Last Updated:
ಭಾನುವಾರ ಮೇ 17ರಂದು ಬೆಳಗ್ಗೆ 7ರಿಂದ 9ರವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಿಂದ ಕಬ್ಬನ್ ಪಾರ್ಕ್ ವರೆಗೆ ಸೇವೆ ಸ್ಥಗಿತ, ಉಳಿದ ಮಾರ್ಗಗಳು ಎಂದಿನಂತೆ.
ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ (Bengaluru) ಲೈಫ್‍ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ (Sunday) ಬೆಳಗ್ಗೆ ಒಂದು ಪ್ರಮುಖ ಶಾಕ್ ಕಾದಿದೆ. ನೀವು ಮೇ 17 ರಂದು ಪರ್ಪಲ್ ಲೈನ್ (ನೇರಳೆ ಮಾರ್ಗ) ಮೂಲಕ ಎಲ್ಲಾದರೂ ಪ್ರಯಾಣಿಸಲು ಪ್ಲಾನ್ ಮಾಡಿಕೊಂಡಿದ್ದರೆ, ತಕ್ಷಣ ನಿಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಬೆಂಗಳೂರು ಮೆಟ್ರೋ ರೈಲು (Train) ನಿಗಮ ಲಿಮಿಟೆಡ್ (BMRCL) ಭಾನುವಾರ ಬೆಳಗ್ಗೆ ಮೆಟ್ರೋ ಸೇವೆಗಳನ್ನು ದಿಢೀರ್ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಈ ನಿರ್ವಹಣಾ ಕೆಲಸದಿಂದಾಗಿ ಭಾನುವಾರ ಬೆಳಗ್ಗಿನ ಅವಧಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ನಡುವೆ ಯಾವುದೇ ಮೆಟ್ರೋ ರೈಲುಗಳು ಸಂಚರಿಸುವುದಿಲ್ಲ.
ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ಮೆಟ್ರೋದ ಇತರ ಭಾಗಗಳಲ್ಲಿ ಎಂದಿನಂತೆ ಸೇವೆ ಲಭ್ಯವಿರಲಿದೆ.
ಪರ್ಪಲ್ ಲೈನ್‍ನಲ್ಲಿ ಚಲ್ಲಘಟ್ಟದಿಂದ ವಿಜಯನಗರಕ್ಕೆ ಮತ್ತು ಎಂಜಿ ರಸ್ತೆಯಿಂದ ವೈಟ್‍ಫೀಲ್ಡ್ (ಕಾಡುಗೋಡಿ) ವರೆಗೆ ರೈಲುಗಳು ಓಡಾಡಲಿವೆ.
ಹಸಿರು ಮಾರ್ಗ (ಮದವಾರದಿಂದ ಸಿಲ್ಕ್ ಇನ್‍ಸ್ಟಿಟ್ಯೂಟ್) ಹಾಗೂ ಹಳದಿ ಮಾರ್ಗಗಳು (ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರ) ವೇಳಾಪಟ್ಟಿಯಂತೆಯೇ ಕಾರ್ಯನಿರ್ವಹಿಸಲಿವೆ.
Bangalore [Bangalore],Bangalore,Karnataka
May 16, 2026 11:49 AM IST













