennifer Winget) ಹಿಂದಿ ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ಅವರು, ಕಳೆದ ಹಲವು ವರ್ಷಗಳಿಂದ ತಮ್ಮ ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನದ ಮೇಲೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಇದೀಗ ಅವರ ಎರಡನೇ ಮದುವೆ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮನರಂಜನಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜೆನ್ನಿಫರ್ ವಿಂಗೆಟ್ ಅವರಿಗೆ ಬಾಲ್ಯದಿಂದಲೇ ಅಭಿನಯದ ಮೇಲೆ ಅಪಾರ ಆಸಕ್ತಿ ಇತ್ತು. ಬಾಲನಟಿಯಾಗಿ ಅಕೇಲೆ ಹಮ್ ಅಕೇಲೆ ತುಮ್, ರಾಜಾ ಕೀ ಆಯೇಗಿ ಬಾರಾತ್ ಹಾಗೂ ರಾಜಾ ಕೋ ರಾಣಿ ಸೇ ಪ್ಯಾರ್ ಹೋ ಗಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲ್ಯದಲ್ಲೇ ಕ್ಯಾಮೆರಾ ಎದುರು ನಿಂತ ಅವರು ನಂತರ ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು.

ಜೆನ್ನಿಫರ್ ಅಭಿನಯದ ಶಕಲಕ ಬೂಮ್ ಬೂಮ್, ಕಸೌತಿ ಜಿಂದಗಿ ಕೇ, ಕ್ಯಾ ಹೋಗಾ ನಿಮ್ಮೋ ಕಾ, ಕಹೀ ತೋ ಹೋಗಾ, ಸರಸ್ವತಿ ಚಂದ್ರ ಹಾಗೂ ಬೇಹದ್ ಧಾರಾವಾಹಿಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ವಿಶೇಷವಾಗಿ ಬೇಹದ್ ಧಾರಾವಾಹಿಯಲ್ಲಿನ ಅವರ ಅಭಿನಯಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ ಮದುವೆಯಾದ ಎರಡು ವರ್ಷಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ, 2014ರಲ್ಲಿ ವಿಚ್ಛೇದನ ಪಡೆದರು. ಬಳಿಕ ಕರಣ್ ಸಿಂಗ್ ಗ್ರೋವರ್ ನಟಿ ಬಿಪಾಶಾ ಬಸು ಅವರನ್ನು ವಿವಾಹವಾದರೆ, ಜೆನ್ನಿಫರ್ ತಮ್ಮ ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಿದರು. ಕಳೆದ 12 ವರ್ಷಗಳಿಂದ ಅವರು ಯಾವುದೇ ಸಂಬಂಧ ಅಥವಾ ಮದುವೆ ಕುರಿತಾಗಿ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ.

ಬಾಂಬೆ ಟೈಮ್ಸ್ ವರದಿ ಪ್ರಕಾರ, ಜೆನ್ನಿಫರ್ ಸಿಂಗಾಪುರ ಮೂಲದ ಉದ್ಯಮಿ ವಿಲಿಯಂ ಇಷ್ಮಾಯೆಲ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಇದೇ ಜುಲೈ 16ರಂದು ಈ ವಿವಾಹ ನೆರವೇರಲಿದೆ ಎಂದು ವರದಿಯಾಗಿದೆ.

ಹಾಗೆಯೇ ಈ ಮದುವೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅತ್ಯಂತ ಖಾಸಗಿ ರೀತಿಯಲ್ಲಿ ನಡೆಯಲಿದ್ದು, ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ವಿಲಿಯಂ ಇಷ್ಮಾಯೆಲ್ ಸಿಂಗಾಪುರ ಮೂಲದ ಉದ್ಯಮಿಯಾಗಿದ್ದು, ಹಲವು ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed